Site icon Harithalekhani

Doddaballapura: ಕಾರುಗಳ ನಡುವೆ ಡಿಕ್ಕಿ…! ಓರ್ವನಿಗೆ ಪೆಟ್ಟು

ದೊಡ್ಡಬಳ್ಳಾಪುರ (Doddaballapura): ತಾಲೂಕಿನ ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ ಕೋಲ್ಗೆರೆ ಗೇಟ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ, ಓರ್ವ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ದಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂದಿನ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡಿವೈಡರ್ ಏರಿ ಪಕ್ಕದ ರಸ್ತೆಗೆ ಕಾರು ನುಗ್ಗಿದೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಯಾವುದೇ ವಾಹನ ಬರದೇ ಇದ್ದ ಕಾರಣ ಸಂಭವಿಸಬಹುದಾದ ಪ್ರಮಾದ ತಪ್ಪಿದೆ.

ಇದನ್ನೂ ಓದಿ; ಕೋಳಿ ಜಗಳ.. ಮರ್ಮಾಂಗಕ್ಕೆ ಒದ್ದು ಮಹಿಳೆಯರಿಂದ ಕೊಲೆ..!| Murder

ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಒಂದು ಕಾರು ದೊಡ್ಡಬಳ್ಳಾಪುರ ಹಾಗೂ ಮತ್ತೊಂದು ಕಾರು ಬೂದಿಗೆರೆ ಸಮೀಪದ ಮಂಡೂರಿನದ್ದು ಎನ್ನಲಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Exit mobile version