ಚಿಕ್ಕಬಳ್ಳಾಪುರ: ಫೆಂಗಲ್ ಸೈಕ್ಲೋನ್ (Cyclone Fengal) ಅಬ್ಬರ ಎಲ್ಲೆಡೆ ಮುಂದುವರೆದಿದ್ದು, ಚಿಕ್ಕಬಳ್ಳಾಪುರದಲ್ಲಿ ಜಡಿ ಮಳೆಯಾಗುತ್ತಿದೆ. ವಿಪರೀತ ಚಳಿಯೂ ಇದೆ. ಇನ್ನೂ ಇಂದು ಚಿಕ್ಕಬಳ್ಳಾಪುರ ನಗರದಿಂದ ಮೂಷ್ಟೂರು ಮಾರ್ಗದ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ರವೀಂದ್ರ ಅವರ ನಿವಾಸದ ರಸ್ತೆಯಲ್ಲೇ ಬೃಹತ್ ಮರವೊಂದು ದಿಢೀರ್ ಧರೆಗುರುಳಿದೆ.
ಈ ರಸ್ತೆಯಲ್ಲಿ ಒಂದರ ಹಿಂದೆ ಒಂದು ವಾಹನಗಳು ಸದಾ ಸಂಚಾರ ಮಾಡ್ತಿದ್ದು ವಾಹನದಟ್ಟಣೆ ಇರ್ತಿತ್ತು…ಆದ್ರೆ ಇಂದು ಅದೃಷ್ಟವಶಾತ್ ಮರ ಬುಡಸಮೇತ ಉರುಳಿದ್ದು ಯಾವುದೇ ವಾಹನಗಳ ಒಡಾಟ ಇರಲಿಲ್ಲ, ಇದ್ರಿಂದ ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.
ಇದನ್ನೂ ಓದಿ: Cyclone Fengal: ನಾಳೆ ಕೂಡ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ..! ನಮಗಿಲ್ವಾ..? ಅಂತಾವ್ರೆ ಈ ಜಿಲ್ಲೆಯ ಮಕ್ಕಳು..
ವಿಷಯ ತಿಳಿದು ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಮಾಡುವ ಕಾಯಕ ನಡೆಸಿದ್ದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದೇ ರಸ್ತೆಯಲ್ಲಿ ಮತ್ತಷ್ಟು ಮರಗಳು ಧರೆಗೆ ಉರುಳುವ ಅಪಾಯ ಇದ್ದು ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡುವಂತೆ ನಾಗರೀಕರು ಆಗ್ರಹಿಸಿದ್ದಾರೆ.