Site icon
Harithalekhani

Suicide: ಬ್ರಹ್ಮಗಂಟು ಧಾರವಾಹಿಯ ಖ್ಯಾತ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ..!

ಹೈದರಾಬಾದ್: ಕನ್ನಡದ ಪ್ರಸಿದ್ಧ ಬ್ರಹ್ಮಗಂಟು ಧಾರವಾಹಿಯ ನಟಿ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು (Suicide) ವರದಿಯಾಗಿದೆ.

ಮದುವೆಯ ನಂತರದಲ್ಲಿ ಕಳೆದೆರಡು ವರ್ಷದಿಂದ ಹೈದ್ರಾಬಾದ್‌ನಲ್ಲಿ ಶೋಭಿತಾ ವಾಸವಾಗಿದ್ದರು. ಶನಿವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಬೆಳಕಿಗೆ ಬಂದಿದೆ.

ಈ ನಿರ್ಧಾರಕ್ಕೆ ಕಾರಣ ಏನು ಎಂಬುವುದು ಸದ್ಯ ನಿಗೂಢವಾಗಿದೆ. ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಹೈದ್ರಾಬಾದ್‌ನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ.

ಮೂಲತಃ ಹಾಸನದ ಸಕಲೇಶಪುರಾದ ಶೋಭಿತಾ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲೂ ಮಿಂಚಿದ್ದರು. ವಂದನಾ, ‘ಅಟೆಂಪ್ಟ್ ಟು ಮರ್ಡರ್, ‘ಜಾಕ್‌ಪಾಟ್’ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಇನ್ನು ಮೀನಾಕ್ಷಿ ಮದುವೆ ಧಾರಾವಾಹಿ, ಕೋಗಿಲೆ, ‘ಗಾಳಿಪಟ, ದೀಪವೂ ನಿನ್ನದೇ ಗಾಳಿಯು ನಿನ್ನದೇ ಧಾರಾವಾಹಿಯಲ್ಲೂ ನಟನೆ ಮಾಡಿದ್ದರು.

Exit mobile version