ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ನೀಡಿದ ಹೇಳಿಕೆ ಒಪ್ಪುವಂತಹದ್ದಲ್ಲ, ಜಾತಿ ಧರ್ಮಗಳು ಕೆಲ ವಿಚಾರಗಳಲ್ಲಿ ಪ್ರವೇಶ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ನಡೆದ ನಮ್ಮ ಜಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು. ಸ್ವಾಮೀಜಿ ಅವರ ಹೇಳಿಕೆ ತಪ್ಪಾಗಿದೆ. ಈಗಾಗಲೇ ಅವರು ಕ್ಷಮಾಪಣೆ ಕೇಳಿರುವುದು ನಮಗೆಲ್ಲಾ ಸಂತೋಷ ಮೂಡಿಸಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೆಂಕಿ ಹಚ್ಚಿ ಬೀಡಿ ಸೇದಲು ಹೋಗಿದ್ದಾರೆ. ಸ್ವಾಮೀಜಿ ಅವರನ್ನು ಮುಟ್ಟಿದರೆ ಸಮಾಜ ಸುಮ್ಮನೆ ಇರಲ್ಲ ಎಂದಿದ್ದಾರೆ.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಪ್ರಕರಣ ದಾಖಲಾಗಿ ಹತ್ತು ವರ್ಷಗಳ ಕಾಲ ಬೇಲ್‌ಗಾಗಿ ಹೋರಾಟ ಮಾಡಿ ಮತ್ತೆ ಬೇಲ್ ತೆಗೆದುಕೊಂಡಿದ್ದರು ಈ ಸಂದರ್ಭದಲ್ಲಿ ಅಶೋಕ್ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಕಾನೂನು ಎಲ್ಲರಿಗೂ ಒಂದೇ ಆಗಿದೆ ಅಂದು ಬಾಲಗಂಗಾಧರ ಸ್ವಾಮೀಜಿ ತಪ್ಪು ಮಾಡಿರಲಿಲ್ಲ, ಹಾಗಿದ್ದರೂ ಸಹ ಜನತಾದಳ ಸರ್ಕಾರ ಕೇಸ್ ಹಾಕಿತ್ತು ಇದು ದಾಖಲೆ. ಇದನ್ನ ಯಾರು ಬದಲಿಸಲು ಸಾಧ್ಯವಿಲ್ಲ. ನಾನೇನು ಸಮುದಾಯದವನ್ನು ಬಳಸಿಕೊಳ್ಳಬೇಕಿಲ್ಲ.
ಒಕ್ಕಲಿಗ ಸಮುದಾಯದವನು. ಎಲ್ಲಾ ಜಾತಿ ಧರ್ಮಕ್ಕೂ ಗೌರವ ಕೊಡಬೇಕಾಗಿದೆ. ಸಂವಿಧಾನ ನಮ್ಮಗಳ ಮೂಲ ಗ್ರಂಥ, ಯಾರು ಕೂಡ ಸಂವಿಧಾನವನ್ನು ಮೀರಿ ಮಾತನಾಡುವಂತಿಲ್ಲ ಎಂದು ತಿಳಿಸಿದರು.