Site icon ಹರಿತಲೇಖನಿ

ದಿನ ಭವಿಷ್ಯ: ಈ ರಾಶಿಯವರು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕೆ ಈಡಾಗಬೇಡಿ| astrology..

Keep valuables safe

Keep valuables safe

ದೈನಂದಿನ ರಾಶಿ ಭವಿಷ್ಯ: ಶನಿವಾರ, ನವೆಂಬರ್ 30, 2024, astrology..

ಮೇಷ ರಾಶಿ: ಅವಿವಾಹಿತರಿಗೆ ವಿವಾಹ ಯೋಗ. ನಿಮ್ಮ ಬಹುವರ್ಷದ ಕನಸು ನನಸಾಗುವ ದಿನ. ಕುಟುಂಬದ ಸಮಸ್ಯೆಗಳು ಉಲ್ಭಣಗೊಳ್ಳ ಬಹುದು. ಪರಿಸ್ಥಿತಿ ಎದುರಿಸಲು ಸಿದ್ಧರಾಗಿ.

ವೃಷಭ ರಾಶಿ: ಕಚೇರಿಯಲ್ಲಿ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಇಂತಹ ಪರಿಸ್ಥಿತಿಯಲ್ಲಿ ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡುವ ಮೊದಲು ಚೆನ್ನಾಗಿ ಯೋಚಿಸಿ ಮತ್ತು ಅವರಿಂದ ಸಲಹೆ ಪಡೆಯಿರಿ.

ಮಿಥುನ ರಾಶಿ: ಅತಿ ಅವಸರದಿಂದ ತೆಗೆದು ಕೊಂಡ ನಿರ್ಧಾರದಿಂದ ಅಪಾಯ ಕಟ್ಟಿಟ್ಟ ಬುತ್ತಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. ಅನಾರೋಗ್ಯ ಕಾಣಿಸಿಕೊಳ್ಳಬಹುದು. ಆರೋಗ್ಯದ ಕಡೆ ಗಮನ ನೀಡಿ. ಕೆಟ್ಟ ಅಭ್ಯಾಸಗಳನ್ನು ತೊಡೆದು ಹಾಕುವುದು ಒಳ್ಳೆಯದು.

ಕಟಕ ರಾಶಿ: ದೂರದ ಬಂಧುಗಳ ಆಗಮನ ಜಟಿಲ ಸಮಸ್ಯೆಯೊಂದು ನಿವಾರಣೆಯಾಗುವ ಸೂಚನೆ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗರುವಾಗುತ್ತದೆ. ಸಲಹೆಗಳನ್ನು ಸ್ವೀಕರಿಸಿ. ಇದು ಬಿಕ್ಕಟ್ಟಿನಿಂದ ಹೊರಬರಲು ನಿಮಗೆ ಸಹಾಯ ವಾಗುತ್ತದೆ.

ಸಿಂಹ ರಾಶಿ: ಅತ್ಯಂತ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಸಮಸ್ಯೆಗಳೂ ದೂರಾಗಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಿದು. ಆದರೆ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ, ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ.

ಕನ್ಯಾ ರಾಶಿ: ನೀವು ಮಾಡಬೇಕು ಎಂದುಕೊಂಡ ಕೆಲಸಕ್ಕೆ ಹಲವೆಡೆಯಿಂದ ಅಡ್ಡಿ. ದೇಹ ವಿಶ್ರಾಂತಿ ಬಯಸಬಹುದು.
ಆರೋಗ್ಯ ಕಡೆ ಹೆಚ್ಚಿನ ಗಮನ ಕೊಡಿ. ಇತರರ ಬಗ್ಗೆ ಅತಿಯಾದ ಆಲೋಚನೆಗಳು ಒಳ್ಳೆಯದಲ್ಲ.

ತುಲಾ ರಾಶಿ: ಯಾರದ್ದೋ ಮಾತು ಕೇಳಿ ನಿಮ್ಮ ಒಳ್ಳೆಯ ನಿರ್ಧಾರವನ್ನು ಬದಲಿಸದಿರಿ. ಹೊಸ ಕೆಲಸ, ಯೋಜನೆಗಳನ್ನು ಮುಂದೂಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ.

ವೃಶ್ಚಿಕ ರಾಶಿ: ನೀಮ್ಮ ನಿರ್ಧಾರದಿಂದ ಹಲವರಿಗೆ ಬೆಸರ ಉಂಟಾಗಬಹುದು ಎಚ್ಚರ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ.

ಧನಸ್ಸು ರಾಶಿ: ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಶುಭಸುದ್ದಿ ಕೇಳುವ ದಿನ ಇಂದು. ನೀವು ಇತರರನ್ನು ಸಂಪರ್ಕಿಸದೆ ಮುಂದಕ್ಕೆ ಧಾವಿಸುತ್ತೀರಿ. ಇದರಿಂದ ಮನಸ್ತಾಪಗಳು ಎದುರಾಗಬಹುದು. ಎಚ್ಚರವಿರಲಿ.

ಮಕರ ರಾಶಿ: ಸರಿಯಾದ ಸಮಯಕ್ಕೆ ಸ್ನೇಹಿತರೊಬ್ಬರು ಬಂದು ನಿಮ್ಮ ಸಮಸ್ಯೆ ಬಗೆಹರಿಸಲಿದ್ದಾರೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಕೈಚೆಲ್ಲದಿರಿ. ಸಿಕ್ಕ ಉತ್ತಮ ಸಮಯನ್ನು ಸದ್ಬಳಕೆ ಮಾಡಿಕೊಳ್ಳಿ.

ಕುಂಭ ರಾಶಿ: ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕೆ ಈಡಾಗಬೇಡಿ. ಎಚ್ಚರವಿರಲಿ. ಗೊಂದಲಕ್ಕೊಳಕಾಗದಿರಿ. ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ.

ಮೀನ ರಾಶಿ: ಉದ್ವೇಗ ಕ್ಕೊಳಗಾಗದಿರಿ. ಸಮಾಧಾನದಿಂದ ಕಾರ್ಯ ನಿರ್ವಹಿಸಿ ದೂರದ ಗುರಿಯನ್ನು ಸುಲಭವಾಗಿ ಮುಟ್ಟುವಿರಿ. ಒತ್ತಡಗಳು ಎದುರಾದರೂ ಸೂಕ್ತ ರೀತಿಯಲ್ಲಿ ನಿಭಾಯಿಸಲಿದ್ದೀರಿ.

ರಾಹುಕಾಲ: 09:00AM ರಿಂದ 10:30AM
ಗುಳಿಕಕಾಲ: 06:00AM ರಿಂದ 07:30AM
ಯಮಗಂಡಕಾಲ: 01:30PM ರಿಂದ 03:00PM

Exit mobile version