ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನ ನಡು ಗಡ್ಡೆಯಲ್ಲಿ ಶ್ರೀ ಪದ್ಮನಾಭ ತೀರ್ಥರ ( of Padmanabha Tirtha) ಆರಾಧನೆ ಯನ್ನು ಮೊದಲು ಶ್ರೀರಾಘವೇಂದ್ರ ಸ್ವಾಮಿಗಳ ಮಠ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮೊದಲ ಒಂದೂವರೆ ದಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಗುರುಗಳಾದ ಶ್ರೀಪದ್ಮನಾಭ ತೀರ್ಥರ ಆರಾಧನೆ ನಡೆಸಲು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ.
ಶ್ರೀ ಪದ್ಮನಾಭ ತೀರ್ಥರ ಆರಾಧನೆ ನಿಮಿತ್ತ ನ.26ರಂದು ಸುದೀರ್ಘ ಚರ್ಚೆ ನಡೆಸಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್, ನ.29 ರಂದು ಪೂರ್ತಿ ದಿನ ಪೂರ್ವಾರಾಧನೆ ಹಾಗೂ ನ.30ರಂದು ಮಧ್ಯಾಹ್ನದವರೆಗೆ ಮಧ್ಯಾರಾಧನೆ ಅವಕಾಶವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿದೆ.
ಸುಪ್ರೀಂಕೋರ್ಟನ ಮುಂದಿನ ಆದೇಶದವರೆಗೂ ಈ ಆದೇಶ ಚಾಲ್ತಿಯಲ್ಲಿರುತ್ತದೆ. ಉತ್ತರಾಧಿ ಮಠದಿಂದ ನ.30 ಮಧ್ಯಾಹ್ನ ದಿಂದ ಡಿ.1ರವರೆಗೆ ಆರಾಧನೆ ನೆರವೇರಿಸಲಾಗುತ್ತದೆ ಎಂದು ವರದಿಯಾಗಿದೆ.