ದೈನಂದಿನ ರಾಶಿ ಭವಿಷ್ಯ: ಸೋಮವಾರ, ಡಿಸೆಂಬರ್.02, 2024| astrology.. Be careful while driving
ಮೇಷ ರಾಶಿ: ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿದರೆ ನಿಮ್ಮ ಕಾರ್ಯ ದಕ್ಷತೆ ಹೆಚ್ಚಾಗಬಹುದು. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೊಡುಗೆ ನೀಡುತ್ತೀರಿ. ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ.
ವೃಷಭ ರಾಶಿ: ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಲಾಭವಾಗಲಿದೆ. ಚಿನ್ನ,ಬೆಳ್ಳಿ ಕೆಲಸ ಮಾಡುವ ವ್ಯಾಪಾರಸ್ಥರಿಗೆ ಕೆಲಸ ಸಿಗಬಹುದು ಇಲ್ಲವೇ ಬೆಲೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಮಿಥುನ ರಾಶಿ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿವಾದ ಹೆಚ್ಚಾಗಬಹುದು. ಅದಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದೂಡುವುದು ಉತ್ತಮ. ಕಚೇರಿಯಲ್ಲಿ ಹೊಸತಂತ್ರದ ಪ್ರಯೋಗ ಮಾಡುವಿರಿ ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ.
ಕಟಕ ರಾಶಿ: ಹಣಕ್ಕೆ ಸಂಬಂಧಿಸಿದ ಕೆಲಸ ಮಾಡುವಾಗ ಚಿಂತನಶೀಲವಾಗಿ ಕೆಲಸ ಮಾಡಿ. ನಿಮ್ಮ ಕೋಪವನ್ನು ಸಹ ನಿಯಂತ್ರಿಸಿ. ಹೊರಾಂಗಣ ಚಟುವಟಿ ಕೆಗಳನ್ನು ಮುಂದೂಡುವುದು ಉತ್ತಮ. ಯಾವುದೇ ರೀತಿಯ ವ್ಯಾಪಾರ ಚಟುವಟಿಕೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.
ಸಿಂಹ ರಾಶಿ: ಪ್ರಸ್ತುತ, ಕೆಲಸದ ಸ್ಥಳ ದಲ್ಲಿ ಚಟುವಟಿಕೆಗಳು ಮೊದಲಿನಂತೆಯೇ ಮುಂದುವರಿಯುತ್ತವೆ. ಕೆಲಸ ಕಾರ್ಯ ಯೋಜಿತ ರೀತಿ ಪೂರ್ಣಗೊಳಿಸಿ.
ಕನ್ಯಾ ರಾಶಿ: ನಿಮ್ಮ ಸ್ವಭಾವದಿಂದಾಗಿ ಜನರು ಸ್ವಾಭಾವಿಕವಾಗಿ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಇತರರ ಹಸ್ತಕ್ಷೇಪ ದಿಂದಾಗಿ, ಸ್ವಲ್ಪ ಸಮಯ ವ್ಯರ್ಥವಾಗುತ್ತದೆ. ವಿರೋಧಿಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು . ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುವುದು.
ತುಲಾ ರಾಶಿ: ಧಾರ್ಮಿಕ ಕಾರ್ಯಗ ಳಿಂದ ಮನಸ್ಸಿಗೆ ನೆಮ್ಮದಿ. ವಿದ್ಯಾರ್ಥಿಗಳು ಅಧ್ಯಯ ನದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ. ಈ ದಿನ ಮಹತ್ತರ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ.
ವೃಶ್ಚಿಕ ರಾಶಿ: ಯಾವುದೇ ಪತ್ರ ವ್ಯವ ಹಾರ ಮಾಡುವಾಗ ಹೆಚ್ಚು ಜಾಗರೂಕರಾ ಗಿರಿ. ಒಂದು ಸಣ್ಣ ತಪ್ಪು ಸಮಸ್ಯೆ ಉಂಟು ಮಾಡಬಹುದು. ಈ ದಿನದ ಕ್ಲಿಷ್ಟಕರ ಸನ್ನಿವೇಶವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ.
ಧನಸ್ಸು ರಾಶಿ: ಹಣಕ್ಕೆ ಸಂಬಂಧಿಸಿದಂತೆ ನಿಧಾನಗತಿಯ ಪ್ರಗತಿ. ಪತಿ-ಪತ್ನಿ ನಡುವೆ ಉತ್ತ ಮ ಬಾಂಧವ್ಯ. ನೆರೆಹೊ ರೆಯವರೊಂದಿಗಿನ ಸಂ ಬಂಧದಲ್ಲಿ ಸುಧಾರಣೆ. ಹಿತಶತ್ರುಗಳ ಬಗ್ಗೆ ಎಚ್ಚರದಿಂದ ಇರಿ.
ಮಕರ ರಾಶಿ: ಆದಾಯದಲ್ಲಿ ಸ್ವಲ್ಪ ಇಳಿಕೆಯಾಗಬಹುದು. ವ್ಯಾಪಾರ ಚಟುವಟಿಕೆ ಗಳಿಗೆ ಸಂಪೂರ್ಣ ಗಮನ ಕೊಡುವುದು ಬಹಳ ಮುಖ್ಯ. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು.
ಕುಂಭ ರಾಶಿ: ಆಸ್ತಿ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಯೋಜನೆ. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮೀನ ರಾಶಿ: ನಿಮ್ಮ ಕಾರ್ಯದಕ ತೆಗೆ ಉದ್ಯೋಗ ಸ್ಥಳದಲ್ಲಿ ಪ್ರಶಂಸೆ. ವ್ಯವಹಾರ ನಿಮಿತ್ತ ಪ್ರಯಾಣದ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.
ರಾಹುಕಾಲ: 07:43 ರಿಂದ 09:16
ಗುಳಿಕಕಾಲ: 01:56 ರಿಂದ 03:29
ಯಮಗಂಡಕಾಲ: 10:49 ರಿಂದ 12:22