ಬೆಂಗಳೂರು: ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಇಂದೂ ಕೂಡ ನಡೆದಿದ್ದು, ದರ್ಶನ್ (Darshan) ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ಅವರು ಲೋಪ ದೋಶಗಳನ್ನು ಪಟ್ಟಿ ಮಾಡಿ, ದರ್ಶನ್ ಅವರಿಗೆ ಜಾಮೀನು ನೀಡಬೇಕೆಂಬ ತಮ್ಮ ಪ್ರಬಲ ವಾದವನ್ನು ಮುಕ್ತಾಯಗೊಳಿಸಿದರು.
ಇಂದು ಮಧ್ಯಾಹ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದಲ್ಲಿ ಆರಂಭವಾದ ವಿಚಾರಣೆಯಲ್ಲಿ ತಮ್ಮ ವಾದ ಮುಂದುವರಿಸಿದ ಸಿವಿ ನಾಗೇಶ್ ಅವರು,
ಆರೋಪಿಗಳ 164 ಹೇಳಿಕೆ ಪ್ರಾಮುಖ್ಯತೆ ಇದ್ದಾಗ ದಾಖಲಿಸಲಾಗುತ್ತದೆ. ಪೊಲೀಸರು ದಾಖಲಿಸಿರುವ ಸ್ವಇಚ್ಛಾ ಹೇಳಿಕೆಗಳೂ ಹೀಗೆ ಬಂದು ಹಾಗೇ ಕಾರು ಹೋಗಿವೆ. ಎಂದು ಹೇಳಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ಯಾರು? ಯಾವಾಗ ಬಂದರು. ಯಾರು ಯಾರು ಇದ್ದರು ಎಂಬುವುದು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ.
ಸಾಕ್ಷಿಗಳು ಜೂ.10ನೇ ತಾರೀಖಿನಂದು ಕೊಲೆ ನಡೆದ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ. ಅದು ಮಾಧ್ಯಮಗಳಲ್ಲಿ ನೋಡಿದ ಮೇಲೆ ಇಂಥವರೇ ಕೊಲೆ ಮಾಡಿದ್ದಾರೆ ಎಂಬ ವಿಷಯಗಳು ತಿಳಿದವು. ಆದರೆ ಯಾವತ್ತು ಏನು ಆಗಿದೆ ಎಂಬುವುದನ್ನು ಸರಿಯಾಗಿ ಹೇಳಿಲ್ಲ ಪ್ರತ್ಯಕ್ಷದರ್ಶಿ ಓರ್ವರ ಹೇಳಿಕೆ ಆಧರಿಸಿ ನಾಗೇಶ್ ಅವರು ವಾದಿಸಿದರು.
ಮುಂದುವರಿದು, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳನ್ನು ಜೂ.15ರಂದು ದಾಖಲಿಸಲಾಗಿದೆ. ಬೆಂಗಳೂರಿನಲ್ಲೇ ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ತಡವಾಗಿ ದಾಖಲಿಸಲಾಗಿದೆ. ಘಟನೆ ನಡೆದ ದಿನ ಸಾಕ್ಷಿ ಓರ್ವನು ಶೆಡ್‌ನಲ್ಲೇ ಇದ್ದ ಅದರೂ ತನಿಖಾಧಿಕಾರಿಗಳು 15 ದಿನಗಳ ಬಳಿಕ ಹೇಳಿಕೆಗಳನ್ನು ತಡವಾಗಿ ದಾಖಲಿಸಿದ್ದು ಯಾಕೇ..? ಎಂದು ಪೊಲೀಸರ ತನಿಖೆಯ ಬಗ್ಗೆ ಸಿವಿ ನಾಗೇಶ್ ಅವರು ಅನುಮಾನ ವ್ಯಕ್ತಪಡಿಸಿದರು.
