Site icon ಹರಿತಲೇಖನಿ

Be careful while traveling| ದಿನ ಭವಿಷ್ಯ: ಈ ರಾಶಿಯವರು ಪ್ರಯಾಣದಲ್ಲಿ ಎಚ್ಚರ

Keep valuables safe

Keep valuables safe

ದೈನಂದಿನ ರಾಶಿ ಭವಿಷ್ಯ: ಸೋಮವಾರ, ನವೆಂಬರ್ 25, 2024| astrology predictions, Be careful while traveling

ಮೇಷ ರಾಶಿ: ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಲಿದೆ. ಕೋರ್ಟು ಕಚೇರಿಯ ಕೆಲಸಗಳು ನಿಮ್ಮಂತೆ ಆಗುವುದು. ಸಂಬಂಧಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬರುವುದು.

ವೃಷಭ ರಾಶಿ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ.ಮಾತಿಗಿಂತ ಮೌನವಾಗಿರಿ. ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಹೆಜ್ಜೆ ಇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಿಥುನ ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಸುಲಭವಾಗಿ ಗುರಿಮುಟ್ಟಲು ಸಾಧ್ಯವಿದೆ.ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಸುಲಭವಾಗಿ ಗುರಿಮುಟ್ಟಲು ಸಾಧ್ಯವಿದೆ. ಸಹನೆ, ತಾಳ್ಮೆಯನ್ನು ಬೆಳೆಸಿಕೊಂಡಲ್ಲಿ ಇಚ್ಛಿತ ಗುರಿಯನ್ನು ಮುಟ್ಟಲು ಸಹಕಾರಿಯಾಗುವುದು.

ಕಟಕ ರಾಶಿ: ನಿರ್ದಿಷ್ಟ ಗುರಿ ತಲುಪಿದ್ದಕ್ಕೆ 
ನಿಮ್ಮನ್ನು ಅಭಿನಂದಿಸುವರು.
ಹವಾಮಾನ ವೈಪರೀತ್ಯದಿಂದ ದೂರದ ಪ್ರಯಾಣ ರದ್ದು ಮಾಡುವ ಪ್ರಮೇಯ ಬರಲಿದೆ.

ಸಿಂಹ ರಾಶಿ: ಹೊಸ ಉದ್ಯೋಗ ನಿಮ್ಮ ಕೈ ಹಿಡಿಯಲಿದ್ದು, ಹೆಚ್ಚಿನ ಆದಾಯ ನಿಮ್ಮದಾಗಲಿದೆ. ಅದಕ್ಕೆ ಪ್ರೇರಣೆ ಇತ್ತೀಚೆಗೆ ನಿಮ್ಮ ಬಂಧುಗಳ ಮನೆಯಲ್ಲಿ ನಡೆದ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಉತ್ತಮವಾದ ವಿಚಾರವನ್ನು ಅನುಕರಣೆ ಮಾಡುವುದು ತಪ್ಪಲ್ಲ.

ಕನ್ಯಾ ರಾಶಿ: ದಿಢೀ‌ರ್ ಧನಲಾಭದಿಂದ ಹಳೆಯ ಸಾಲಗಳೆಲ್ಲಾ ತೀರಲಿದೆ. ಶುಭದಿನ. ಪರರು ನಿಮ್ಮನ್ನು ಕೆಣಕಿದಾಗ ಮಾತ್ರ ನಿಮ್ಮ ಬುದ್ಧಿಶಕ್ತಿಯು ಜಾಗೃತವಾಗುವುದು. ಇದು ನೋಡುಗರನ್ನು ಆಶ್ಚರ್ಯ ಪಡಿಸುವುದು.

ತುಲಾ ರಾಶಿ: ಎಲ್ಲರೂ ನಿಮ್ಮ ಮಾತನ್ನು ಕೇಳಬೇಕು ಎಂಬ ಹಠವನ್ನು ಬಿಟ್ಟು ವಿಶಾಲವಾಗಿ ಚಿಂತಿಸಿ. ಭವಿಷ್ಯದ
ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈದಿನ ಹೊರಬರಬೇಕು.

ವೃಶ್ಚಿಕ ರಾಶಿ: ಮನೆ ಮತ್ತು ಕಚೇರಿ ಕೆಲಸದ
ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗುವುದು. ಎಲ್ಲರನ್ನೂ
ಎಲ್ಲ ಕಾಲಕ್ಕೂ ಖುಷಿ ಪಡಿಸಲು ಆಗುವುದಿಲ್ಲ. ಮನಸು ದಣಿದರೆ ವಿಶ್ರಾಂತಿ ಪಡೆಯುವುದು ಒಳ್ಳೆಯದು.

ಧನಸ್ಸು ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಸನ್ಮಾನ ಸ್ವೀಕರಿಸಲು ಸಿದ್ಧರಾಗುವಿರಿ. ಕೌಟುಂಬಿಕ ಜೀವನದ ವಿಚಾರವಾಗಿ ಉತ್ತಮ
ಪ್ರತಿಕ್ರಿಯೆ ದೊರೆಯುವುದು.

ಮಕರ ರಾಶಿ: ನಿಮ್ಮಿಂದ ಉಪಕಾರ ಪಡೆದ ಮಹನೀಯರು ನಿಮ್ಮನ್ನು ಅಭಿನಂದಿಸುವರು. ವ್ಯಾಪಾರ-ವ್ಯವಹಾರವೂ ಸಲೀಸಾಗಿ ಆಗುವುದು. ಬರಬೇಕಾಗಿದ್ದ ಹಣ ಕೈಸೇರುವುದು. ಪ್ರಯಾಣದಲ್ಲಿ
ಎಚ್ಚರ ಅಗತ್ಯ.

ಕುಂಭ ರಾಶಿ: ಷೇರು ವ್ಯವಹಾರದಲ್ಲಿ ತೊಡಗಿಸಿಕೊ೦ಡವರಿಗೆ ಅಲ್ಪ ಪ್ರಮಾಣದ ಲಾಭವಾಗಲಿದೆ. ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು.
ಕೋರ್ಟು ಕಚೆರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು.

ಮೀನ ರಾಶಿ: ಅನವಶ್ಯಕ ಚಿಂತನೆಯಿಂದ ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರ. ಅಂತೆಯೇ ನೀವು ಯಾರನ್ನು ಗೌರವದಿಂದ ಕಾಣುತ್ತಿರುವಿರೋ ಅವರನ್ನು ಅವಮಾನಿಸಬೇಡಿ. ಭಿನ್ನಾಭಿಪ್ರಾಯವಿದ್ದಲ್ಲಿ
ಒಂಡೆಡೆ ಸೇರಿ ಬಗೆಹರಿಸಿಕೊಳ್ಳಿ.

ರಾಹುಕಾಲ: 09:00 ರಿಂದ 10:30
ಗುಳಿಕಕಾಲ: 06:00 ರಿಂದ 07:30
ಯಮಗಂಡಕಾಲ: 01:30 ರಿಂದ 03:00

Exit mobile version