ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ಇನ್ನು ನಾಲೈದು ದಿಗಳಲ್ಲಿ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (lakshmi hebbalkar) ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಿಂಗಳು ಮುಗಿತಾ ಬಂತು ಅಂತಾ ಕೆಲವರು ಹಣ ಬಂದಿಲ್ಲ ಎಂದು ಹೇಳುತ್ತಾರೆ. ಕೆಲ ತಾಂತ್ರಿಕ ಸಮಸ್ಯೆ ಆಗಿರುವುದು ನಿಜ. 3-4 ದಿನಗಳೊಳಗೆ ಹಣ ವರ್ಗಾವಣೆಯಾಗಲಿದೆ ಎಂದರು.
2 ತಿಂಗಳು ಹಣ ವರ್ಗಾವಣೆ ತಡವಾಗಿದ್ದು ಸತ್ಯ ಈ ಸಮಸ್ಯೆ ಬಗೆಹರಿಯಲಿದೆ ನಮ್ಮ ಸರ್ಕಾರ ಚುನಾವಣೆಗಾಗಿ ಹಣ ಹಾಕುವುದಿಲ್ಲ ಕಳೆದ 14 ತಿಂಗಳುಗಳಿಂದ ಯಾವ ಎಲೆಕ್ಸನ್ ಕೂಡ ಇರಲಿಲ್ಲ ಸರ್ಕಾರದಿಂದ ಹಣ ಹಾಕಿಲ್ಲವೇ ಎಂದು ಚುನಾವಣೆಗಾಗಿಯೇ ಹಣ ಹಾಕುತ್ತಾರೆಂಬ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರು.
ಹಣ ಹಾಕಿದರೂ, ಹಾಕುವುದು ತಡವಾದರೂ ಏನೇ ಮಾಡಿದರೂ ಆರೋಪ ಮಾಡ್ತಾರೆ ಎಂದು ವಿರೋಧ ಪಕ್ಷಗಳಿಗೆ ಸಚಿವೆ ತಿರುಗೇಟು ನೀಡಿದರು.