Site icon ಹರಿತಲೇಖನಿ

Viral news: ಸೀಟ್ ಇಲ್ಲದೆ ರೈಲಿನಲ್ಲಿ ನವವಧು ಪ್ರಯಾಣ..!: ರೈಲ್ವೇ ಮಂತ್ರಿಗಳೇ.. ಇತ್ತ ನೋಡಿ ಎಂದು ನೆಟ್ಟಿಗರ ಆಕ್ರೋಶ

ನವದೆಹಲಿ: ರೈಲಿನಲ್ಲಿ ಸೀಟ್ ಸಿಗದೆ ಕೆಳಗಡೆ ಕುಳಿತು ನವ ವಿವಾಹಿತರಯೋರ್ವರು ಪ್ರಯಾಣ ಮಾಡಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral news) ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮದುವೆಯ ಉಡುಪಿನಲ್ಲಿಯೇ ಯುವತಿ ರೈಲಿನ ನೆಲದ ಮೇಲೆ ಕುಳಿತು ಪ್ರಯಾಣ ಮಾಡಿದ್ದಾಳೆ. ಈ ಫೋಟೋ ನೋಡಿದ ನೆಟ್ಟಿಗರು ವರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮದುವೆಯಾದ ಮೊದಲ ದಿನ ಹೆಂಡತಿಗೆ ರೈಲಿನಲ್ಲಿ ಸೀಟ್ ಕೊಡಿಸಿಲ್ಲ. ಹೆಣ್ಣು ಮಕ್ಕಳಿಗೆ ಯೋಗ್ಯವಾದ ಜೀವನಶೈಲಿ ನೀಡುವ ವರನಿಗೆ ವಧು ಕೊಟ್ಟು ಮದುವೆ ಮಾಡಿ ಇಲ್ಲವಾದ್ರೆ ಹೀಗೆ ಹೆಣ್ಣು ಕಷ್ಟ ಪಡಬೇಕಾಗುತ್ತೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ರೈಲಿನಲ್ಲಿ ಒಬ್ಬಂಟಿಯಾಗಿ ಕುಳಿತಿರುವ ವಧು ಸುತ್ತ ಲಗೇಜ್ ಬ್ಯಾಗ್ ಇದೆ. ಗಂಡನು ಪಕ್ಕದಲ್ಲಿ ಇಲ್ಲ. ಫೋಟೋ ಗೆ ಟ್ಯಾಗ್ ಲೈನ್ ಕೊಟ್ಟಿರುವ ಲಕ್ಷ್ಯ ಚೌಧರಿ ಆದಾಯವಿಲ್ಲವಾದರೆ.. ಮದುವೆ ಇಲ್ಲ ಎಂದಿದ್ದಾರೆ.

ಇನ್ನು ಕೆಲವರು ರೈಲ್ವೇ ಮಂತ್ರಿಗಳೇ.. ಇತ್ತ ನೋಡಿ ನಿಮ್ಮ ರೈಲಿನ ಅವ್ಯವಸ್ಥೆ ಎಂದು ಸಚಿವ ಅಶ್ವಿನಿ ವೈಶ್ನವ್‌ರನ್ನೂ ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version