ನಿಖಿಲ್ ಹ್ಯಾಟ್ರಿಕ್ ಸೋಲು; ಶಪಥ ಮಾಡಿದ ಹೆಚ್‌ಡಿ ಕುಮಾರಸ್ವಾಮಿ.!| HD Kumaraswamy

ರಾಮನಗರ: ನಾನು ಶಪಥ ಮಾಡ್ತೇನೆ‌. ರಾಮನಗರದಿಂದ ಜೆಡಿಎಸ್ ಖಾಲಿ ಮಾಡಿಸಿದ್ದೇನೆ ಅಂದವರಿಗೆ ಉತ್ತರ ಕೊಡ್ತೇನೆ. ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನವನ್ನು ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುತ್ತೆ. ನಮ್ಮನ್ನ ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬರುತ್ತೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಶಪಥ ಮಾಡಿದರು.

ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಸಮಾವೇಶ ವಿಚಾರಕ್ಕೆ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡ್ತಾರೆ. 17 ತಿಂಗಳಿನಿಂದ ಆ ಸಮುದಾಯಕ್ಕೆ ಏನು ರಕ್ಷಣೆ ಕೊಟ್ಟಿದ್ದಾರಾ.? ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದ್ದೀರಾ.? ಅವರ ಹಣವನ್ನ ಲೂಟಿ ಮಾಡಿರೋದೇ ಕೊಡುಗೆಯಾ‌.? ಎಂದು ಸಚಿವರು ಕಿಡಿಕಾರಿದರು.

ವಾಲ್ಮೀಕಿ ನಿಗಮದ ಹಣ ದೋಚಿದ್ದು ಯಾರು.? ಈಗ ಬೋವಿ ಜನಾಂಗದ ಹಣ ಲೂಟಿ ಮಾಡ್ತಿಲ್ವಾ.? ನಿನ್ನೆ ಮಂಡ್ಯದಲ್ಲಿ ಅಬಕಾರಿ ಲಂಚಾವತಾರ ನೋಡಿಲ್ವಾ.? 20 ಲಕ್ಷ 40 ಲಕ್ಷ ಲಂಚ ಕೊಡಿ ಅಂತಿಲ್ವಾ.?
ಇದು ನಿಮ್ಮ ಸ್ವಾಭಿಮಾನವೇ, ಇದನ್ನೇ ಹಾಸನದಲ್ಲಿ ಮಾಡ್ತಿದ್ದೀರಾ.? ಎಂದು ಸಿದ್ದರಾಮಯ್ಯವಿರುದ್ಧ ಕಿಡಿಕಾರಿದರು.

ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದೀರಿ, ಆ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ.? ಇದನ್ನ ಭಾಷಣದಲ್ಲಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ತರಾಟೆಗೆ ತೆಗೆದುಕೊಂಡರು.

ಒಕ್ಕಲಿಗ ಸ್ವಾಮೀಜಿಗೆ ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವವರು ನನ್ನ ಮೇಲೆ ವರ್ಣನಿಂದನೆ ಮಾಡಿದ್ರಲ್ಲ ಅವರ ಮೇಲೆ ಎನು ಕ್ರಮ ಕೈಗೊಂಡರಿ. ಒಂದು ಕೇಸ್ ಆಗಿಲ್ಲ, ಯಾಕೆ ನೋಟಿಸ್ ಕೊಟ್ಟಿಲ್ಲ. ರಾಜ್ಯದಲ್ಲಿ ಹರಾಜಕತೆ ಪ್ರಾರಂಭ ಆಗುತ್ತೆ ನೋಡಿ. ಕಾಂಗ್ರೆಸ್ ನವರ ಓಲೈಕೆ ರಾಜಕೀಯ ಏನಾಗ್ತಿದೆ ಗೊತ್ತು ಓಲೈಕೆ ರಾಜಕಾರಣ ಬಿಡಲಿ ಅಂತ ಸ್ವಾಮೀಜಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಕನಕಪುರಕ್ಕೆ ವಿದ್ಯುತ್ ಶಕ್ತಿ ಕೊಟ್ಟವರು ಯಾರು.?

ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡರು ಏನ್ ಮಾಡಿದ್ದಾರೆ ಅಂತ ಕೇಳ್ತಾರಲ್ಲ. ಚನ್ನಪಟ್ಟಣ ಕನಕಪುರಕ್ಕೆ ವಿದ್ಯುತ್ ಶಕ್ತಿ ಕೊಟ್ಟವರು ಯಾರು.? ನಂಜುಡಪ್ಪ ವರದಿಯಲ್ಲಿ 173 ಸ್ಥಾನದಲ್ಲಿತ್ತು. ಈ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ನೀವು ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಾ.

2008 ರ ಬಳಿಕ 2013 ಕ್ಕೆ ಏನಾಯ್ತು. 2018ಕ್ಕೆ ನಮ್ಮ ಹತ್ರ ಬಂದಿದ್ರಲ್ಲ ಇವತ್ತು 136 ಅಂತ ಹೇಳ್ತೀರಲ್ಲ, ಬಳಿಕ 36 ಸೀಟು ಗೆಲ್ಲಿ ನೋಡೋಣ ಸಿಎಂ ಸಿದ್ರಾಮಯ್ಯ ನವರೇ ನಿಮಗೆ ನಾಚಿಕೆ ಇದೇಯ ಎಂದು ವಾಗ್ದಾಳಿ ನಡೆಸಿದರು.

ಟಾಸ್ಕ್ ಕೊಟ್ಟರೆ ಜೆಡಿಎಸ್ ಶಾಸಕರ ಆಪರೇಷನ್ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಅದರ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ ಪಾಪ ಕಾಂಗ್ರೆಸ್ ನಿಂದ 30‌ ಮಂದಿಯನ್ನ ಬಿಜೆಪಿಗೆ ಕರೆತಂದಿದ್ದು ನೋಡಿದ್ದೇನೆ.ಕಳೆದ 17 ತಿಂಗಳಲ್ಲಿ 30 ರಿಂದ 35 ಜನರ ಹಿಡಿದುಕೊಂಡು ಓಡಾಡ್ತಿದ್ರು. ಅಂತವರ ಬಗ್ಗೆ ಚರ್ಚೆ ಅನಾವಶ್ಯಕ ಎಂದರು.

ಇವಿಎಂ ಮೇಲೆ ಕಾಂಗ್ರೆಸ್ ಅನುಮಾನ ವಿಚಾರಕ್ಕೆ ಮಾತನಾಡಿದ ಸಚಿವರು, ಓಟಿಂಗ್ ಮಿಷನ್ ಇಂಪ್ಲಿಮೆಂಟ್ ಮಾಡಿದ್ದು ಯಾರು.? ಇದೇ ಕಾಂಗ್ರೆಸ್ ಸರ್ಕಾರ ತಾನೆ‌. ಇವಿಎಂ ಹ್ಯಾಕ್ ಕರ್ನಾಟಕದಲ್ಲಿ ಮಾಡಿದ್ದಾರಾ. ಅದಕ್ಕೆ ಅದರ ಮೇಲೆ ಆರೋಪ ಮಾಡಿದ್ದಾರಾ.? ಎಂದು ಕಾಂಗ್ರೆಸ್ ನಾಯಕರಿಗೆ ಹೆಚ್ಡಿಕೆ ಟಾಂಗ್ ನೀಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತರ ಕೊಡ್ತೀವಿ

ಕ್ಷೇತ್ರದ ಜನ 87 ಸಾವಿರ ಮತಗಳ ನೀಡಿದ್ದಾರೆ. ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಮುಂದಿ‌ನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತರ ಕೊಡ್ತೀವಿ.ಕಾರ್ಯಕರ್ತರ ಭಾವನೆ ನಿಖಿಲ್ ಚನ್ನಪಟ್ಟಣ ಇರಲಿ ಅಂತಿದೆ. ಆದರೆ ನಿಖಿಲ್ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್ ಮೇಲಿದೆ ಎಂದರು.

ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಮೊನ್ನೆ ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ತರಲು ಅವರಿಗೆ ವಿಶ್ವಾಸ ಮೂಡಿದೆ. ನಿಖಿಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡ್ತಿವೆ. ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭಿಸುತ್ತೇವೆ. ಚುನಾವಣೆ ಸೋತಂತ ಸನ್ನಿವೇಶದಲ್ಲಿ ಕಾರ್ಯಕರ್ತರಲ್ಲಿ ಆಘಾತ, ಇರುವ ಕಾರಣ ಬಹಳಷ್ಟು ಜನ‌ ಬರುತ್ತಾರೆ ಅಂತ ನಿರೀಕ್ಷೆ ಇರಲಿಲ್ಲ ಅಂತ ನಿಖಿಲ್ ಕುಮಾರಸ್ವಾಮಿ ಅಂದಿದ್ದಾರೆ.

ಮಂಡ್ಯ ಲೋಕಸಭೆಗೆ ನಿಖಿಲ್ ರನ್ನು ನಿಲ್ಲಿಸಬೇಕು ಅಂತ ಸಾ ರಾ ಮಹೇಶ್ ಸಾವಿರ ಸಲ ಹೇಳಿದ್ರು ಆದರೆ‌ ನಿಖಿಲ್ ಕುಮಾರಸ್ವಾಮಿ ನಾನು ಮಂಡ್ಯ ಬರೊದು ಸೂಕ್ತ ಅಲ್ಲ ಅಂತ ನಿಖಿಲ್ ಕಠಿಣ ನಿರ್ಧಾರ ಮಾಡಿದ್ರು. ನಿಖಿಲ್ ಅಧಿಕಾರಕ್ಕೆ ಹಪಹಪಿಸಿದ್ರೆ ಆಗಲೇ ಮಂಡ್ಯದಿಂದ ಚುನಾವಣೆಗೆ ನಿಲ್ಲಬಹುದಿತ್ತು ಎಂದರು.

ಆದರೆ ದೇವರ‌ ಇಚ್ಛೆ. ಇವತ್ತು ದೇವೇಗೌಡರ ಕುಟುಂಬ ಉಳಿದಿದ್ರೆ. ಒಂದು ಕಡೆ ಬೆಳೆಸಿದ ಅಭಿಮಾನಿಗಳು, ಇನ್ನೊಂದು ದೇವರ ಅನುಗ್ರಹ ಇರೋದ್ರಿಂದ ಬದುಕಿದ್ದೇವೆ. ನಮ್ಮನ್ನು ಅವರು ಟೂರಿಂಗ್ ಟಾಕೀಸ್ ಅಂತಾರೆ ಇವತ್ತು ಯಾವುದಾದರೂ ಎರಡು ಜಿಲ್ಲೆಯಲ್ಲಿ ನಿಂತು ಗೆಲ್ಲುವ ತಾಕತ್ತು ಇರೋದು ಜೆಡಿಎಸ್ ಮಾತ್ರ. ಈ‌ ಚುನಾವಣೆಗೆ ನಿಖಿಲ್ ನಿಲ್ಲಿಸಬೇಕು ಅಂತ ಇರಲಿಲ್ಲ. ಒಂದು ವೇಳೆ ಇಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಸಲೇ ಬೇಕಿದ್ದರೆ ಲೋಕಸಭೆ ಚುನಾವಣಾ ಬಳಿಕವೇ ವೇದಿಕೆ ನಿರ್ಮಾಣ ಮಾಡ್ತಿದ್ದೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ

ಕಾಂಗ್ರೆಸ್ ಅಭ್ಯರ್ಥಿ ಎನೇನು ನಾಟಕ ಆಡ್ತಿದ್ದಾರೆ.ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ. ಈಗಲೂ ಕಾಂಗ್ರೆಸ್ ನಾಯಕರು ದೇವೇಗೌಡರು ಮತ್ತು
ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ನಾಯಕರಿಗೆ ಕನಸ್ಸಲ್ಲು ಭಯ ಇದೆ. ದೇವೇಗೌಡರ ಧ್ವನಿ ಇಲ್ಲದೇ ಇದ್ದರೆ ನಿಮ್ಮ ಕಾಂಗ್ರೆಸ್ ನವರನ್ನು ಕೇಳೋದರ್ಯಾರು ದೇವೇಗೌಡರನ್ನ ರಾಜೀನಾಮೆ ಕೊಡಿ ಅಂತಾರೆ ಎಂದು ಸಚಿವರು ಕಿಡಿಕಾರಿದರು.

ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಹದಗೆಟ್ಟಿದೆ

ಕೆ. ಸಿ ಜನರಲ್ ಆಸ್ಪತ್ರೆಗೆ ಲೋಕಾಯುಕ್ತ, ಉಪ ಲೋಕಾಯುಕ್ತ ಹೋಗಿದ್ರು, ಇದೇನೋ ಆಸ್ಪತ್ರೆ ನೋ, ಭೂತಬಂಗಲೆನೋ ಅಂತ ಸ್ವತಃ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಉದಾಹರಣೆ. ಸಚಿವರಿಗೆ ಮಾನ ಮರ್ಯಾದೆ ಇದ್ಯಾ.? ಯಾವುದೇ ಮೆಡಿಷನ್ ಕೊಟ್ಟು ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಸರ್ಕಾರದ ಯಾರಾದ್ರೂ ಪ್ರತಿನಿಧಿ ಹೋಗಿದ್ದೀರಾ.? ನಿಮಗೆ ನಾಚಿಕೆ ಆಗಲ್ವಾ.? ನಮ್ಮ ಬಗ್ಗೆ ಮಾತನಾಡೊದಕ್ಕೆ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಾ ಎಂದು ಅರೋಗ್ಯ ಸಚಿವರಿಗೆ ತರಾಟೆಗೆ ತೆಗೆದುಕೊಂಡರು.

ರಾಜಕೀಯ

ದೊಡ್ಡಬೆಳವಂಗಲ VSSN: ಕಾಂಗ್ರೆಸ್‌ಗೆ ಅಧ್ಯಕ್ಷ, ಬಿಜೆಪಿಗೆ ಉಪಾಧ್ಯಕ್ಷ..!

ದೊಡ್ಡಬೆಳವಂಗಲ VSSN: ಕಾಂಗ್ರೆಸ್‌ಗೆ ಅಧ್ಯಕ್ಷ, ಬಿಜೆಪಿಗೆ ಉಪಾಧ್ಯಕ್ಷ..!

ದೊಡ್ಡಬೆಳವಂಗಲ ವ್ಯವಸಾಯ ಸೇವಾ ಸಹಕಾರ ಸಂಘದ (VSSN) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ.

[ccc_my_favorite_select_button post_id="102385"]
ಸಿದ್ದು, ಬಿಎಸ್‌ವೈಗೆ ನಿರ್ಣಾಯಕ ದಿನ..!

ಸಿದ್ದು, ಬಿಎಸ್‌ವೈಗೆ ನಿರ್ಣಾಯಕ ದಿನ..!

ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿದ್ದು ಶುಕ್ರವಾರ ಈ ಎರಡೂ ಅರ್ಜಿಗಳ ಆದೇಶ ಹೊರಬೀಳಲಿದೆ. Cmsiddaramaiah

[ccc_my_favorite_select_button post_id="102376"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಹೊಸಕೋಟೆಯಲ್ಲಿ ಪುಷ್ಪ ಸಿನಿಮಾ ಮಾದರಿ ಕ್ರೈಮ್..! 180 ತುಂಡು ರಕ್ತ ಚಂದನ ವಶ

ಹೊಸಕೋಟೆಯಲ್ಲಿ ಪುಷ್ಪ ಸಿನಿಮಾ ಮಾದರಿ ಕ್ರೈಮ್..! 180 ತುಂಡು ರಕ್ತ ಚಂದನ ವಶ

ಆಂಧ್ರ ಪೊಲೀಸರ ತನಿಖೆಗೆ ಹೊಸಕೋಟೆ ಪೊಲೀಸರು ಸಾಥ್ ನೀಡಿದ್ದಾರೆ. ಪತ್ತೆಯಾದ ರಕ್ತಚಂದನದ ತುಂಡುಗಳನ್ನು ಆಂಧ್ರ ಪೊಲೀಸರು ತಮ್ಮ ರಾಜ್ಯಕ್ಕೆ ರವಾನಿಸಿದ್ದಾರೆ. (Hosakote)

[ccc_my_favorite_select_button post_id="102381"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!