Site icon ಹರಿತಲೇಖನಿ

Cyclone Fengal ಎಫೆಕ್ಟ್: ಇಂದು ಬೆಂ.ಗ್ರಾ.ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಮಾತ್ರ ರಜೆ ಘೋಷಣೆ

Doddaballapura Taluk Coordinator Post

Doddaballapura Taluk Coordinator Post

ಬೆಂ.ಗ್ರಾ.ಜಿಲ್ಲೆ: Cyclone Fengal ಚಂಡಮಾರುತದ ಎಫೆಕ್ಟ್‌ನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಜಡಿ ಮಳೆ ಹಾಗೂ ಶೀತಗಾಳಿಯ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ಶಿವಶಂಕರ್ ಸೋಮವಾರ ರಜೆ ಘೋಷಿಸಿದ್ದಾರೆ.

ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತವೆ.

ಬಂಗಾಳಕೊಲ್ಲಿ, ತಮಿಳುನಾಡಿನಲ್ಲಿ ಬೀಸುತ್ತಿರುವ ಚಂಡಮಾರುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಪರಿಣಾಮ ಬೀರಿದ್ದು, ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಶೀತಗಾಳಿ ಬೀಸುತ್ತಿದೆ. ಶನಿವಾರ ರಾತ್ರಿಯಿಂದ ಜಿಟಿ ಜಿಟಿ ಮಳೆಯಾಗುತ್ತಿದೆ.

ಶೀತ ಗಾಳಿ ಹಾಗೂ ತುಂತುರು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸದಾ ಜನಸಂದಣಿಯಿರುವ ರಸ್ತೆಗಳಲ್ಲಿ ಬಿಕೋ ಎನ್ನುತ್ತಿದ್ದವು. ಶೀತಗಾಳಿಗೆ ತತ್ತರಿಸಿರುವ ಸಾರ್ವಜನಿಕರು ಉಡುಪುಗಳಿಗೆ ಮೊರೆ ಹೋಗಿರುವ ಜನರು ಜಿಟಿ ಮಳೆಯಿಂದ ದಿನನಿತ್ಯದ ಕೆಲಸಗಳಿಗೆ ಮನೆಯಿಂದ ತೆರಳುತ್ತಿರುವುದು ಮಾಮೂಲಿಯಾಗಿದೆ.

Exit mobile version