ಮಕ್ಕಳನ್ನು ಮನೆಯ ಹೊರಗೆ ಆಟಕ್ಕೆ ಬಿಡುವುದರಿಂದ ಕ್ರಿಯಾಶೀಲತೆ ಅರಳುತ್ತದೆ: ಕೆ.ವಿ.ಪ್ರಭಾಕರ್ (KV Prabhakar)

ಬೆಂಗಳೂರು: ಮಕ್ಕಳನ್ನು ಮನೆಯ ಹೊರಗೆ ಆಟಕ್ಕೆ ಬಿಡುವುದರಿಂದ ಕ್ರಿಯಾಶೀಲತೆ ಅರಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು.

ಬಾಲ ಭವನ ಸೊಸೈಟಿ ಆಯೋಜಿಸಿದ್ದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನಸ್ಸು ಯಾವಾಗಲೂ ಓಡಾಟ-ಕುಣಿದಾಟದೊಂದಿಗೆ ಅತ್ಯಂತ ಫಲವತ್ತಾಗಿ ಅರಳುತ್ತವೆ. ಹೀಗಾಗಿ ಮಕ್ಕಳನ್ನು ನಿರಂತರ ಚಟುವಟಿಕಿಯಿಂದಿಡಬೇಕು. ಮಣ್ಣಲ್ಲಿ ಆಡೋದು, ಕೆರೆಯಲ್ಲಿ ಈಜುತ್ತಾ ನಾವೆಲ್ಲಾ ಬೆಳೆದೆವು. ಈಗ ಸಿಟಿ ಮಕ್ಕಳಿಗೆ ಈ ಅವಕಾಶ ಇಲ್ಲದಂತಾಗಿದೆ. ಹಳ್ಳಿಗಳಲ್ಲಿ ಈ ಅವಕಾಶಗಳು ಇವೆ ಎಂದರು.

ಮಕ್ಕಳು ಸ್ವಾಭಾವಿಕವಾಗಿಯೇ ಚಟುವಟಿಕೆಯಿಂದ ಇರುತ್ತಾರೆ. ರೆಡಿ ಮೇಡ್ ಪ್ಲಾಸ್ಟಿಕ್ ಆಟದ ಸಾಮಾನುಗಳು ಮತ್ತು ಮೊಬೈಲ್ ಫೋನ್ ಮಕ್ಕಳ ಕ್ರಿಯಾಶೀಲತೆಯ ಶತ್ರುಗಳಾಗಿವೆ ಎಂದರು.

ಮಕ್ಕಳನ್ನು ಪರಿಸರಕ್ಕೆ, ಆಟದ ಬಯಲಿಗೆ ಬಿಟ್ಟರೆ ಸಾಕು. ತಮಗೆ ಬೇಕಾದ ಆಟದ ಸಾಮಾಗ್ರಿಗಳನ್ನು ಕ್ರಿಯಾಶೀಲವಾಗಿ ಸೃಷ್ಟಿಸಿಕೊಳ್ಳುತ್ತಾರೆ.
ಪೋಷಕರು ತಮ್ಮ ಕೆಲಸದ ಒತ್ತಡ, ತಮ್ಮ ಹವ್ಯಾಸಗಳ ಒತ್ತಡವನ್ನು ಮಕ್ಕಳ ಮೇಲೆ ಹೇರುವುದರಿಂದ ಮಕ್ಕಳ ಕ್ರಿಯಾಶೀಲತೆ ಚಿವುಟಿದಂಗಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.‌

ಇವತ್ತು ಜಗತ್ತು ತುಂಬಾ ಫಾಸ್ಟ್ ಆಗಿದೆ. ವೇಗವಾಗಿ ಬೆಳೆಯುತ್ತಿರುವ ಇಂದಿನ ಪ್ರಂಚದಲ್ಲಿ ಚಿಗುರೊಡೆಯುತ್ತಿರುವ ಮಕ್ಕಳನ್ನು ಕ್ರಿಯಾಶೀಲತೆ ಹಾಗೂ ಏಕಾಗೃತೆ ಮೂಡಿಸಲು ನಾವು ಪ್ರಯತ್ನಿಸಬೇಕು.

