Site icon ಹರಿತಲೇಖನಿ

channapatna by election| ನಿಖಿಲ್ ಸೋಲು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ..!

ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ (channapatna by election) ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಯೋಗೇಶ್ವರ್ ವಿರುದ್ಧ ಸೋತಿದ್ದಾರೆ.

Aravind, BLN Swamy, Lingapura

ಜೆಡಿಎಸ್‌ ನಾಯಕ ನಿಖಿಲ್ ಕುಮಾರಸ್ವಾಮಿ ಮೂರನೇ ಸೋಲು ಅವರ ಕುಟುಂಬದವರಿಗೆ, ಜೆಡಿಎಸ್ ಪಕ್ಷದವರಿಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಆಘಾತ ತಂದಿದೆ. ಇದರ ಪರಿಣಾಮ ನಿಖಿಲ್ ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ವರದಿಯಾಗಿದೆ.

ಚನ್ನಪಟ್ಟಣದ ಕೂಡೂರು ಬಳಿಯ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿಯಾಗಿದ್ದಾನೆ.

Aravind, BLN Swamy, Lingapura

ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್ ಎಂದು ಪತ್ರ ಬರೆದಿಟ್ಟು ಅವರು ವಿಷ ಸೇವನೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮಂಜುನಾಥ್ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನಪಟ್ಟಣದ ಬೈ ಎಲೆಕ್ಷನ್ ರಿಸಲ್ಟ್ ನಿನ್ನೆ ಪ್ರಕಟವಾಗಿದ್ದು, ಕಾಂಗ್ರೆಸ್ ನ ಯೋಗೇಶ್ವರ್ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಿಖಿಲ್ ಎದುರು ಭರ್ಜರಿ ಗೆಲುವು ದಾಖಲಿಸಿದ್ದಾರೆ.

Exit mobile version