ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೊನೆ ಕಾರ್ತಿಕ ಸೋಮವಾರ ಅಂಗವಾಗಿ ಭಕ್ತಾದಿಗಳಿಂದ ಲಕ್ಷ ದೀಪೋತ್ಸವ (lakshadeepotsava) ಆಯೋಜಿಸಲಾಗಿತ್ತು.
ಮುಂಜಾನೆ ಮಹಾರುದ್ರಾಭಿಷೇಕ ವಿಶೇಷ ಪೂಜೆ ಅಲಂಕಾರಗಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆ ಲಕ್ಷದೀಪೋತ್ಸವ (lakshadeepotsava) ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತೆರೆಕಂಡಿತು.
ನಾಟ್ಯ ಸರಸ್ವತಿ ನೃತ್ಯ ಶಾಲೆಯ ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನ, ಶಿವ ತಾಂಡವ ನೃತ್ಯ ಅದ್ಭುತವಾಗಿತ್ತು.
ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಹಿಂದೂಗಳಿಗೆ ಕಾರ್ತಿಕಮಾಸ ಶ್ರೇಷ್ಠ ಮಾಸ ಅದರಲ್ಲೂ ಕಾರ್ತಿಕ ಸೋಮವಾರ ಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದ ಕಾರ್ತಿಕ ಸೋಮವಾರದಿಂದ ಬೆಳಗ್ಗಿನಿಂದ ಉಪವಾಸವಿದ್ದು ಸಂಜೆ ಶಿವ ದರ್ಶನ ಪಡೆದು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ದರೆಂದು ಯುವ ಮುಖಂಡ ಉದಯ್ ಆರಾಧ್ಯ ತಿಳಿಸಿದ್ದಾರೆ.