Site icon ಹರಿತಲೇಖನಿ

Accident: ಕ್ಯಾಂಟರ್ ಹಾಗೂ ಬುಲೆಟ್ ಬೈಕ್ ಡಿಕ್ಕಿ.. ಬೈಕ್ ಸವಾರನ ದಾರುಣ ಸಾವು..!

ಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಬುಲೆಟ್ ಬೈಕ್ ನಡುವೆ ಡಿಕ್ಕಿಯಾಗಿ (Accident) ಬುಲೆಟ್ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರದ ಅಗಲಗುರ್ಕಿ ಗೇಟ್ ಬಳಿ ಸಂಭವಿಸಿದೆ.

ಕಣಿತಹಳ್ಳಿ ಗ್ರಾಮದ ಬೈಕ್ ಸವಾರ ಶಿವಶಂಕರ್(32 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳು ಸಂತೋಷ್ ಎಂಬಾತನನ್ನ ಅಮ್ಮ ಅಂಬ್ಯುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

Exit mobile version