ಮುಂಬೈ: ಭಾರತದ ಉದ್ಯಮಿ ಗೌತಮ್ ಅದಾನಿ (adani) ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿರುವ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿರುವುದಾಗಿ ವರದಿಯಾಗಿದೆ.
ಈ ವರದಿ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಉಂಟಾಗಿದೆ.
ಅದಾನಿ ಎನರ್ಜಿ ಸೊಲೂಷನ್ಸ್ ಹಾಗೂ ಅದಾನಿ ಎಂಟರ್‌ಪ್ರೈಸಸ್ ಶೇ 20ರಷ್ಟು ಕುಸಿತ ಕಂಡಿವೆ. ಅದಾನಿ ಗ್ರೀನ್ ಎನರ್ಜಿ ಶೇ 19.17, ಅದಾನಿ ಟೋಟಲ್ ಗ್ಯಾಸ್ ಶೇ 18.14, ಅದಾನಿ ಪವರ್ 17.79 ಮತ್ತು ಅದಾನಿ ಪೋರ್ಟ್ಸ್ ಶೇ 15ರಷ್ಟು ಇಳಿಕೆಯಾಗಿದೆ.
ಅಂಬುಜಾ ಸಿಮೆಂಟ್ಸ್ ಶೇ 14.99, ಎಸಿಸಿ ಶೇ 14.54, ಎನ್‌ಡಿಟಿವಿ ಶೇ 14.37 ಮತ್ತು ಅದಾನಿ ವಿಲ್ಮರ್ ಶೇ 10ರಷ್ಟು ಕುಸಿತ ಉಂಟಾಗಿದೆ.