lokayukta| ಸರಕಾರಿ ನೌಕರರಿಗೆ ಲೋಕಾಯುಕ್ತದ ಬಗ್ಗೆ ಅನಗತ್ಯ ಭಯ, ಆತಂಕ ಬೇಡ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ

ಧಾರವಾಡ; ಸರಕಾರಿ ನೌಕರರು ತಮ್ಮ ಹುದ್ದೆಗೆ ಅನ್ವಯಿಸುವ ಕಾರ್ಯಗಳನ್ನು ನಿಯಮಾನುಸಾರ ಮಾಡಿದರೆ ದೂರುಗಳ ಪ್ರಶ್ನೆ ಬರುವದಿಲ್ಲ. ಲೋಕಾಯುಕ್ತದ (lokayukta) ಬಗ್ಗೆ ಅನಗತ್ಯ ಭಯ, ಆತಂಕ ಪಡದೆ ಕಾನೂನಾತ್ಮಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿ, ವೃತ್ತಿ ನಿಷ್ಠೆ ತೋರಬೇಕು. ಲೋಕಾಯುಕ್ತದ ಕಾಯ್ದೆ, ಕಾರ್ಯಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹೇಳಿದರು.

ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಧಾರವಾಡ ಲೋಕಾಯುಕ್ತ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆ ಸರಕಾರಿ ನೌಕರರಿಗೆ ಭಯ, ಆತಂಕ ಬೇಡ. ಲೋಕಾಯುಕ್ತ ಕಾನೂನು ಬಗ್ಗೆ ಸರಿಯಾದ ಅರಿವು, ತಿಳುವಳಿಕೆ ಇರುವುದು ಬಹು ಮುಖ್ಯ ಎಂದು ಅವರು ಹೇಳಿದರು.
ಕರ್ನಾಟಕ ಲೋಕಾಯುಕ್ತವು ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆಯಾಗಿದೆ. ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಿಸುವುದು, ಸಾರ್ವಜನಿಕ, ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದುಕೊರತೆಗಳನ್ನು ನಿವಾರಣೆ ಮಾಡುವುದು, ತಪ್ಪಿತಸ್ಥರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984, ಭ್ರಷ್ಟಾಚಾರ ತಡೆ ಕಾಯ್ದೆ 1988, ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು, 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದು ಈ ಸಂಸ್ಥೆಯ ಕಾರ್ಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹೇಳಿದರು.

ಯಾರ ವಿರುದ್ಧ ದೂರು

ಯಾವುದೇ ವ್ಯಕ್ತಿ ಕರ್ನಾಟಕ ರಾಜ್ಯದ ಆಡಳಿತ ನಿರ್ವಹಣೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು ಮತ್ತು ಕರ್ತವ್ಯ ಲೋಪ ನಡೆದಿದೆ ಎಂದು ಹೇಳುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಸಾರ್ವಜನಿಕ, ಸರ್ಕಾರಿ ನೌಕರರ ವಿರುದ್ಧ ಮಾತ್ರ ದೂರು ನೀಡಬಹುದಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 ರಂತೆ ಸಾರ್ವಜನಿಕ ನೌಕರರು ಮಾತ್ರ ಕ್ರಮವಾಗಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುತ್ತಾರೆ.

