![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
daily story: ಒಂದೂರಿನ ರಾಜನೊಬ್ಬ ಮದುವೆಯಾಗಲು ನಿರ್ಧರಿಸಿದ. ಆತ ಈ ಆ ವಿಷಯವನ್ನು ಮೊದಲಿಗೆ ತನ್ನ ಕ್ಷೌರಿಕನಿಗೆ ತಿಳಿಸಿದ. ಬಳಿಕ ತನ್ನ ದೇಶದ ಅತ್ಯಂತ ವೃದ್ಧೆಗೆ ತಿಳಿಸಿದ. ನಂತರ ರಾತ್ರಿ ಕಾವಲುಗಾರನಿಗೆ ತಿಳಿಸಿದ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಈ ಸುದ್ದಿ ರಾಜ್ಯದಲ್ಲೆಲ್ಲಾ ಹಬ್ಬಲು ಹೆಚ್ಚು ಕಾಲ ಬೇಕಾಗಲಿಲ್ಲ. ಕ್ಷೌರಿಕ ತನ್ನಲ್ಲಿಗೆ ಬಂದ ಗ್ರಾಹಕರಿಗೆಲ್ಲ ಈ ವಿಷಯ ಅರುಹಿದ ಗ್ರಾಹಕರು ತಮ್ಮ ಪರಿಚಯಸ್ಥರಿಗೆ ಹೇಳಿದರು. ರಾತ್ರಿ ಕಾವಲುಗಾರ ದೊಡ್ಡ ಧ್ವನಿಯಲ್ಲಿ ಈ ಸುದ್ದಿಯನ್ನು ಘೋಷಿಸಿದ. ವೃದ್ಧೆ ಪ್ರತಿಯೊಬ್ಬ ಯುವತಿಗೂ ರಾಜ ಮದುವೆಯಾಗುವ ವಿಷಯ ತಿಳಿಸಿ ಅವರು ತಯಾರಾಗಿರುವಂತೆ ಹೇಳಿದಳು.
ಕ್ಷೌರಿಕನಲ್ಲಿ ರಾಜ ತುಂಬಾ ವಿಶ್ವಾಸವಿರಿಸಿದ್ದಾನೆ ಎಂದು ಅರಿತಿದ್ದ ಮುದುಕಿ ‘ರಾಜ ತನ್ನ ಪತ್ನಿಯನ್ನು ಹೇಗೆ ಆಯ್ಕೆ ಮಾಡುತ್ತಾನೆ’ ಎಂಬುದಾಗಿ ಕ್ಷೌರಿಕನಲ್ಲಿ ಬರಬಹುದು. ಬಂದು ಕನ್ನಡಿಯಲ್ಲಿ ಮುಖ ನೋಡಬೇಕು. ನಾನು ಕೂಡ ಅಲ್ಲೇ ಇರುತ್ತೇನೆ. ರಾಜ ಈ ಜವಾಬ್ದಾರಿ ನನಗೇ ಕೊಟ್ಟಿದ್ದಾನೆ’ ಎಂದು ಕ್ಷೌರಿಕ ಹೆಮ್ಮೆಯಿಂದ ಉತ್ತರಿಸಿದ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಈ ಪರೀಕ್ಷೆಯ ಸುದ್ದಿ ಇಡೀ ರಾಜ್ಯಕ್ಕೆ ಹಬ್ಬಲು ತಡವಾಗಲಿಲ್ಲ. ಆಶ್ಚರ್ಯವೆಂದರೆ ರಾಜನನ್ನು ಮದುವೆಯಾಗಲು ಯಾರೂ ಮುಂದೆ ಬರಲೇ ಇಲ್ಲ. ದಿನಗಳುರುಳಿದವು. ವಾರಗಳು ಉರುಳಿದವು. ಯಾರೂ ಬರಲಿಲ್ಲ. ಕೆಲವು ಮನೆಗಳವರು ತಮ್ಮ ಮಕ್ಕಳನ್ನು ಕಳಿಸಲೆತ್ನಿಸಿದರು. ಆದರೆ ಯಾವ ಹುಡುಗಿಯೂ ಮುಂದೆ ಬರುವ ಧೈರ್ಯ ಮಾಡಲಿಲ್ಲ. ಕೆಲವು ಹುಡುಗಿಯರು ತಮ್ಮ ಸ್ನೇಹಿತೆಯರನ್ನು ಪುಸಲಾಯಿಸಲೆತ್ನಿಸಿದರು. ಆಗಲೂ ಯಾರೂ ಬರಲಿಲ್ಲ.
