ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ಚನ್ನಾದೇವಿ ಅಗ್ರಹಾರದಲ್ಲಿ ಚಿಗುರು ಸ್ವಸಹಾಯ ಸಂಘ ಮತ್ತು ಪ್ರಗತಿ ಯುವಕ ಸಂಘದ ವತಿಯಿಂದ ನ.24 ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಗೆಹಬ್ಬ ಸಂಭ್ರಮ ಬೆಳಿಗ್ಗೆ 8.30 ರಿಂದ ರಾತ್ರಿ 10 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಾದೇವಿ ಅಗ್ರಹಾರ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ನಂಜೇಗೌಡ ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎನ್.ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪಿ.ಬೈಲಾಂಜಿನಪ್ಪ, ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ವಿ.ಗೋಪಿನಾಥ್, ನೇತಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಡಾ.ಜಿ.ವಿಜಯಲಕ್ಷ್ಮೀ ರಮೇಶ್ ಗೌಡ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಯಿಂದ ನಡೆಯಲಿರುವ ನಗೆ ಹಬ್ಬ ಸಂಭ್ರಮದಲ್ಲಿ ಪ್ರೊ.ಕೃಷ್ಣೇಗೌಡ, ಡಾ.ಬಸವರಾಜ ಬೆಣ್ಣೆ, ಕೋಗಳಿ ಕೊಟ್ರೇಶ್ ಇಂದುಮತಿ ಸಾಲಿಮಠ್ ಭಾಗವಹಿಸಲಿದ್ದಾರೆ.