ಕರ್ನಾಟಕ ಲೋಕಾಯುಕ್ತಕ್ಕೆ ಯಾವ ರೀತಿ ದೂರು ಸಲ್ಲಿಸಬೇಕು: ದೂರುದಾರರು, ಭಾದಿತ ವ್ಯಕ್ತಿಯು ಯಾವ ಸಾರ್ವಜನಿಕ, ಸರ್ಕಾರಿ ನೌಕರನ ವಿರುದ್ಧ ಯಾವ ಕರ್ತವ್ಯಕ್ಕೆ, ದುರ್ನಡತೆಗೆ ಸಂಬಂಧಿಸಿದಂತೆ ಆಪಾದನೆ ಮಾಡುತ್ತಿದ್ದಾರೆ ಹಾಗೂ ಅವರ ಕುಂದುಕೊರತೆ ಮತ್ತು ಪರಿಹಾರದ ಬಗ್ಗೆ ಸ್ಪಷ್ಟವಾಗಿ ತಿಳಿಸುವುದರ ಜೊತೆಗೆ ಅವರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ಐ.ಡಿ., ಸಂಪೂರ್ಣ ವಿಳಾಸ ಮತ್ತು ಸಾರ್ವಜನಿಕ, ಸರ್ಕಾರಿ ನೌಕರರ ಹೆಸರು, ವಿಳಾಸ, ಹುದ್ದೆಯ ವಿವರಗಳನ್ನು ದೂರಿನಲ್ಲಿ ತಿಳಿಸಬೇಕು. ದೂರಿನ ಜೊತೆಗೆ ನಮೂನೆ-1 ಮತ್ತು 2ನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳ ದೃಢೀಕೃತ ಅಥವಾ ಯಥಾಪ್ರತಿಗಳೊಂದಿಗೆ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಬಹುದು.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಬಹುದಾದ ಪ್ರಕರಣಗಳು: ಕರ್ನಾಟಕ ಲೋಕಾಯುಕ್ತ ಅಧಿನಿಯಮದಡಿ ಬರುವ ದೂರುಗಳನ್ನಲ್ಲದೆ ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮದಡಿ ಬರುವ ಅಪರಾಧಗಳಿಗೆ ಸಂಬಂಧಪಟ್ಟಂತೆ ಸಹ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲು ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ಅಧಿಕಾರವಿದೆ. ಈ ಸಂಬಂಧ ಬೆಂಗಳೂರು ನಗರ ಮತ್ತು ಗ್ರಾಮೀಣ ವಲಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಅಂಬೇಡ್ಕರ್ ವೀಧಿಯ ಲೋಕಾಯುಕ್ತ ಕಛೇರಿಯಲ್ಲಿರುವ ಲೋಕಾಯುಕ್ತ ಪೆÇಲೀಸ್ ಠಾಣಿಗೆ ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿರುವ ಲೋಕಾಯುಕ್ತ ಕಛೇರಿಯ ಆವರಣದಲ್ಲಿ ಸ್ಥಾಪಿಸಿರುವ ಲೋಕಾಯುಕ್ತ ಪೊಲೀಸ್ ಠಾಣಿಗೆ ದೂರು ಕೊಡಬಹುದಾಗಿದೆ.

ಯಾವುದೇ ಸಾರ್ವಜನಿಕ, ಸರ್ಕಾರಿ ನೌಕರ ತನ್ನಿಂದಾಗಲೀ ಅಥವಾ ಇನ್ನೊಬ್ಬ ಸರ್ಕಾರಿ ನೌಕರನಿಂದಾಗಲೀ ಸಾರ್ವಜನಿಕ ಕರ್ತವ್ಯವನ್ನು ಮಾಡದೇ ಇರುವಂತೆ ಮಾಡಲು ಅಥವಾ ಮಾಡದಿರುವುದಕ್ಕೆ ಅಥವಾ ಆ ಕರ್ತವ್ಯವನ್ನು ಅನುಚಿತವಾಗಿ ಅಥವಾ ಅಪ್ರಾಮಾಣಿಕವಾಗಿ ನಿರ್ವಹಿಸಲು ಅಥವಾ ನಿರ್ವಹಿಸುವ ಉದ್ದೇಶದಿಂದ ಯಾವುದೇ ವ್ಯಕ್ತಿಯಿಂದ ಅನಗತ್ಯ ಪ್ರಯೋಜನ ಪಡೆಯುವುದು ಅಥವಾ ಸ್ವೀಕರಿಸುವುದು ಅಥವಾ ಪ್ರತಿಫಲವಾಗಿ ಅನಗತ್ಯ ಪ್ರಯೋಜನ ಪಡೆಯುವುದು ಅಥವಾ ಸ್ವೀಕರಿಸುವುದು ಅಥವಾ ಅದಕ್ಕಾಗಿ ಪ್ರಯತ್ನಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ರೀತಿಯಾಗಿ ವರ್ತಿಸಲು ಇನ್ನೊಬ್ಬ ಸಾರ್ವಜನಿಕ ನೌಕರನನ್ನು ಪ್ರೇರೇಪಿಸುವುದು ಸಹ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳಿದರು.

