ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ (karthika masam) ಕೊನೆಯ ಸೋಮವಾರದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ನ.25 ರಂದು ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ನಗರದ ಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್, ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದಿಂದ ನ.25 ರಂದು ಕರ್ನಾಟಕ ರಾಜ್ಯೋತ್ಸವ ಹಾಗೂ ಕಡಲೇಕಾಯಿ ಪರಿಷೆ ನಡೆಯಲಿದೆ.
ನ.25 ರಂದು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ, 11.30ಕ್ಕೆ ಉತ್ಸವ ಮೂರ್ತಿಯ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಕಡಲೇಕಾಯಿ ಪರಿಷೆ ನಡೆಯಲಿದೆ. ನ.26ರಂದು ಸಂಜೆ 6 ಗಂಟೆಗೆ ಉಯ್ಯಾಲೋತ್ಸವ ನಡೆಯಲಿದೆ.
ನಗರದ ತೇರಿನಬೀದಿಯಲ್ಲಿನ ಪ್ರಸನ್ನ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ನ.25ರ ಕಾರ್ತಿಕ ಕಡೆಯ ಸೋಮವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರಾಕಾರೋತ್ಸವ ಹಾಗೂ ವಿಶೇಷ ಪೂಜೆ ಆಯೋಜಿಸಲಾಗಿದೆ.
ತಾಲ್ಲೂಕಿನ ಶಿರವಾರ, ಅಂತರಹಳ್ಳಿ ಗ್ರಾಮದಲ್ಲಿನ ತೋಪಿನ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇಕಾಯಿ ಪರಿಷೆ ನ.25 ರಂದು ನಡೆಯಲಿದೆ. ಸಂಜೆ ಬಸವೇಶ್ವರಸ್ವಾಮಿ ಮೆರವಣಿಗೆ ಜರುಗಲಿದೆ.
ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರದ ಕಾಶಿ ವಿಶ್ವನಾಥ ದೇವಾಲಯದಲ್ಲಿ 2.25 ರಂದು ಏಕವಾರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಸಂಜೆ ಲಕ್ಷ ದೀಪೋತ್ಸವ, ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳಿವೆ.
ದೊಡ್ಡಬೆಳವಂಗಲ ಸಮೀಪದ ತೋಪಯ್ಯನ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅರಳುಮಲ್ಲಿಗೆ ಸಮೀಪದ ಎಸ್.ಎಂ. ಗೊಲ್ಲಹಳ್ಳಿ ದಿನ್ನೆಯೆ ಬಯಲು ಬಸವಣ್ಣ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.ದೇವಾಲಯದಲ್ಲಿ 2.25 ರಂದು ಏಕವಾರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಸಂಜೆ ಲಕ್ಷ ದೀಪೋತ್ಸವ, ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳಿವೆ.
ದೊಡ್ಡಬೆಳವಂಗಲ ಸಮೀಪದ ತೋಪಯ್ಯನ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅರಳುಮಲ್ಲಿಗೆ ಸಮೀಪದ ಎಸ್.ಎಂ. ಗೊಲ್ಲಹಳ್ಳಿ ದಿನ್ನೆಯೆ ಬಯಲು ಬಸವಣ್ಣ ದೇವಾಲಯ, ಆರೂಢಿಯ ಶ್ರೀ ಕೋಡಿ ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.