Love Reddy| ದರ್ಶನ್ ಬಗ್ಗೆ ಮಾತಾಡಲು ನಿನಗೇನ್ ಅರ್ಹತೆ ಇದೆ..?; ಲೈವ್‌ನಲ್ಲೆ ಜಗದೀಶ್ಗೆ ಹಿಗ್ಗಾಮುಗ್ಗಾ ತರಾಟೆ| video

ಬೆಂಗಳೂರು: ಲವ್ ರೆಡ್ಡಿ (Love Reddy) ಸಿನಿಮಾದ ಪ್ರಮೋಷನ್ ವೇಳೆ ಅನಾವಶ್ಯಕವಾಗಿ ನಟ ದರ್ಶನ್ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ಗೆ ನೇರ ಪ್ರಸಾರದಲ್ಲಿಯೇ ಲವ್ ರೆಡ್ಡಿ ಸಿನಿಮಾ ನಿರ್ಮಾಪಕ ರವೀಂದ್ರ ರೆಡ್ಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓದಲ್ಲಿ ಬಂದಲ್ಲಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಗದೀಶ್ ಅವರಿಗೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ.

ತೆಲುಗಿನ ಹಿಟ್ ಸಿನಿಮಾ Love Reddy ಇಂದು (ನ.22) ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ ‘ಲವ್ ರೆಡ್ಡಿ’ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದೂ ಅಲ್ಲದೇ ಸ್ಟಾರ್​ ನಟರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದೆ.

ಕನ್ನಡದಲ್ಲಿ Love Reddy ಸಿನಿಮಾ ಬಿಡುಗಡೆ ಕುರಿತು ಸಿನಿಮಾ ತಂಡ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದು, ವಿವಿಧ ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡುತ್ತಿದೆ.

ಈ ಪ್ರಮೋಷನ್ ವೇಳೆ ಸಂದರ್ಶಕನಾಗಿ ಭಾಗವಹಿಸಿದ್ದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮುಜುಗರಕ್ಕೆ ಒಳಗಾದ ಘಟನೆ ನಡೆದಿದ್ದು, ದರ್ಶನ್ ವಿಚಾರದಲ್ಲಿ ಅನಾವಶ್ಯಕವಾಗಿ ಪದೇ ಪದೇ ಮೂಗು ತೂರಿಸುವ ಅರ್ಹತೆ ನಿನಗೇನಿದೆ ಎಂದು Love Reddy ಸಿನಿಮಾ ನಿರ್ಮಾಪಕ ನೇರ ಸಂದರ್ಶನದಲ್ಲಿಯೇ ಜಾಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪ್ರಮೋಷನ್ ವೇಳೆ Love Reddy ಸಿನಿಮಾ ನಾಯಕ ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ ರೆಡ್ಡಿ ಹಾಗೂ ಸಿನಿಮಾ ನಿರ್ಮಾಪಕ ರವಿಂದ್ರ ರೆಡ್ಡಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂದರ್ಶಕ ಜಗದೀಶ್ ಪದೇ ಪದೇ ನಟ ದರ್ಶನ್ ಅವರ ಹೆಸರನ್ನು ಅನಾವಶ್ಯಕವಾಗಿ ಉಲ್ಲೇಖಿಸಿದ್ದು ನಿರ್ಮಾಪಕ ರವೀಂದ್ರ ರೆಡ್ಡಿ ಅವರನ್ನು ಕೆರಳಿಸಿದೆ. ನೇರ ಸಂದರ್ಶನದಲ್ಲಿಯೇ ಸಿಡಿದೆದ್ದಿರುವ ರವೀಂದ್ರ ರೆಡ್ಡಿ, ದರ್ಶನ್ ಹೆಸರು ಬೇಡ ಸರ್ ಪಾಪಾ ಅವರ ಕಷ್ಟದಲ್ಲಿ ಅವರಿದ್ದಾರೆ. ಅವರ ಹೇಸರೇನುಕ್ ಇಲ್ ತರ್ತೀರಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಫೇಸ್‌ಬುಕ್‌ ಸೇರಿದಂತೆ ಓದಲ್ಲಿ ಒಂದಲ್ಲಿ ದರ್ಶನ್ ಹೆಸರನ್ನು ಏತಕ್ಕೆ ಪ್ರಸ್ತಾಪ ಮಾಡ್ತಿರಿ ನಿಮಗೇನ್ ಅರ್ಹತೆ, ಹಕ್ಕಿದೆ ಎಂದಿದ್ದಾರೆ. ಈ ವೇಳೆ ಜಗದೀಶ್ ಅವರು ದರ್ಶನ್ ಏನ್ ನಿನ್ ಪ್ರಾಪರ್ಟಿನಾ..? ದರ್ಶನ್ ಹೆಸರು ನಿನ್ ಜಿಪಿಎ ಮಾಡ್ಕೊಂಡಿದ್ದೀಯ…? ಈ ರೀತಿ ಮಾತಾಡಿದರೆ ಇಂಟರ್ ವ್ಯೂ ಮಾಡಬೇಕಾ ಬೇಡವಾ ಅನಿಸ್ತಾ ಇದೆ ಎಂದಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ರವೀಂದ್ರ ರೆಡ್ಡಿ, ನಿನ್ ಇಂಟರ್ ವ್ಯೂ ಮಾಡದಿದ್ದರೆ ಬೇಡ, ನೀನ್ ಏನುಕ್ ಅನಾವಶ್ಯವಾಗಿ ದರ್ಶನ್ ಹೆಸರು ಪ್ರಸ್ತಾಪ ಮಾಡ್ತಿಯಾ..? ನಿನಗೇನ್ ಅರ್ಹತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಾಯಕನಟ ಅಂಜನ್ ರಾಮಚಂದ್ರ ಮಧ್ಯ ಪ್ರವೇಶಿಸಿದ್ದು, ಜಗದೀಶ್ ಅವರನ್ನು ಕುಳ್ಳರಿಸಿ, ರವೀಂದ್ರ ರೆಡ್ಡಿ ಅವರನ್ನು ಸಮಾಧಾನಿಸಲು ಪಯತ್ನಿಸಿದರಾದರು, ಇಂಟರ್ ವ್ಯೂ ಬೇಡವೆಂದು ರವೀಂದ್ರ ರೆಡ್ಡಿ ಹೊರನಡೆದಿದ್ದಾರೆ.

