ಚಿಕ್ಕಬಳ್ಳಾಪುರ: ಹೋಟೆಲ್ ಮಾಲಿಕನೊಬ್ಬ ನೇಣಿಗೆ ಶರಣಾಗಿರುವ (Suicide) ಘಟನೆ ನಗರದ ಬಿಬಿ ರಸ್ತೆಯ ರಘು ಮಿಲ್ಟ್ರಿ ಹೋಟೆಲ್ ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವಾತನನ್ನು ರಘು ಮಿಲ್ಟ್ರಿ ಹೋಟೆಲ್ ನ ಮಾಲಿಕ ಮಂಡ್ಯ ಜಿಲ್ಲೆಯ ಮದ್ದೂರು ಮೂಲದ 40 ವರ್ಷದ ನಂದಗೌಡ ಎಂದು ಗುರ್ತಿಸಲಾಗಿದೆ.
ಈತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಶನಿವಾರ ರಾತ್ರಿ ಹೋಟೆಲ್ ಬಂದ್ ಮಾಡಿದ ನಂತರ ಹೋಟೆಲ್ ನಲ್ಲಿಯೇ ಮಲಗಿದ್ದಾನೆ. ಆದರೆ ಮುಂಜಾನೆ ಹೋಟೆಲ್ ತೆಗೆಯದೆ ಇದ್ದಾಗ ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲಾ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.