Site icon ಹರಿತಲೇಖನಿ

heart attack; ಗೆಳೆಯನ ಮದುವೆಯಲ್ಲೆ ಉಸಿರು ಚೆಲ್ಲಿದ ಯುವಕ..!| video

ಕರ್ನೂಲ್; ಸ್ನೇಹಿತನ ಮದುವೆಗೆ ತೆರಳಿ ಉಡುಗೊರೆ ನೀಡುವಾಗಲೇ ಯುವಕನೋರ್ವನಿಗೆ ಹೃದಯಾಘಾತದಿಂದ (heart attack) ಆಗಿ ಉಸಿರು ಚೆಲ್ಲಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಕರ್ನೂಲ್ ಜಿಲ್ಲೆಯ ಕೃಷ್ಣಗಿರಿ ಮಂಡಲದ ಪೆನುಮಡ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಸ್ನೇಹಿತನ ಮದುವೆ ಸಮಾರಂಭದಲ್ಲಿ ಗಿಫ್ಟ್ ನೀಡಿದ ವಂಶಿ ಎಂಬ ಯುವಕ ವೇದಿಕೆಯಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ.

ಹೃದಯಾಘಾತದಿಂದ ಕುಸಿದುಬೀಳುತ್ತಿದ್ದ ವಂಶಿಯನ್ನು ಹಿಡಿದುಕೊಂಡ ಇನ್ನಿತರ ಸ್ನೇಹಿತರು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ವಂಶಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಯುವಕ ವಂಶಿ ಬೆಂಗಳೂರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Exit mobile version