ಬೆಳಗಾವಿ: ಹುಷಾರ್.. ಕಾಂಗ್ರೆಸ್ ಜತೆಗೋ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ BJP ಅಧ್ಯಕ್ಷ ಮಾಡಿಲ್ಲ ಎಂದು ಬಿ.ವೈ.ವಿಜಯೇಂದ್ರಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ವಾರ್ನಿಂಗ್ ಕೊಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ವಕ್ಫ್ ಭೂ ಕಬಳಿಕೆ ವಿರೋಧಿಸಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಹಗರಣದ ಪಾದಯಾತ್ರೆ ಅನುಮತಿ ಕೊಡಿಸಲಿಲ್ಲ. ಅನುಮತಿಗೆ ಕಾಯ್ತಾ ಇದ್ದರೆ ಜನ ಬಡಿತಾರೆ ಅಂತ ಜನ ಪರವಾಗಿ ಈ ಹೋರಾಟ ಮಾಡ್ತಾ ಇದ್ದರೆ.. ಯತ್ನಾಳ್ ಅವರನ್ನ ಉಚ್ಚಾಟನೆ ಮಾಡಿಸುತ್ತೇವೆ ಅಂತಾರೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ಇದಕ್ಕೆ ಜನ ವಿರೋಧಿ ಅಂತಿರಿ, ಇದಕ್ಕೆ ನಗಬೇಕಾ ಅಳಬೇಕಾ ಗೊತ್ತಾಗುತ್ತಿಲ್ಲ.
ಉಪಚುನಾವಣೆ ಮುಗಿದು ಬಹಳ ದಿನವಾಯಿತು. ವಕ್ಫ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ. ಹಾದಿ ಬೀದಿಯಲ್ಲಿ ಮಾತಾಡುತ್ತಾರೆ ಅಂತಾ ನಮಗೆ ಹೇಳುತ್ತಾರೆ. ಬೆಂಗಳೂರಿನಲ್ಲಿ ಕುಳಿತು ನೀವು ಮಾತಾಡುತ್ತಿದ್ದೀರಿ.
ಉಪಚುನಾವಣೆಯಲ್ಲಿ ಯಾಕೆ ಸೋಲಾಯಿತು ಅಂತಾ ಯಾವತ್ತಾದ್ರೂ ಯೋಚಿಸಿದ್ದಿದ್ದಾರೆ. ನಿಮ್ಮ ಹೊಂದಾಣಿಕೆ ರಾಜಕಾರಣದಿಂದ ವಿರೋಧ ಪಕ್ಷಕ್ಕೆ ಬಂದಿದ್ದೇವೆ.
ನೀವು ಏನೇನು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಈಗ ಹೇಳುವುದಿಲ್ಲ. ಸಲಹೆ ತೆಗೆದುಕೊಂಡು ನಿಮ್ಮ ಟೀಮ್ ತಗೊಂಡು ಪ್ರವಾಸ ಮಾಡಿ. ನಮ್ಮ ಜೊತೆ ಬರಲು ಆಗದಿದ್ದರೆ ನೀವೇ ಪ್ರತ್ಯೇಕವಾಗಿ ಹೋರಾಟ ಮಾಡಿ.
ಬೀದರ್ದಿಂದ ವಕ್ಫ್ ಹೋರಾಟ ಮಾಡುತ್ತಿದ್ದೇವೆ. ನಮಗೆ ಕೆಲವರು ಬೆಂಗಳೂರಿನಲ್ಲಿ ಕುಳಿತು ಪಕ್ಷ ವಿರೋಧಿ ಕೆಲಸ ಅಂತಿದ್ದಾರೆ. ನಾವು ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದೇವಾ? ನಾವು ಜನಪರ ಹೋರಾಟ ಮಾಡುತ್ತಿದ್ದೇವೆ ನೀವೇನೂ ಮಾಡುತ್ತಿದ್ದೀರಿ. ಉಪ ಚುನಾವಣೆ ಸೋತ ಮೇಲೆ ಇದನ್ನ ಗಂಭೀರವಾಗಿ ತಗೊಂಡಿಲ್ಲ ಅಂತಾ ಹೇಳ್ಳುತ್ತಾರೆ. ಚುನಾವಣೆ ರಾಜಕೀಯ ಪಕ್ಷಕ್ಕೆ ಗಂಭೀರ ಅಲ್ಲಾ ಅನ್ನೋದಕ್ಕೆ ಏನೂ ಹೇಳಬೇಕು.
ಇದನ್ನೂ ಓದಿ;ತಾರಕಕ್ಕೇರಿದ BJP ಬಣ ಬಡಿದಾಟ; ಯತ್ನಾಳ್‌ಗೆ ವಿಜಯೇಂದ್ರ ಸವಾಲ್..!
ಹುಷಾರ್.. ಕಾಂಗ್ರೆಸ್ ಜತೆಗೋ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ BJP ಅಧ್ಯಕ್ಷ ಮಾಡಿಲ್ಲ ಎಂದು ಬಿ.ವೈ.ವಿಜಯೇಂದ್ರಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ವಾರ್ನಿಂಗ್ ಕೊಟ್ಟರು.