ಚನ್ನಪಟ್ಟಣದ: ಈ ಉಪಚುನಾವಣೆ ಫಲಿತಾಂಶ ( By election result) ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದು ಶಾಸಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಓರ್ವ ಸಾಮಾನ್ಯ ವ್ಯಕ್ತಿಯ ಅಭಿವೃದ್ದಿ ಹಾಗೂ ಸ್ವಾಭಿಮಾನದ ಪರವಾಗಿ ಇಡೀ ಚನ್ನಪಟ್ಟಣ ಕ್ಷೇತ್ರವೇ ನಿಂತು ಇತಿಹಾಸ ನಿರ್ಮಿಸಿದ ದಿನವಿದು.
ಈ ನನ್ನ ಗೆಲುವನ್ನು ಚನ್ನಪಟ್ಟಣದ ಸಮಸ್ತ ಸ್ವಾಭಿಮಾನಿ ಮತದಾರರಿಗೆ ಅರ್ಪಿಸುತ್ತಿದ್ದೇನೆ. ಈ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ನನ್ನ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಕಟ್ಟಾಳುಗಳು, ಮುಖಂಡರು ಹಾಗೂ ನಾಯಕರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.
ಈ ಸ್ವಾಭಿಮಾನ ಗೆಲುವಿಗೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್.
ಮಂತ್ರಿಗಳಾದ ರಾಮಲಿಂಗ ರೆಡ್ಡಿ ಎಚ್ ಸಿ ಮಾದೇವಪ್ಪ, ಕೆಎಚ್ ಮುನಿಯಪ್ಪ, ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್, ವೆಂಕಟೇಶ್, ಸುಧಾಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್.
ಶಾಸಕ ಮಿತ್ರರುಗಳಾದ ಎಚ್ ಸಿ ಬಾಲಕೃಷ್ಣ, ಎಸ್‌ಟಿ ಸೋಮಶೇಖರ್, ಶರತ್ ಬಚ್ಚೇಗೌಡ, ರಂಗನಾಥ್, ಇಕ್ಬಾಲ್ ಹುಸೇನ್, ಹ್ಯಾರಿಸ್, ರಿಜ್ವಾನ್ ಹರ್ಷದ್, ಉದಯ್, ಶ್ರೀನಿವಾಸ್, ಪುಟ್ಟಣ್ಣ, ರವಿ, ನರೇಂದ್ರಸ್ವಾಮಿ, ಪ್ರದೀಪ್ ಈಶ್ವರ್, ನಂಜೇಗೌಡ, ಶಿವಣ್ಣ, ಸಿ ಎಂ ಲಿಂಗಪ್ಪ ರವರಿಗೆ, ರಾಮೋಜಿ ಗೌಡ, ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗಾರ್.
ಗ್ಯಾರಂಟಿ ಸಮಿತಿ ಅಧ್ಯಕ್ಷಎಚ್ಎಮ್ ರೇಮಣ್ಣ, ಮುಖಂಡರುಗಳಾದ ರಘುನಂದನ್ ರಾಮಣ್ಣ, ಮಾಜಿ ಶಾಸಕರುಗಳಾದ ಕೆ ರಾಜಣ್ಣ, ಎಂ.ಸಿ ಅಶ್ವತ್, ಮಾಜಿ ಶಾಸಕಿ ಸೌಮ್ಯ ರೆಡ್ಡಿ ರವರಿಗೆ, ಮುಖಂಡರುಗಳಾದ ವಿಶ್ವನಾಥ್, ಹನುಮಂತರಾಯಪ್ಪ, ನಾರಾಯಣಗೌಡ, ವಿಜಯ್ ದೇವ್ ಹಾಗೂ ಕಾಂಗ್ರೆಸ್ ನ ರಾಜ್ಯ, ಜಿಲ್ಲಾ, ತಾಲೂಕು ನಾಯಕರಿಗೆ, ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.