ದೊಡ್ಡಬಳ್ಳಾಪುರ: ಮಾಕಳಿ, ಉಜ್ಜನಿ ಮತ್ತು ಹುಲುಕುಡಿ ಬೆಟ್ಟದ ಸಾಲಿಗೆ ಒಳಪಡುವ Doddaballapura ತಾಲೂಕಿನ ಸೂಲುಕುಂಟೆ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ.
ಬೆಟ್ಟದ ಸಾಲುಗಳಿಗೆ ಹೊಂದಿಕೊಂಡಿರುವ ಗ್ರಾಮವಾದ ಸೂಲುಕುಂಟೆ ಗ್ರಾಮಕ್ಕೆ ಕಾಡು ಪ್ರಾಣಿಗಳು ಪದೇ ಪದೇ ದಾಂಗುಡಿ ಇಟ್ಟು, ಸಾಕು ಪ್ರಾಣಿಗಳು ಭಕ್ಷಿಸಿ ಗ್ರಾಮಸ್ಥರಿಗೆ ನಿರಂತರವಾಗಿ ತೊಂದರೆ ನೀಡುತ್ತಿರುತ್ತವೆ.
ಈ ವ್ಯಾಪ್ತಿಯಲ್ಲಿ ಆರೇಳು ಚಿರತೆಗಳು ಇವೆ ಎನ್ನಲಾಗುತ್ತಿದ್ದು, ಹಸು, ನಾಯಿ, ಕೋಳಿಗನ್ನು ತಿನ್ನಲು ಆಗ್ಗಾಗ್ಗೆ ಗ್ರಾಮಕ್ಕೆ ನುಗ್ಗುತ್ತಿರುತ್ತವೆ.
ಕೆಲ ತಿಂಗಳ ಹಿಂದಷ್ಟೇ ಹೆಣ್ಣು ಚಿರತೆ ಬೋನಿಗೆ ಬಿದ್ದು, ಗ್ರಾಮಸ್ಥರು ನೆಮ್ಮದಿ ಪಡುವ ವೇಳೆಗೆ ಮತ್ತೆ ಈ ಗಂಡು ಚಿರತೆ ಗ್ರಾಮಸ್ಥರ ನಿದ್ದೆ ಕೆಡಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಅಳವಡಿಸಿದ್ದರು.
ಗುರುವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಇಂದು ಬೆಳಗ್ಗೆ ಸಿಬ್ಬಂದಿಗಳು ಸ್ಥಳಾಂತರಿಸಿದರು.
ಇನ್ನೂ ಚಿರತೆ ನೋಡು ಬಂದ ಗ್ರಾಮಸ್ಥರು, ಮೊಬೈಲ್ ಗಳಲ್ಲಿ ಚಿರತೆ ಆರ್ಭಟದ ವಿಡಿಯೋ ಸೆರೆ ಹಿಡಿದಿದ್ದು, ಈ ವಿಡಿಯೋದಲ್ಲಿ ಬೋನ್ ಒಳಗಿಂದಲೇ ದಾಳಿಗೆ ಮುಂದಾದ ಚಿರತೆಯ ಘರ್ಜನೆಗೆ ನೋಡಲು ಬಂದವರು ಬೆಚ್ಚಿಬಿದ್ದಿದ್ದಾರೆ.