ದೊಡ್ಡಬಳ್ಳಾಪುರ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು (Crop Survey) ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ನಡೆಸಲಾಗುತ್ತಿದೆ.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿಯನ್ನು ಮೇಲ್ವಿಚಾರಕರ ಮೂಲಕ ಅನುಮೋದನೆ ಮಾಡಿದ ನಂತರ ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿರುತ್ತದೆ.
ತಾಲ್ಲೂಕು ಆಡಳಿತ ವತಿಯಂದ ಪ್ರತಿ ಗ್ರಾಮಗಳಿಗೆ ಖಾಸಗಿ ನಿವಾಸಿಗಳನ್ನು ಹಾಗೂ ಮೇಲ್ವಿಚಾರಕರನ್ನು ನೇಮಿಸಿದ್ದು, ಖಾಸಗಿ ನಿವಾಸಿಗಳು ರೈತರ ಜಮೀನುಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಬೆಳೆ ಸಮೀಕ್ಷೆಯನ್ನು ಕೈಗೊಂಡಿರುತ್ತಾರೆ.
ಇದುವರೆಗೂ 98.24% ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುತ್ತದೆ. ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸೆರೆ ಹಿಡಿದ ಮಾಹಿತಿಯನ್ನು ರೈತ ಬಾಂಧವರು ಬೆಳೆ ದರ್ಶಕ್ 2024-25 ಎಂಬ ಆ್ಯಪ್‍ನಲ್ಲಿ (ಗೂಗಲ್ ಪ್ಲೇಸ್ಟೋರ್‍ನಲ್ಲಿ ಡೌನ್ಲೋಡ್ ಮಾಡಿಕೊಂಡು) ಸರ್ವೆ ನಂಬರ್ ವಾರು ಪರಿಶೀಲಿಸಬಹುದು.
ಖಾಸಗಿ ನಿವಾಸಿಗಳು ಸೆರೆಹಿಡಿಯಲಾದ ಬೆಳೆಯ ಮಾಹಿತಿ ತಪ್ಪಾಗಿದ್ದಲ್ಲಿ ಕೂಡಲೇ ಬೆಳೆ ದರ್ಶಕ್ ಆ್ಯಪ್‍ನಲ್ಲಿ ದಿನಾಂಕ: 28.11.2024ರ ಒಳಗೆ ಸರ್ವೆ ನಂಬರ್‍ವಾರು ಆಕ್ಷೇಪಣೆ ಸಲ್ಲಿಸಬಹುದು.
ದಿನಾಂಕ: 28.11.2024 ನಂತರ ಬೆಳೆ ಮಾಹಿತಿ ಬದಲಾವಣೆಗೆ ಯಾವುದೇ ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮದ ಖಾಸಗಿ ನಿವಾಸಿ, ಮೇಲ್ವಿಚಾರಕರು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಅವರು ತಿಳಿಸಿರುತ್ತಾರೆ.