Site icon Harithalekhani

Doddaballapura: ಕೂಗೋನಹಳ್ಳಿಯಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ..! ಪ್ರಶಸ್ತಿ ವಿತರಣೆ

ದೊಡ್ಡಬಳ್ಳಾಪುರ (Doddaballapura): ಮಿಶ್ರ ತಳಿ ಕರುಗಳ ಪ್ರದರ್ಶನ ಹಾಗೂ ಹಸುಗಳ ಹಾಲು ಕರೆಯುವ ಸ್ಪರ್ಧೆಯನ್ನು ತಾಲೂಕಿನ ಕೂಗೋನಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಹಾಲು ಒಕ್ಕೂಟ, ಕೂಗೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಹಾಗೂ ಹಸುಗಳ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಯಿತು.

ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಹೆಚ್‌ಎಫ್, ಜರ್ಸಿಯ 28 ಕರುಗಳು ಭಾಗವಹಿಸಿದ್ದವು. ಹುಟ್ಟಿನಿಂದ ಮೂರು ತಿಂಗಳ ಒಳಗೆ ಒಂದು ವಿಭಾಗ, ನಾಲ್ಕು ತಿಂಗಳಿಂದ 6 ತಿಂಗಳ ವರೆಗೆ ಒಂದು ವಿಭಾಗ, 7 ರಿಂದ 9 ತಿಂಗಳ ವರೆಗೆ ಒಂದು ವಿಭಾಗದಂತೆ ಪ್ರದರ್ಶನ ನಡೆಸಲಾಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ ಗೀರ್, ಹೆಚ್‌ಎಫ್, ಜರ್ಸಿ ಸೇರಿದಂತೆ 16 ರಾಸುಗಳು ಭಾಗವಹಿಸಿದ್ದವು.

ಸ್ಪರ್ಧೆಯ ಅಂಗವಾಗಿ ಶುಕ್ರವಾರ ಬೆಳಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಹಾಲು ನೀಡಿದ ಹಸುಗಳು ಮಾಲೀಕರಿಗೆ ಪ್ರಥಮ ಬಹುಮಾನವಾಗಿ ರೂ. 7500, ದ್ವಿತೀಯ ಬಹುಮಾನ ರೂ.5000, ತೃತೀಯ ಬಹುಮಾನ ರೂ.2500 ಹಾಗೂ ತಲಾ ಒಂದೊಂದು ಹಾಲಿನ ಕ್ಯಾನ್ ವಿತರಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರಾಸುಗಳ ಮಾಲೀಕರಿಗೆ ಪ್ರೋತ್ಸಾಹ ಬಹುಮಾನವಾಗಿ 10 ಲೀ ಕ್ಯಾಲ್ಸಿಯಂ ಟಾನಿಕ್, ನೆನಪಿನ ಕಾಣಿಕೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ್, ಡಾ.ವಿಷ್ಣುವರ್ಧನ್, ಡಾ.ಮಂಜುನಾಥ್, ಡಾ.ರಮೇಶ್, ಡಾ.ಟಿಕೆ ಮಂಜುನಾಥ್, ಡಾ.ಸತ್ಯನಾರಾಯಣ, ಡಾ. ನಂಜಪ್ಪ, ಡಾ. ಕುಮಾರಸ್ವಾಮಿ, ಡಾ.ದೀಪಕ್, ಡಾ.ಮಾರುತಿ, ಡಾ.ಆರಿಫ್, ಡಾ.ತಿರುಮಲರಾಜು, ಸಿಬ್ಬಂದಿಗಳಾದ ಜಗದೀಶ್, ನಾಗದೇವ್, ವೆಂಕಟೇಶ್ ಮೂರ್ತಿ, ಜಿಸಿ ವೆಂಕಟೇಶ್ ಮೂರ್ತಿ, ನಾಗರಾಜು, ಕೂಗೋನಹಳ್ಳಿಯಲ್ಲಿ ಎಂಪಿಸಿಸಿ ಅಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷೆ ರಾಧಮ್ಮ, ಕಾರ್ಯದರ್ಶಿ ಕಿರಣ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Exit mobile version