ರಾಜನಾದರೋ ತುಂಬಾ ಸುಂದರ, ಆತನ ಗುಣಗಳ ಕುರಿತಂತೆಯೂ ಎಲ್ಲರ ಮೆಚ್ಚಿಗೆಯಿತ್ತು. ಜನರಿಗೂ ಆತ ಪ್ರಿಯನಾಗಿದ್ದ. ಆದರೆ ಅವನನ್ನು ಮದುವೆಯಾಗಲು ಮಾತ್ರ ಯಾರೂ ಮುಂದೆ ಬರಲಿಲ್ಲ. ಹಾಗೆಂದು ಮದುವೆಯ ವಯಸ್ಸಿಗೆ ಬಂದ ಹುಡುಗಿಯರಿಗೇನೂ ರಾಜ್ಯದಲ್ಲಿ ಕೊರತೆಯಿರಲಿಲ್ಲ. ಆದರೆ ಕೆಲವರು ತಮಗೆ ಈಗಲೇ ಮದುವೆ ಬೇಡ ಎಂದರು.
ಇನ್ನು ಕೆಲವರು ರಾಜನನ್ನು ಮದುವೆಯಾಗಲು ಕ್ಷೌರಿಕನ ಮುಂದೆ ಪರೀಕ್ಷೆಗೆ ಒಳಪಡಲು ತಾವು ಸಿದ್ಧರಿಲ್ಲ ಎಂಬ ನೆಪ ಹೇಳಿದರು. ಹುಡುಗಿಯರ ಅಪ್ಪಂದಿರು ತಮ್ಮ ಮಕ್ಕಳಿಗೆ ರಾಣಿಯಾಗುವ ಮಹತ್ವಾಕಾಂಕ್ಷೆಯೂ ಇಲ್ಲವೆ ಎಂದು ಖೇದಪಟ್ಟರು. ಹುಡುಗಿಯರ ಅಮ್ಮಂದಿರು ಮಾತ್ರ ಈ ವಿಷಯದಲ್ಲಿ ವಿಕೋ ನಿಗೂಢ ಮೌನ ಕಾಯ್ದುಕೊಂಡರು.
ಪ್ರತಿದಿನ ರಾಜನು ಕ್ಷೌರಿಕನಲ್ಲಿ ಇಂದು ಯಾರಾದರೂ ಬಂದು ಕನ್ನಡಿಗೆ ಮುಖ ತೋರಿಸಿದರೆ ಎಂದು ಪ್ರಶ್ನಿಸುತ್ತಿದ್ದ. ಪ್ರತಿದಿನವೂ ಇಲ್ಲವೆಂಬ ಉತ್ತರ ದೊರಕುತ್ತಿತ್ತು.
‘ಹಾಗಿದ್ದರೆ ನನ್ನನ್ನು ಮದುವೆಯಾಗುವ ಯಾವುದೇ ಕನ್ನೆ ಈ ರಾಜ್ಯದಲ್ಲಿಲ್ಲವೆ ?’ ಎಂದು ರಾಜ ಒಂದು ದಿನ ಉದ್ದರಿಸಿದ.
‘ಮಹಾರಾಜ, ರಾಜ್ಯದ ಅಂಚಿನಲ್ಲಿರುವ ಗುಡ್ಡದಲ್ಲಿ ಬಡ ಯುವತಿಯೊಬ್ಬಳಿದ್ದಾಳೆ. ಆಕೆ ಈ ಮಾಯಾ ಕನ್ನಡಿಯ ಮುಂದೆ ಬಂದು ನಿಂತಾಳು ಎಂದೆನಿಸುತ್ತದೆ. ಆದರೆ ನೀವು ಬಡವಳನ್ನು ಮದುವೆಯಾಗುತ್ತೀರೋ’ ಎಂದು ಕ್ಷೌರಿಕ ಪ್ರಶ್ನಿಸಿದ ‘ನನಗೆ ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲ. ಅನುರೂಪ ಹುಡುಗಿ ಪ್ರಶ್ನಿಸಿದಳು.