ಕನಕದಾಸರು ಮತ್ತು ಇಂತಹ ಮಹಾನ್ ಸಾಧಕರು ತಮ್ಮ ಸಾಧನೆಯನ್ನು ಹೇಗೆ ಮಾಡಿದರು ಎನ್ನುವ ತಿಳಿವಳಿಕೆ ಎಲ್ಲರ ಬಾಳಿನಲ್ಲಿ ಸ್ಪೂರ್ತಿನ್ನು ತಂದುಕೊಡುತ್ತವೆ.

ಬಾಲ್ಯದ ದಿನಗಳಲ್ಲೇ ಕ್ರಿಯಾಶೀಲತೆ ಕುರಿತು ನಾವು ಪೋಷಕರು ಅರಿವು ಬೆಳೆಸಿಕೊಳ್ಳಬೇಕು. ಬಳಿಕ ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದರು.

ಇವೆಲ್ಲದರ ಒಟ್ಟು ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮಕ್ಕಳು ಬೆಳೆದಂತೆ ಕೇವಲ ಯಾಂತ್ರಿಕವಾಗಿ ಬದುಕು ರೂಪಿಸಿಕೊಂಡು ಪೋಷಕರನ್ನು ನಿರ್ಲಕ್ಷಿಸುವುದು ಹೆಚ್ಚಾಗುತ್ತಿದೆ. ಇದರಿಂದ ವೃದ್ಧಾಶ್ರಮಗಳೂ ಹೆಚ್ಚುತ್ತಿವೆ ಎಂದರು.

ಮಕ್ಕಳ ಕಲ್ಪನಾಶಕ್ತಿ ಗರಿಗೆದರುವುದಕ್ಕಾಗಿ , ಅವರನ್ನು ಹೇಗೆ ಕ್ರಿಯಾಶೀಲರಾಗುವಂತೆ ಪ್ರೋತ್ಸಾಹಿಸಲು ಪಾಲಕರಿಗೆ ಮಾರ್ಗದರ್ಶನ ನೀಡಲು ಬಾಲ ಭವನ ಇದೆ. ಬಾಲ ಭವನದ ಅಧ್ಯಕ್ಷರಾದ ನಾಯ್ಡು ಅವರಿದ್ದಾರೆ ಎಂದರು.

ಬಾಲ ಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು ಕಾರ್ಯದರ್ಶಿ ನಿಶ್ಚಿಲ್, ಆಡಳಿತಾಧಿಕಾರಿ ವಿಜಯಲಕ್ಷ್ಮಿ ಅವರು ಉಪಸ್ಥಿತರಿದ್ದರು.

ರಾಜಕೀಯ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ (JDS) ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪಾ

[ccc_my_favorite_select_button post_id="105115"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
ಕೃಷ್ಣಬೈರೇಗೌಡರನ್ನು ಸಮರ್ಥ ಮಂತ್ರಿ ಎಂದು ಹಾಡಿ ಹೊಗಳಿದ: ಸಿಎಂ ಸಿದ್ದರಾಮಯ್ಯ

ಕೃಷ್ಣಬೈರೇಗೌಡರನ್ನು ಸಮರ್ಥ ಮಂತ್ರಿ ಎಂದು ಹಾಡಿ ಹೊಗಳಿದ: ಸಿಎಂ ಸಿದ್ದರಾಮಯ್ಯ

ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು. Cmsiddaramaiah

[ccc_my_favorite_select_button post_id="105143"]
ಬೆಳ್ಳಂಬೆಳಗ್ಗೆ ಅಪಘಾತ: ತುಂಡಾದ ಚಾಲಕನ ಕಾಲು..!

ಬೆಳ್ಳಂಬೆಳಗ್ಗೆ ಅಪಘಾತ: ತುಂಡಾದ ಚಾಲಕನ ಕಾಲು..!

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರಣ ಮಿನಿಬಸ್ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಬಸ್ ಡ್ರೈವರ್ ಕಾಲು ಮುರಿದಿದೆ. Accident

[ccc_my_favorite_select_button post_id="105131"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!