ದೊಡ್ಡಬಳ್ಳಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ (priyank kharge) ಅವರ ಜನ್ಮದಿನದ ಹಿನ್ನೆಲೆಯಲ್ಲಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಕಾಂಗ್ರೆಸ್ ಯುವಮುಖಂಡ ಪುನಿತ್ ಅವರ ನೇತೃತ್ವದಲ್ಲಿ ತಾಲೂಕಿನ ತಳಗವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿಗಳಾದ ಪೆನ್, ಪೆನ್ಸಿಲ್, ಡಿಕ್ಷನರಿ, ನೋಟ್ ಪುಸ್ತಕಗಳನ್ನು ವಿತರಿಸಿ, ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವನ್ನು ಆಚರಿಸಿದರು.
ಈ ಕುರಿತು ಮಾಹಿತಿ ನೀಡಿದ ತಳಗವಾರ ಪುನೀತ್ ಅವರು, ಜನ್ಮದಿನವನ್ನು ಅದ್ಧೂರಿ, ಆಡಂಬರದಿಂದ ಮಾಡದೆ ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ರೀತಿಯಲ್ಲಿ ಇರಲಿ ಎಂದು ಪಿಯಾಂಕ್ ಖರ್ಗೆ (priyank kharge) ಅವರ ಸೂಚನೆ ಮೇರೆಗೆ ಹಾಗೂ ಸರ್ಕಾರಿ ಶಾಲೆಯ ಉಳಿವಿಗಾಗಿ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ವೇಳೆ ಮುಖಂಡರಾದ ಟಿವಿ ತಿಮ್ಮೇಗೌಡ, ಮುದ್ದುಕೃಷ್ಣ, ವಾಸು, ಅಭಿಷೇಕ್, ರಂಗಸ್ವಾಮಿ, ನವೀನ್, ಕಿರಣ್, ಮುಖ್ಯಶಿಕ್ಷಕರಾದ ಜಗನಾಥ್, ಸಹ ಶಿಕ್ಷಕ ಮಂಜುನಾಥ್ ಇದ್ದರು.