ದೊಡ್ಡಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಪ್ರಭಾರ ಅಧ್ಯಕ್ಷರಾಗಿ ಕಂಚಿಗನಾಳ ಲಕ್ಷ್ಮೀನಾರಾಯಣ್ ಆಯ್ಕೆಯಾಗಿದ್ದಾರೆ.
ಮಾರೇಗೌಡ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಬಾಕಿ ಇರುವುದರಿಂದ ಕಂಚಿಗನಾಳ ಲಕ್ಷ್ಮೀನಾರಾಯಣ್ ಅವರನ್ನು ಮುಂದಿನ ಚುನಾವಣೆ ಆಯ್ಕೆ ಪ್ರಕ್ರಿಯೆ ವರೆಗ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಪ್ರಭಾರ ಅಧ್ಯಕ್ಷರನ್ನು ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಹೆಚ್.ಅಪ್ಪಯ್ಯಣ್ಣ, ಎ. ನರಸಿಂಹಯ್ಯ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಡಾ.ವಿಜಯ್ ಕುಮಾರ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ, ನಗರಸಭೆ ಸದಸ್ಯ ಪದ್ಮನಾಭ, ವಕೀಲರಾದ ಮುರುಳೀಧರ್, ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ಸುಣ್ಣಗಟ್ಟಹಳ್ಳಿ ಮಂಜಣ್ಣ, ತಿರುಮಗೊಂಡಹಳ್ಳಿ ಅಶೋಕ್, ಕೊನಘಟ್ಟ ಆನಂದ್, ಕುರುಬಗಡರೆ ಮುರುಳೀಧರ್, ಮೆಳೇಕೋಟೆ ಕ್ರಾಸ್ ಮಂಜುನಾಥ್, ಕೆಂಪೇಗೌಡ, ಅಂಚರಹಳ್ಳಿ ಆನಂದ್ ಅಭಿನಂದನೆ ಸಲ್ಲಿಸಿದರು.