7 ರಿಮ್ಯಾಂಡ್ ಅರ್ಜಿಗಳನ್ನು ಹಾಕಲಾಗಿದೆ. ಪೊಲೀಸರು ಈವರೆಗೂ ಯಾವ ಸಾಕ್ಷಿಯನ್ನು ಸಂಗ್ರಹಿಸಿದ್ದಾರೋ ಆ ಬಗ್ಗೆ ಯಾವುದೇ ರಿಮ್ಯಾಂಡ್ ಅರ್ಜಿಯಲ್ಲೂ ಉಲ್ಲೇಖ ಮಾಡಿಲ್ಲ. ಜೂ.21ರಂದು ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕ ದಾಖಲಿಸಲಾಗಿದೆ. ಹೀಗಿದ್ದೂ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸದಿರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಸಾಕ್ಷಿದಾರರ ಮೂವರ ಸ್ವಇಚ್ಚಾ ಹೇಳಿಕೆಗಳನ್ನು ಪೀಠದ ಮುಂದೆ ವಿವರಿಸಿದ ನಾಗೇಶ್ ಅವರು ಹೆಚ್ಚುವರಿ ಚಾರ್ಜ್ ಶೀಟ್ ನಲ್ಲೂ ದೋಷಗಳು ಇವೆ. ಸಾಕಷ್ಟು ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ. ಸಾಕ್ಷಿ ಓರ್ವನ ಮೊಬೈಲ್ ಟವರ್ ಜಂಪ್ ತೋರಿಸಲಾಗಿದೆ.
ಸಾಕ್ಷಿಯೋರ್ವ ಬೇಸಿಕ್ ಮೊಬೈಲ್ ಗೆ ಸಿಮ್ ಹಾಕಿಕೊಂಡು, ಬೇರೆ ಮೊಬೈಲ್ ಮನೆಯಲ್ಲಿಟ್ಟಿದ್ದ ಆರೋಪಿ ವಿನಯ್ಗೆ ಈ ಸಾಕ್ಷಿಯು ಕರೆ ಮಾಡಿದ್ದ ಭಯವಾದ ಕಾರಣ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಹಾಸನಕ್ಕೆ ಹೋಗಿದ್ದೆ ಅಲ್ಲಿ ಇಲ್ಲಿ ಹೋಗಿದ್ದೆ ಅಂತಾ ಸಾಕ್ಷಿ ಹೇಳಿದ್ದಾನೆ. ಈ ರೀತಿ ಕಥೆಗಳನ್ನು ಕಟ್ಟಲಾಗಿದ್ದು ಇವುಗಳನ್ನು ಹೇಗೆ ನಂಬುವುದು ಎಂದ ನಾಗೇಶ್ ಅವರು ಹೆಚ್ಚುವರಿ ಚಾರ್ಜ್ ಶೀಟ್ ದೋಷಗಳಿಂದ ಕೂಡಿದೆ. ಸಾಕ್ತಿಯೋರ್ವನು ತನಗೆ ಭಯವಾದ್ದರಿಂದ ಗೋವಾಗೆ ಹೋಗಿದ್ದೆ ಅಂತಾ ಹೇಳಿದ್ದಾನೆ. ಆದರೆ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಲಾಗಿದೆ.
ಪೊಲೀಸರು ಇತ್ತೀಚೆಗೆ 8 ಫೋಟೋಗಳನ್ನು ರಿಟ್ರೇವ್ ಮಾಡಿದ್ದಾರೆ. ಫೋಟೋಗಳು ಜೂ.ರಂದು ತೆಗೆಯಲಾಗಿದೆ. ಇದನ್ನು ಪ್ರಾಸಿಕ್ಯೂಷನ್ ಹೇಳ್ತಾ ಇದೆ. ಫೋಟೋದಲ್ಲಿ ಸಾಕ್ಷಿ ಧರಿಸಿದ ಪ್ಯಾಂಟ್, ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತೋರಿಸಿರುವ ಪ್ಯಾಂಟ್ ಬೇರೆ ಇದೆ ಇನ್ನು ಸಾಕ್ಷಿಯೋರ್ವ ಗೋವಾಕ್ಕೆ ಹೋಗಲು ಮೊದಲೇ ಪ್ಲಾನ್ ಮಾಡಿದ್ದ ಗೋವಾಗೆ ಗೋಗುವ ಪ್ಲಾನ್ ಮೊದಲೇ ಇತ್ತು ರೇಣುಕಾಸ್ವಾಮಿ ಕೊಲೆ ಜೂ.8ರಂದು ನಡೆದಿದೆ. ಸಾಕ್ಷಿ ಗೋವಾಗೆ ಗೋವಾಗೆ ಹೋಗಲು ಜೂ.21ಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದ ಹೆದರಿಕೊಂಡು ಆತ ಗೋವಾಗೆ ಹೋಗಿಲ್ಲ. ಮೊದಲೇ ಪ್ಲಾನ್ ಮಾಡಿ ಟಿಕೆಟ್ ಕೂಡ ಬುಕ್ ಮಾಡಿಕೊಂಡಿದ್ದ
ಪೊಲೀಸರು ಸಾಕ್ಷಿಯ ಮೊಬೈಲ್‌ನಿಂದ ರಿಟೀವ್ ಆದ ಫೋಟೋಗಳನ್ನು ತೋರಿಸಿದ್ದಾರೆ. ಪೊಲೀಸರು ಸಾಕ್ಷಿಯ ಫೋಟೋದಲ್ಲಿರುವ ಪ್ಯಾಂಟ್, ಅವರು ತೋರಿಸಿರುವ ಪ್ಯಾಂಟ್ ಬೇರೆ ಇದೆ. ಪ್ಯಾಂಟನ್ನೇ ಪೊಲೀಸರು ಬದಲಾಯಿಸಿದ್ದಾರೆ.
