Site icon ಹರಿತಲೇಖನಿ

Astrology beware ದಿನ ಭವಿಷ್ಯ ನ.26: ಈ ರಾಶಿಯವರಿಗೆ ಕೆಲಸದಲ್ಲಿ ಶತ್ರುಗಳು ಹೆಚ್ಚಾಗಬಹುದು ಎಚ್ಚರ..

Keep valuables safe

Keep valuables safe

ದೈನಂದಿನ ರಾಶಿ ಭವಿಷ್ಯ: ಮಂಗಳವಾರ, ನವೆಂಬರ್ 26, 2024| Astrology beware

ಮೇಷ ರಾಶಿ: ಸ್ವಂತ ಕೆಲಸವನ್ನು ಆರಂಭಿಸಲು ಚಿಂತಿಸಿ. ಇದು ನಿಮಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ. ಆದರೆ ಇದರಲ್ಲಿ ನಿಮ್ಮ ಶ್ರಮ ಮತ್ತು ಶ್ರದ್ಧೆ ಮುಖ್ಯವಾಗಿರುತ್ತದೆ.

ವೃಷಭ ರಾಶಿ: ಶ್ರಮವಹಿಸಿ ಕೆಲಸ ಮಾಡುವುದರಿಂದ ಘನತೆ ಗೌರವ ನಿಮ್ಮನ್ನು ಹುಡುಕಿ ಕೊಂಡುಬರುತ್ತದೆ. ಹಣ ಮತ್ತು ಸಂಪತ್ತು ಸಂಬಂಧಗಳಷ್ಟು ದೊಡ್ಡದಲ್ಲ ಎಂದು ಅರ್ಥಮಾಡಿಕೊಳ್ಳಿ.

ಮಿಥುನ ರಾಶಿ: ನಿಮ್ಮ ನಿಜವಾದ ಸಾಮಾರ್ಥ್ಯಗಳನ್ನು ಅರಿತು ಕೊಳ್ಳಿ. ಏಕೆಂದರೆ ನಿಮಗೆ ಶಕ್ತಿಯ ಕೊರತೆಯಿಲ್ಲ. ಆದರೆ ನಿಮ್ಮ ಶಕ್ತಿಯನ್ನು ನಿಮ್ಮ ಸುತ್ತಲು ಜನ ಅನುಮಾನಿಸುತ್ತಾರೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಅರ್ಥ ಮಾಡಿಸುವುದು ಉತ್ತಮ.

ಕಟಕ ರಾಶಿ: ವಿವಿಧ ಮೂಲಗಳಿಂದ ಲಾಭದಾಯಕ ಯೋಗವಿದೆ. ಕೆಲಸದಲ್ಲಿ ಶತ್ರುಗಳು ಹೆಚ್ಚಾಗಬಹುದು. ಇತರರಿಗೆ ಮನವರಿಕೆ ಮಾಡುವ ನಿಮ್ಮ ಕೌಶಲ್ಯ ಗುಣ ಉತ್ತಮ ಲಾಭಾಂಶವನ್ನು ನೀಡುತ್ತದೆ.

ಸಿಂಹ ರಾಶಿ: ನಿಮ್ಮ ಆತ್ಮವಿಶ್ವಾಸ ದಿಂದ ಸುತ್ತಮುತ್ತಲಿನ ಜನರನ್ನು ಮೆಚ್ಚಿಸುವ ಸಾಧ್ಯತೆಯಿದೆ. ಕೆಲವು ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಸೆಯನ್ನು ಹೊಂದಿರುತ್ತಾರೆ.

ಕನ್ಯಾ ರಾಶಿ: ವ್ಯಾಪಾರ ಸಾಲಕ್ಕಾಗಿ ನಿಮ್ಮನ್ನು ಸಂಪರ್ಕಿಸುವವರನ್ನು ನಿರ್ಲಕ್ಷಿಸಿ. ಪೋಷಕರ ಮುಂದೆ ಗುಪ್ತವಿಚಾರಗಳನ್ನು ಬಹಿರಂಗಪಡಿಸಲು ಇದು ಸರಿಯಾದ ಸಮಯ. ಯಾವುದೇ ಕೆಲಸ ಕೈಗೊಂಡರೂ ಅದನ್ನು ಸಾಧಿಸಲು ಶ್ರಮಿಸುವಿರಿ.