‘ರಾಜನಿಗೆ ಅನುರೂಪಳಾದ ಹುಡುಗಿಯನ್ನು ಆಯ್ಕೆ ಮಾಡಬೇಕಾದರೆ ನನಗೆ ತುಂಬಾ ಕಷ್ಟವಿದೆ’ ಎಂದು ಕ್ಷೌರಿಕ ಉತ್ತರಿಸಿದ.
ಮುದುಕಿ ಅಚ್ಚರಿಗೆ ಬಿದ್ದಳು. ‘ನೀನು! ನಿನಗೇನು ಪಾತ್ರ ಇದರಲ್ಲಿ’ ಎಂದು ಅವಳು ಪ್ರಶ್ನಿಸಿದಳು.
‘ರಾಜನ ಮುಖ ಮುಟ್ಟುವ ಅಧಿಕಾರ ಇರುವುದು ನನಗೆ ಮಾತ್ರ ಎಂಬುದು ಮರೆತುಬಿಟ್ಟೆಯಾ?’ ಎಂದ ಕ್ಷೌರಿಕ ಮುಂದುವರಿಸಿ ‘ನನ್ನಲ್ಲಿ ಒಂದು ಮಾಯಾ ಕನ್ನಡಿಯಿದೆ. ಯಾವುದೇ ಹುಡುಗಿ ಅದರಲ್ಲಿ ತನ್ನ ಮುಖ ನೋಡಿದಾಗ ಆಕೆಯ ಚಾರಿತ್ರ್ಯದಲ್ಲೇನಾದರೂ ಹುಳುಕಿದ್ದರೆ ಕನ್ನಡಿಯಲ್ಲಿ ಆಕೆಯ ಮುಖದಲ್ಲಿ ಕಲೆಗಳು ಮೂಡುತ್ತವೆ. ರಾಜನನ್ನು ಮದುವೆಯಾಗಲು ಬಯಸುವ ಹುಡುಗಿ ಮೊದಲಿಗೆ ಈ ಕನ್ನಡಿಯ ಮುಂದೆ ನಿಂತುಕೊಳ್ಳಬೇಕು. ಯಾವುದೇ ಕಲೆ ಮೂಡದ ಹುಡುಗಿಯನ್ನು ರಾಜ ಮದುವೆಯಾಗುತ್ತಾನೆ’.
‘ಮದುವೆಯಾಗಲು ಇದು ಕೂಡ ಒಂದು ಷರತ್ತೆ ?’ ಎಂದಳು ಮುದುಕಿ. ‘ಇದೊಂದೇ ಷರತ್ತು, ಬೇರೇನಿಲ್ಲ. 18ಕ್ಕಿಂತ ಮೇಲಿನ ಯಾವುದೇ ಹುಡುಗಿ ಸಿಕ್ಕರೆ ಸಾಕು. ಮೊದಲಿಗೆ ಆಕೆಯನ್ನು ಬರಹೇಳು. ಆಕೆ ಎಲ್ಲರ ಸಮ್ಮುಖದಲ್ಲಿ ಕನ್ನಡಿಗೆ ಮುಖ ತೋರಿಸಲಿ’ ಎಂದು ರಾಜ ನುಡಿದ.
ಅದರಂತೆ ಆ ಬಡಯುವತಿಗೆ ಕರೆ ಕಳಿಸಲಾಯಿತು. ಆಕೆ ಅರಮನೆಗೆ ಬಂದಳು. ಅರಮನೆಯು ಅಂದು ಜನರಿಂದ ತುಂಬಿತುಳುಕುತ್ತಿತ್ತು. ಅಷ್ಟು ಜನರು ನೆರೆದಿದ್ದುದನ್ನು ನೋಡಿ ಬಡ ಯುವತಿ ನಾಚಿಕೊಂಡಳು. ಸಂಕೋಚದಿಂದ ಮುದುಡಿದಳು.
