ನೆಲಮಂಗಲ: ಮಹಿಳೆಯನ್ನು ಕೊಂದು, ರುಂಡವನ್ನು ಭಕ್ಷಿಸಿ ಕಾಣೆಯಾಗಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳ ಸತತ ಒಂದು ವಾರದಿಂದ ನಡೆಸಿದ ಕಾರ್ಯಚರಣೆ ಬಳಿಕ ಸೆರೆ ಸಿಕ್ಕಿದೆ (leopard catching).
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಇಂದು ಬೋನನ್ನು ಗಮನಿಸಿದಾಗ ಚಿರತೆ ಸೆರೆಯಾಗಿರುವುದು ಗೊತ್ತಾಗಿದೆ.
ನ.18ರಂದು ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಟ್ಟಿಯ ಕರಿಯಮ್ಮ ಅವರನ್ನು ಸಂಜೆ 5ರ ಸಮಯದಲ್ಲಿ ಚಿರತೆ ಕೊಂದು ಎಳೆದುಕೊಂಡು ಹೋಗಿತ್ತು.
ಇದರಿಂದ ಗ್ರಾಮದ ಜನರು ಆತಂಕಗೊಂಡಿದ್ದರು. ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಅನೇಕ ಬೋನುಗಳನ್ನು ಇಟ್ಟಿದ್ದರು.