ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿ ಇತ್ತೀಚಿಗೆ ಲೋಕಾರ್ಪಣೆಗೊಂಡಿರುವ ಗಾಂಧಿ ಭವನಕ್ಕೆ ಸೋಮವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ (Dr k sudhakar( ಅವರು ಭೇಟಿ ನೀಡಿ ಇಲ್ಲಿನ ಗಾಂಧಿ ಅಂಗಳ,ಛಾಯಾಚಿತ್ರ ಗ್ಯಾಲರಿ ಹಾಗೂ ಸಭಾಂಗಣವನ್ನು ವೀಕ್ಷಿಸಿದರು.
ಈ ವೇಳೆ ಅವರು ಮಾತನಾಡಿ ಗಾಂಧಿ ಭವನದ ಕಟ್ಟಡವು ನಗರದ ಹೃದಯದ ಭಾಗದಲ್ಲಿ ಅದ್ಬುತವಾಗಿ ಮೂಡಿಬಂದಿದ್ದು, ಮಹಾತ್ಮಾ ಗಾಂಧೀಜಿಯವರ ವಿಚಾರ ಧಾರೆಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿ ಕಟ್ಟಡದ ವಿನ್ಯಾಸವು ಸುಂದರವಾಗಿ ಹಾಗೂ ಅರ್ಥ ಪೂರ್ಣವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರ ಸಭೆ ಅಧ್ಯಕ್ಷ ಎ. ಗಜೇಂದ್ರ, ನಿರ್ಮಿತಿ ಕೇಂದ್ರದ ಅಭಿಯಂತರ ತೇಜಸ್ ಕುಮಾರ್, ಸಹಾಯಕ ಅಭಿಯಂತರ ಏಕಾಂತಪ್ಪ, ನವೀನ್ ಕುಮಾರ್, ಕಣ್ಣೆಜೆನಹಳ್ಳಿ ಆನಂದ್ ಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಮ್.ಜುಂಜಣ್ಣ ಮತ್ತಿತರು ಹಾಜರಿದ್ದರು.