ಇದರಿಂದ ಮುಜುಗರಕ್ಕೀಡಾದ ಜಗದೀಶ್ ಓಗ್ಲಿ ಬನ್ರಿ ಬನ್ರಿ ಎಂದರಾದರು, ಬೇಕಿಲ್ಲ ಓಗ್ರಿ ಎಂದು ದಿಕ್ಕರಿಸಿ ರವೀಂದ್ರ ರೆಡ್ಡಿ ನಡೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ನಂತರ ಮುಂದುವರಿದ ಸಂದರ್ಶನದಲ್ಲಿ ಸಿನಿಮಾ ತಂಡದ ಕ್ಷಮೆ ಕೋರಿರುವ ಜಗದೀಶ್, ದರ್ಶನ್ ಬಗ್ಗೆ ನನಗೂ ಅಭಿಮಾನವಿದೆ. ನಾನು ಅಭಿಮಾನಿಯೇ.. ನೋಡಿ ದರ್ಶನ್ ಅವರ ಅಭಿಮಾನಿಗಳು ಎಲ್ ಎಲ್ ಇದ್ದಾರೆ. ಅವರೊಂದು ಹಿರಿಯ ನಟ, ಅವರ ಸಲಹೆ ನಮಗೆಲ್ಲ ಬೇಕು, ದರ್ಶನ್ ಆಕಾಶದಲ್ಲಿ ಸೂರ್ಯ ಇದ್ದಂತೆ ಎಂದು ತೇಪೆ ಹಚ್ಚಲು ಮುಂದಾದರು.

ಜಗದೀಶ್ ಮಾತಿಗೆ ಬ್ರೇಕ್ ಹಾಕಿದ ತಡೆದ ನಟ ಅಂಜನ್ ರಾಮಚಂದ್ರ, ಜನರನ್ನು ತಲುಪು ಸಲುವಾಗಿ ನಿಮ್ಮ ಮೂಲಕ ಈ ಪ್ರಮಖಷನ್ ಭಾಗವಹಿಸಿದ್ದೇವೆ. ಆದರೆ ನೀವು ಪದೇ ಪದೇ ದರ್ಶನ್ ಸರ್ ಅವರ ಹೆಸರು ಬಳಸಿದ್ದು ಎಲ್ಲಿಂದ ಎಲ್ಲಿಗೋ ಹೋಗುತ್ತದೆ.

ನಮಗೆ ದರ್ಶನ್ ಸರ್ ಅಂದರೆ ಅಪಾರ ಪ್ರೀತಿ ದಯವಿಟ್ಟು ಇಲ್ಲಿಂದ ಬಿಟ್ಟು ಬಿಡಿ ಎಂದಿದ್ದಾರೆ.

ರಾಜಕೀಯ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ Annamalai

[ccc_my_favorite_select_button post_id="104958"]
ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಇಷ್ಟು ದಿನ ಬಾಯಿ ಮಾತಲ್ಲೇ ಸುಂಕ ಸಂಘರ್ಷದ ಮಾತುಗಳನ್ನು ಆಡುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮಧ್ಯರಾತ್ರಿ 2.20 (ಭಾರತೀಯ ಕಾಲಮಾನ) trump

[ccc_my_favorite_select_button post_id="104924"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

ದೇವಾಲಯದ ಬಾಗಿಲು ಮೀಟಿ ಒಳಬಂದಿರುವ ಅಪರಿಚಿತ ದುಷ್ಕರ್ಮಿ, ಹುಂಡಿಯನ್ನು ಹೊಡೆದು ಕಳ್ಳವು ನಡೆಸಿದ್ದಾನೆ ಎನ್ನಲಾಗಿದೆ. Doddaballapura

[ccc_my_favorite_select_button post_id="104979"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!