ತುಲಾ ರಾಶಿ: ನಿಮಗೆ ಹಣದ ಅವಶ್ಯಕತೆ ಇರುವಾಗ ಹಣದ ಬೆಲೆ ನಿಮಗೆ ತಿಳಿಯಲಿದೆ. ಇದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ. ಹಣ ಖರ್ಚು ಮಾಡುವ ಮುನ್ನ ಯೋಚಿಸಿ. ನಿಮ್ಮ ಕುಟುಂಬದ ಸದಸ್ಯರು ನೀಡುವ ಸಲಹೆಯ ನ್ನು ಅನುಸರಿಸಿ.

ವೃಶ್ಚಿಕ ರಾಶಿ: ನಿಮ್ಮ ಆಕರ್ಷಕ ನಡವಳಿಕೆಯು ಇಂದು ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿಯವರೆಗೆ ಹೆಚ್ಚು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಿದ್ದರೆ ಅದನ್ನು ತಪ್ಪಿಸಿ. ತುರ್ತು ಅಗತ್ಯವಿದ್ದಾಗ ನಿಮಗೆ ಹಣದ ಮಹತ್ವ ಅರ್ಥವಾಗುತ್ತದೆ.

ಧನಸ್ಸು ರಾಶಿ: ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಯೊಂದಿಗೆ ನಿಮ್ಮ ನಿರಂತರ ಪ್ರಯತ್ನವು ನಿಮ್ಮ ಯಶಸ್ಸನ್ನು ಅಭಿವೃದ್ಧಿ ಪಡಿಸುತ್ತದೆ. ಇದಕ್ಕಾಗಿ ನಿಮ್ಮ ತಾಳ್ಮೆ ಮುಖ್ಯವಾಗುತ್ತದೆ. ಊಹಾಪೋಹ ಅಥವಾ ಅನಿರೀಕ್ಷಿತ ಲಾಭಗಳ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

ಮಕರ ರಾಶಿ: ಕೆಲಸದಲ್ಲಿ ಶ್ರಮ ವಹಿಸಿ ಕೆಲಸ ಮಾಡುವುದು ನಿಮ್ಮನ್ನು ಕೊನೆವರೆಗೂ ಕೈ ಹಿಡಿಯುತ್ತದೆ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಸಾಧ್ಯತೆ.

ಕುಂಭ ರಾಶಿ: ಕೆಲಸದ ಕ್ಷೇತ್ರದಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು. ನೀವು ಮಾಡುವ ಯಾವುದೇ ಕೆಲಸವು ತಕ್ಷಣವೇ ಫಲಿತಾಂಶವನ್ನು ನೀಡುತ್ತದೆ. ನೀವು ಮಕ್ಕಳಿಗಾಗಿ ಯಾವುದೇ ಹೂಡಿಕೆ ಅಥವಾ ಆಸ್ತಿಯನ್ನು ತೆಗೆದುಕೊಳ್ಳಬಹುದು.

ಮೀನ ರಾಶಿ: ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೊಸ ಗುರಿಗಳನ್ನು ಹೊಂದಲು ಈ ದಿನವು ಮಂಗಳಕರವಾಗಿದೆ. ಈಗ ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತಿದೆ. ನೀವು ಹಳೆಯ
ಸಾಲಗಳಿಂದ ಮುಕ್ತರಾಗುತ್ತೀರಿ.

ರಾಹುಕಾಲ: 03:00PM ರಿಂದ 04:30PM
ಗುಳಿಕಕಾಲ: 12:00PM ರಿಂದ 01:30PM
ಯಮಗಂಡಕಾಲ: 09:00AM ರಿಂದ 10:30AM

Exit mobile version