Site icon ಹರಿತಲೇಖನಿ

ಹರಿತಲೇಖನಿ ದಿನಕ್ಕೊಂದು ಕಥೆ: ಮೂರ್ಖ ಕತ್ತೆ| daily story

daily story: ಒಂದು ಊರಿನಲ್ಲಿ ರಂಗಣ್ಣ ಎಂಬ ಹೆಸರಿನ ಶಿಲ್ಪಿ ವಾಸವಾಗಿದ್ದನು. ಅವನು ತುಂಬಾ ಚೆಂದನೆಯ, ಕುಸುರಿ ಕೆಲಸ ಮಾಡಿ ಶಿಲ್ಪಗಳನ್ನು ಕೆತ್ತಿ ಮಾರಾಟ ಮಾಡುತ್ತಿದ್ದನು. ತನ್ನ ವಿಗ್ರಹಗಳನ್ನು ಹೊರೆಯಲು ಒಂದು ಕತ್ತೆಯನ್ನು ಸಾಕಿಕೊಂಡಿದ್ದನು.

ಒಂದು ದಿನ ದೇವರ ವಿಗ್ರಹವನ್ನು ಕೆತ್ತಿ ಅದನ್ನು ಮಾರಾಟ ಮಾಡಲು ತನ್ನ ಕತ್ತೆಯ ಮೇಲೆ ಹೇರಿಕೊಂಡು ಹೊರಟನು, ಜನರು ದೇವರ ವಿಗ್ರಹವನ್ನು ಕಂಡು ಕೈ ಮುಗಿದು ನಮಸ್ಕರಿಸಿ ಮುಂದಕ್ಕೆ ಹೋಗುತ್ತಿದ್ದರು. ಕತೆಗೆ ಬಹಳ ಜಂಭ ಬಂತು.

ಜನರು ತನ್ನನ್ನು ಗೌರವಿಸಿ, ವಂದಿಸಿ ಮುಂದಕ್ಕೆ ಹೋಗುತ್ತಿದ್ದಾರೆ ಎಂಬ ಭಾವನೆ ಕತೆಯ ಮನಸ್ಸಿನಲ್ಲಿ ಸುಳಿಯಿತು. ಅದು ಮುಂದಕ್ಕೆ ಹೋಗದೆ ನಿಂತಲ್ಲಿ ನಿಂತು ಬಿಟ್ಟಿತು.

ಆಗ ಯಜಮಾನನು ವಿಗ್ರಹವನ್ನು ತಾನೇ ಹೊತ್ತುಕೊಂಡು ಹೊರಟನು, ಜನರು ಕತ್ತೆಯನ್ನು ಬಿಟ್ಟು ಯಜಮಾನನಿಗೆ ನಮಸ್ಕರಿಸಿದರು. ಮೂರ್ಖ ಕತ್ತೆ ! ಮೊದಲು ಅರ್ಥ ಮಾಡಿಕೊಳ್ಳಲಾಗದೆ ಸುಮ್ಮನೆ ನಿಂತೇ ಇತ್ತು.

ನಂತರ ಕತ್ತೆಗೆ ಅರಿವಾಯಿತು. ಜನ ತನ್ನನ್ನು ಗೌರವಿಸುತ್ತಿಲ್ಲ. ತಾನು ಹೊತ್ತು ಕೊಂಡ ದೇವರ ವಿಗ್ರಹಕ್ಕೆ ನಮಿಸುತ್ತಿದ್ದಾರೆ ಎಂದು ಅರಿತುಕೊಂಡಿತು. ಆಗ ಜಂಭವನ್ನು ಬಿಟ್ಟು ತನ್ನ ಪಾಡಿಗೆ ತಾನು ಯಜಮಾನನ ಜೊತೆ ನಡೆಯಲು ಪ್ರಾರಂಭಿಸಿತು.

ಹೀಗೆ ಯಾರೇ ಆಗಲಿ ವಾಸ್ತವವನ್ನು ಅರ್ಥ ಮಾಡಿಕೊಳ್ಳದೇ ಜಂಭ ಪಟ್ಟರೆ ಕತೆಯ ಗತಿ ಬರುವುದು.

ಕೃಪೆ: ಸಾತ್ವಿಕ್ ( ಸಾಮಾಜಿಕ ಜಾಲತಾಣ)

Exit mobile version