ಯಾವುದೇ ವ್ಯಕ್ತಿ, ಸಾರ್ವಜನಿಕ, ಸರ್ಕಾರಿ ನೌಕರ ತನ್ನ ಕರ್ತವ್ಯ ಮಾಡದೇ ಇರಲು ಅಥವಾ ಅನುಚಿತವಾಗಿ ಅಥವಾ ಅಪ್ರಮಾಣಿಕವಾಗಿ ಮಾಡಲು ಭ್ರಷ್ಟ ಅಥವಾ ಕಾನೂನು ಬಾಹಿರ ವಿಧಾನಗಳಿಂದ ಅಥವಾ ತನ್ನ ವೈಯಕ್ತಿಕ ಪ್ರಭಾವವನ್ನು ಚಲಾಯಿಸಿ ಆ ಸಾರ್ವಜನಿಕ ನೌಕರನನ್ನು ಪ್ರೇರೆಪಿಸುವುದು ಮತ್ತು ಯಾವುದೇ ವ್ಯಕ್ತಿಗೆ ಅನಗತ್ಯ ಪ್ರಯೋಜನ ನೀಡಲು ಅಥವಾ ತನಗಾಗಿಯೇ ಬೇರೊಬ್ಬ ವ್ಯಕ್ತಿಯಿಂದ ಇನಾಮು ಪಡೆದರೆ, ಪಡೆಯುವುದಕ್ಕೆ ಪ್ರಯತ್ನಿಸಿದರೆ ಅಥವಾ ಸ್ವೀಕರಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಭ್ರಷ್ಟಾಚಾರ ತಡೆ ಅಧಿನಿಯಮದಡಿಯಲ್ಲಿ ಶಿಕ್ಷಾರ್ಹವಾದ ಅಪರಾಧಗಳಿಗೆ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದಾಗ ನ್ಯಾಯಾಲಯವು ವಿಚಾರಣೆ ನಡೆಸಿ ಸಂಬಂಧಪಟ್ಟ ಸರ್ಕಾರಿ ನೌಕರ ತಪ್ಪಿತಸ್ಥ ಎಂದು ಕಂಡುಬಂದಲ್ಲಿ, ಆತನಿಗೆ ಸೂಕ್ತ ಶಿಕ್ಷೆ ಮತ್ತು ದಂಡನೆಯನ್ನು ವಿಧಿಸುತ್ತದೆ. ಅಲ್ಲದೇ ಶಿಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಬೇಕಾಗುತ್ತದೆ. ಇದಲ್ಲದೇ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ, ಸರ್ಕಾರಿ ನೌಕರನ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಸರ್ಕಾರದ ವಹಿಸುವಿಕೆಯ ಮೇರೆಗೆ ತನಿಖೆಯನ್ನು ನಡೆಸಿ ಆತನ ವಿರುದ್ಧ ಇಲಾಖಾ ವಿಚಾರಣೆ ಅವಶ್ಯಕತೆ ಕಂಡು ಬಂದರೆ ಅದರ ಬಗ್ಗೆ ಮತ್ತು ಇಲಖಾ ವಿಚಾರಣೆಯ ನಂತರ ಸೂಕ್ತ ಶಿಫಾರಸ್ಸನ್ನು ಸರ್ಕಾರಕ್ಕೆ ಲೋಕಾಯುಕ್ತದಿಂದ ಮಾಡಲಾಗುತ್ತದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದರು.

ಸರಕಾರಿ ನೌಕರ ತನಗೆ ಸುಳ್ಳು ದೂರುಗಳಿಂದ ತೊಂದರೆ ಆದಾಗ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು. ಯಾರೇ ಆಗಲಿ ಲೋಕಾಯುಕ್ತಕ್ಕೆ ದೂರುಗಳನ್ನು kla.kar(at)nic(dot)in ಇ-ಮೇಲ್ ಮೂಲಕವು ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲ https://lokayukta.kar.nic.in ಮತ್ತು ದೂರವಾಣಿ 080-22258767, 080-22250278 ಪಡೆಯಬಹುದು ಎಂದು ಹೇಳಿದರು.

ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಿ.ರಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆ ಸಂದೇಶ ಹೊತ್ತ ನಾವು ಪ್ರತಿಯೊಂದರಲ್ಲೂ ಪ್ರಾಮಾಣಿಕತೆ ಅಗತ್ಯ.

ಕರ್ನಾಟಕ ಲೋಕಾಯುಕ್ತ ಮಾದರಿಯಾಗಿದೆ. ಪ್ರತಿಯೊಬ್ಬ ಅಧಿಕಾರಿಯು ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಹಂತದಲ್ಲಿ ಕೆಲಸ ಮಾಡುವಾಗ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಅಳವಡಿಕೊಳ್ಳೊಣ ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಉಪ ಪೊಲೀಸ್ ಆಯುಕ್ತರಾದ ಸಿ.ಆರ್.ರವೀಶ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಕಚೇರಿಯಲ್ಲಿನ ವಿಚಾರಣಾ ವಿಭಾಗದ ಅಪರ ನಿಬಂಧಕರಾದ ಪಿ.ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ, ಉಪಲೋಕಾಯುಕ್ತ ಕಚೇರಿಯ ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ.ಪಾಟೀಲ್, ಧಾರವಾಡ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ತಹಶಿಲ್ದಾರ ಡಾ.ಡೊಡ್ಡಪ್ಪ ಹೂಗಾರ ವಂದಿಸಿದರು.

ರಾಜಕೀಯ

HDK: ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ

HDK: ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ

ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂಘದ ಗತಿ ಏನು? HDK

[ccc_my_favorite_select_button post_id="97000"]
naxal encounter; ವಿಕ್ರಂ ಗೌಡ ಅವರದ್ದು ನಕಲಿ‌ ಎನ್‌ಕೌಂಟರ್ ಅಲ್ಲ; ಡಾ.ಜಿ.ಪರಮೇಶ್ವರ

naxal encounter; ವಿಕ್ರಂ ಗೌಡ ಅವರದ್ದು ನಕಲಿ‌ ಎನ್‌ಕೌಂಟರ್ ಅಲ್ಲ; ಡಾ.ಜಿ.ಪರಮೇಶ್ವರ

ಕಾನೂನು ಬಾಹಿರವಾಗಿ, ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ. ನಕ್ಸಲ್ ನಿಗ್ರಹಕ್ಕಾಗಿ ರಾಜ್ಯದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ರಚಿಸಲಾಗಿದೆ. naxal encounter

[ccc_my_favorite_select_button post_id="96905"]
happy international men’s day 2024

happy international men’s day 2024

ಪುರುಷರು ಮತ್ತು ಹುಡುಗರ ಜೀವನ, ಸಾಧನೆಗಳು ಮತ್ತು ಪಾತ್ರಗಳನ್ನು ಗುರುತಿಸಲು ಮತ್ತು ಆಚರಿಸಲು ಇದು ಒಂದು ಅವಕಾಶವಾಗಿ happy international men's day 2024

[ccc_my_favorite_select_button post_id="96756"]
miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್

ಭಾರತವನ್ನು ಪ್ರತಿನಿಧಿಸಿದ್ದ ರಿಯಾ ಸಿಂಘಾ ಅಂತಿಮ ಸುತ್ತಿನಲ್ಲಿ ಟಾಪ್​ 12 ಸ್ಥಾನ ಪಡೆಯುವಲ್ಲಿ ವಿಫಲರಾಗಿದರು. miss universe

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

vivek ramaswamy: ಡೊನಾಲ್ಡ್ ಟ್ರಂಪ್ ಕ್ಯಾಬಿನೆಟ್‌ನಲ್ಲಿ ಭಾರತ

[ccc_my_favorite_select_button post_id="96243"]

canva down: ಬಳಕೆದಾರರ ಪರದಾಟ

[ccc_my_favorite_select_button post_id="96202"]

ಕ್ರೀಡೆ

Doddaballapura: ದೇವರಾಜ್ ಅರಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮ

Doddaballapura: ದೇವರಾಜ್ ಅರಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮ

ಕ್ರೀಡೆಯಲ್ಲಿ ಯಶಸ್ಸು ದೊರಕಲು ನಿರಂತರ ಅಭ್ಯಾಸ ಅಗತ್ಯ. ಸೋಲಿನಿಂದ ಹತಾಶರಾಗದೆ ಗೆಲುವಿನ ಗುರಿಯೆಡೆಗೆ ಪ್ರಯತ್ನ ನಿರಂತರವಾಗಿರಬೇಕು ಎಂದು ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಆರ್ಯ ಎಸ್ ಅವರು ತಿಳಿಸಿದರು . Doddaballapura

[ccc_my_favorite_select_button post_id="96848"]
Murder news: ಮಚ್ಚಿನಿಂದ ಕೊಚ್ಚಿ ತುಪ್ಪದ ವ್ಯಾಪಾರಿಯ ಬರ್ಬರ ಹತ್ಯೆ

Murder news: ಮಚ್ಚಿನಿಂದ ಕೊಚ್ಚಿ ತುಪ್ಪದ ವ್ಯಾಪಾರಿಯ ಬರ್ಬರ ಹತ್ಯೆ

ಅರೆ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು ಬಾಟಲ್, ಚಿಂದಿ ಆಯುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. Murder news

[ccc_my_favorite_select_button post_id="96960"]
Accident; ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ತಂದೆ-ಮಗ ದುರ್ಮರಣ..!

Accident; ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ತಂದೆ-ಮಗ ದುರ್ಮರಣ..!

ಮೃತ ದುರ್ದೈವಿಗಳನ್ನು 35 ವರ್ಷದ ಗುರುರಾಜು, 2 ವರ್ಷದ ರಿಶಾಂಕ್ ಎಂದು ಗುರುತಿಸಲಾಗಿದೆ. Accident

[ccc_my_favorite_select_button post_id="96846"]

Doddaballapura accident news: ಸತತ ಮೂರನೇ ಅಪಘಾತ..!

[ccc_my_favorite_select_button post_id="96185"]

Doddaballapura accident news: ಗೂಡ್ಸ್ ವಾಹನ ಮೊಗಚಿ

[ccc_my_favorite_select_button post_id="96179"]

Doddaballapura accident news: ರಸ್ತೆ ಬದಿ ಟೀ

[ccc_my_favorite_select_button post_id="96170"]

ಆರೋಗ್ಯ

ಸಿನಿಮಾ

Love Reddy| ದರ್ಶನ್ ಬಗ್ಗೆ ಮಾತಾಡಲು ನಿನಗೇನ್ ಅರ್ಹತೆ ಇದೆ..?; ಲೈವ್‌ನಲ್ಲೆ ಜಗದೀಶ್ಗೆ ಹಿಗ್ಗಾಮುಗ್ಗಾ ತರಾಟೆ| video

Love Reddy| ದರ್ಶನ್ ಬಗ್ಗೆ ಮಾತಾಡಲು ನಿನಗೇನ್ ಅರ್ಹತೆ ಇದೆ..?; ಲೈವ್‌ನಲ್ಲೆ ಜಗದೀಶ್ಗೆ

ಓದಲ್ಲಿ ಬಂದಲ್ಲಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಗದೀಶ್ ಅವರಿಗೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ. Love Reddy

[ccc_my_favorite_select_button post_id="96971"]

pushpa 2 ಟ್ರೇಲರ್ ಬಿಡುಗಡೆ; ಹೇಗಿದೆ ನೋಡಿ

[ccc_my_favorite_select_button post_id="96641"]

nayanthara-ಧನುಶ್ ಜಗಳ ಜೋರು..!

[ccc_my_favorite_select_button post_id="96590"]

ದರ್ಶನ್‌ರನ್ನ ಮತ್ತೆ ಜೈಲಿಗೆ ಕಳಿಸಲು ಪೊಲೀಸರ ಸಿದ್ದತೆ..!

[ccc_my_favorite_select_button post_id="96441"]
error: Content is protected !!