ಪೊಲೀಸರು ಜೈಲಿನಿಂದ ರಿಲೀಸ್ ಆದ ಆರೋಪಿ ನಿಂದ ಬಿಡುಗಡೆ ನಂತರವೂ ಅವರ ಇಷ್ಟದಂತೆ ಹೇಳಿಕೆ ಮತ್ತೊಮ್ಮೆ ಪಡೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ವಾದಿಸಿದರು. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲು ತನಿಖಾಧಿಕಾರಿಗಳಿಂದ ವಿಳಂಬ ಆಗಿದೆ. ಲೋಪಗಳಿವೆ. ಹೀಗಾಗಿ ತಮ್ಮ ಕಕ್ಷಿದಾರ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಹೇಳಿಕೆ ದಾಖಲಿಸಲು ವಿಳಂಬ ಮಾಡಿದರೆ ಜಾಮೀನು ನೀಡಬಹುದೆಂಬ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಜಾಮೀನು ಕೋರಿದರು.
ಅಲ್ಲದೆ ದರ್ಶನ್ಗೆ ಕೊಲ್ಲುವ ಉದ್ದೇಶ ಇದ್ದಿದ್ದರೆ ಊಟ ತಂದುಕೊಡಿ, ನೀರು ತಂದು ಕೊಡಿ, ಪೊಲೀಸರ ಮುಂದೆ ಹಾಜರು ಪಡಿಸಿ ಎಂದು ಯಾಕೆ ಹೇಳ್ತಾ ಇದ್ದರೇ.? ಹೇಳುವುದು ಮತ್ತಷ್ಟು ಇದ ಎಂದು ಪ್ರಬಲವಾಗಿ ವಾದ ಮಂಡಿಸಿದರು.
ಇನ್ನು ದರ್ಶನ್ ಅವರ ಆರೋಗ್ಯದ ಸ್ಥಿತಿಗತಿ ಹೇಗಿದೆ ಎಂದು ಪ್ರಶ್ನಿಸಿರುವ ನ್ಯಾಯಮೂರ್ತಿ ವಿಶ್ವಜಿತ್ ಅವರಗೆ ಉತ್ತರಿಸಿದ ನಾಗೇಶ್ ಅವರು, ದರ್ಶನ್ ಅವರನ್ನು ಎಂಆರ್‌ಐ ಪರೀಕ್ಷೆಗೆ ಒಳಪಡಿಸಲಾಗಿದೆ. ಬಿ.ಪಿ ವ್ಯತ್ಯಾಸವಾಗುತ್ತಿದೆ ಹೀಗಾಗಿ ಸರ್ಜರಿಗೆ ಇನ್ನು ಮುಂದಾಗಿಲ್ಲ. ಸರ್ಜರಿಯನ್ನು ವೈದ್ಯರು ನಿರ್ಧರಿಸುತ್ತಾರೆ ಎಂದು ವಿವರಣೆ ನೀಡಿದರು.
ನಂತರ ವಿಚಾರಣೆಯನ್ನು ಪೀಠ ನಾಳೆಗೆ (ನವೆಂಬರ್ 29ಕ್ಕೆ) ಮುಂದೂಡಿತು ಎಂದು ವರದಿಯಾಗಿದೆ.