ರಾಜ ಅವಳನ್ನು ಆಪ್ತವಾಗಿ ಬರಮಾಡಿಕೊಂಡ. ಆಕೆಗೆ ಷರತ್ತನ್ನು ವಿವರಿಸಿದ. ‘ನನ್ನನ್ನು ಮದುವೆಯಾಗಲು ನಿನಗೆ ಇಷ್ಟವಿದೆಯೆ? ಇದೆಯೆಂದಾದರೆ ಆ ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಳ್ಳಬೇಕು. ನಿನ್ನ ಚಾರಿತ್ರ್ಯದಲ್ಲೇನಾದರೂ ಕುಂದಿದ್ದರೆ ನಿನ್ನ ಪ್ರತಿಬಿಂಬದ ಮುಖದಲ್ಲಿ ಕಲೆಗಳು ಮೂಡುತ್ತವೆ’ ಎಂದ.
ಮಹಾರಾಜ, ಪ್ರತಿಯೊಬ್ಬರೂ ತಪ್ಪುಗಳನ್ನು ಎಸಗುವುದು ಸಹಜ. ನಾನೂ ಅದಕ್ಕೆ ಹೊರತಲ್ಲ. ಸಣ್ಣ ಪುಟ್ಟ ತಪ್ಪುಗಳನ್ನು ಎಸಗಿರಲೂ ಬಹುದು. ಆದರೆ ನನ್ನ ಚಾರಿತ್ರ ಶುದ್ಧವಾಗಿಯೇ ಇದೆ ಎಂಬ ವಿಶ್ವಾಸ ನನ್ನದು. ಹಾಗೆಂದು ನನಗೆ ರಾಣಿಯಾಗುವ ಮಹತ್ವಾಕಾಂಕ್ಷೆಯಿಲ್ಲ. ಆದರೆ ಕನ್ನಡಿಯಲ್ಲಿ ಮುಖ ನೋಡಲು ನನಗೆ ಹೆದರಿಕೆಯೂ ಇಲ್ಲ’ ಎನ್ನುತ್ತಾ ಆ ಯುವತಿ ಕನ್ನಡಿಯ ಮುಂದೆ ಹೋಗಿ ನಿಂತಳು. ನೆರೆದಿದ್ದ ಎಲ್ಲರೂ ಆಕೆಯನ್ನು ಸುತ್ತುವರಿದರು. ಪ್ರತಿಬಿಂಬದಲ್ಲಿ ಯಾವುದೇ ಕಲೆ ಮೂಡಲಿಲ್ಲ. ನೆರೆದಿದ್ದ ಮಹಿಳೆಯರಿಗೆ ಏನೋ ಅನುಮಾನ ಮೂಡಿತು. ಅವರೂ ಕನ್ನಡಿಯ ಮುಂದೆ ಬಂದು ನಿಲ್ಲತೊಡಗಿದರು. ಆದರೆ ಕನ್ನಡಿ ಯಥಾಪ್ರಕಾರವಾಗಿತ್ತು. ಇದು ಮಾಯಾ ಕನ್ನಡಿಯಲ್ಲ, ಯಾರ ಮುಖದಲ್ಲೂ ಕಲೆಗಳು ಮೂಡುತ್ತಿಲ್ಲ’ ಎಂದು ಎಲ್ಲರೂ ಉದ್ಧರಿಸಿದರು.
ರಾಜ ಸಾವಧಾನವಾಗಿ ನುಡಿದ ‘ನಿಜ. ಅದು ಮಾಯಾ ಕನ್ನಡಿಯಲ್ಲ. ಆದರೆ ನಿಮ್ಮ ಚಾರಿತ್ರ್ಯದ ಬಗೆಗೆ ನೀವೇ ಅಷ್ಟೊಂದು ವಿಶ್ವಾಸ ಹೊಂದಿಲ್ಲವಾದರೆ ನಿಮಗೆ ರಾಣಿಯಾಗುವ ಅರ್ಹತೆಯೂ ಇಲ್ಲವೆಂದರ್ಥ. ಈ ಹುಡುಗಿಯೇ ನನ್ನ ಪತ್ನಿಯಾಗಲು ತಕ್ಕವಳು’,
ಕೃಪೆ: ಸಾಮಾಜಿಕ ಜಾಲತಾಣ (ಸ್ಪಾನಿಶ್ ಜನಪದ ಕತೆ)