ದೊಡ್ಡಬಳ್ಳಾಪುರ: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ರಾಜ್ಯ ಯುವ ಘಟಕ ಅಧ್ಯಕ್ಷರಾಗಿ ಸತೀಶ್ ಅವರನ್ನು ನೇಮಕ (appoint) ಮಾಡಲಾಗಿದೆ.
ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿಎಂ ಬಾಲಾಜಿ ಈ ಕುರಿತು ಘೋಷಿಸಿದರು.
ಇದೇ ವೇಳೆ ರಾಜ್ಯ ಉಪಾಧ್ಯಕ್ಷರಾಗಿ ಅಂಜನ್ ಗೌಡ, ರೂಪೇಶ್, ಸಂಘಟನಾ ಕಾರ್ಯದರ್ಶಿಯಾಗಿ ಭರತ್, ಪವನ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಲಂಕೇಶ್, ಯುವ ವಿದ್ಯಾರ್ಥಿ ಘಟಕ ಅಧ್ಯಕ್ಷರಾಗಿ ವಜ್ರೇಶ್, ರಾಜಾನುಕುಂಟೆ ಅಧ್ಯಕ್ಷರಾಗಿ ಕಿರಣ್, ಜಿಲ್ಲಾ ಕಾರ್ಯದರ್ಶಿಯಾಗಿ ಕೃಷ್ಣ (ಕಿಟ್ಟಿ), ನಿರಂಜನ್, ಯುವ ಘಟಕ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ವಿನಯ್ (ಬಂಟಿ) ಅವರನ್ನು ನೇಮಿಸಲಾಯಿತು.