Site icon ಹರಿತಲೇಖನಿ

astrology predictions: ಈ ರಾಶಿಯವರಿಗೆ ಕೆಲಸದಲ್ಲಿ ಶತ್ರುಗಳು ಹೆಚ್ಚಾಗಬಹುದು ಎಚ್ಚರ

Keep valuables safe

Keep valuables safe

ದೈನಂದಿನ ರಾಶಿ ಭವಿಷ್ಯ: ಮಂಗಳವಾರ, ನವೆಂಬರ್ 19, 2024| astrology predictions

ಮೇಷ ರಾಶಿ: ಅನವಶ್ಯಕ ವಿಚಾರಗಳನ್ನು ತಲೆಗೆ ಹಾಕಿಕೊಳ್ಳಬೇಡಿ. ಒಳ್ಳೆಯ ಚಿಂತನೆ ಮಾಡಿ. ನಿಮ್ಮ ಶಕ್ತಿ ಸಾಮಾರ್ಥ್ಯವನ್ನು ಅರ್ಥ ಮಾಡಿಸುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮನ್ನು
ಕೆಲಸದಲ್ಲಿ ಕಡೆಗಣಿಸಲಾಗುತ್ತದೆ.

ವೃಷಭ ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ಹಣ ಮತ್ತು ಸಂಪತ್ತು ಸಂಬಂಧಗಳಷ್ಟು ದೊಡ್ಡದಲ್ಲ ಎಂದು ಅರ್ಥಮಾಡಿಕೊಳ್ಳಿ. ನೀವು ಹಣವನ್ನು ಸಂಪಾದಿಸಬಹುದು ಆದರೆ ಯಾರ ಪ್ರೀತಿ ಮತ್ತು ವಿಶ್ವಾಸವನ್ನು ಸಂಪಾದಿಸಲು ಸಾಧ್ಯವಿಲ್ಲ.

ಮಿಥುನ ರಾಶಿ: ಹೊಸ ಉದ್ಯೋಗವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ.ಶುಭ ಸುದ್ದಿ ಕೇಳುವಿರಿ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಿನಾಕಾರಣ ಖರ್ಚು ಮಾಡಬೇಡಿ.

ಕಟಕ ರಾಶಿ: ಸ್ವಂತ ಕೆಲಸವನ್ನು ಆರಂಭಿಸಲು ಚಿಂತಿಸಿ. ಇದು ನಿಮಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ.
ಆದರೆ ಇದರಲ್ಲಿ ನಿಮ್ಮ ಶ್ರಮ
ಮತ್ತು ಶ್ರದ್ಧೆ ಮುಖ್ಯವಾಗಿರುತ್ತದೆ. ಕೆಲಸದಲ್ಲಿ ಶತ್ರುಗಳು ಹೆಚ್ಚಾಗಬಹುದು. ಇತರರಿಗೆ ಮನವರಿಕೆ ಮಾಡುವ ನಿಮ್ಮ ಕೌಶಲ್ಯ ಗುಣ ಉತ್ತಮ ಲಾಭಾಂಶವನ್ನು ನೀಡುತ್ತದೆ.

ಸಿಂಹ ರಾಶಿ: ಎಲ್ಲರೂ ನಿಮ್ಮ ಮಾತನ್ನೇ ಕಳಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತನೆ ಮಾಡಿ. ಕೆಲವು ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಸೆಯನ್ನು ಹೊಂದಿರುತ್ತಾರೆ. ಯಾವುದೇ ಫಲಿತಾಂಶವನ್ನು ನೀಡದ ಜನರನ್ನು ಮರೆತುಬಿಡಿ.

ಕನ್ಯಾ ರಾಶಿ: ನೀವು ಮಾಡುವ ಒಳ್ಳೆಯ ಕೆಲಸಗಳೇ ನಿಮ್ಮನ್ನು ರಕ್ಷಿಸುತ್ತದೆ. ಧೈರ್ಯವಾಗಿರಿ. ಅವರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಯಾವುದೇ ಕೆಲಸ ಕೈಗೊಂಡರೂ ಅದನ್ನು ಸಾಧಿಸಲು ಶ್ರಮಿಸಬೇಕು.

ತುಲಾ ರಾಶಿ: ನಿಮ್ಮ ಪ್ರಾಮಾಣಿಕವಾದ ಕಾರ್ಯಕ್ಕೆ ಉತ್ತಮ ಫಲವೇ ದೊರೆಯಲಿದೆ. ಚಿಂತೆ ಬೇಡ. ಹಣ ಖರ್ಚು ಮಾಡುವ ಮುನ್ನ ಯೋಚಿಸಿ. ನಿಮ್ಮ ಕುಟುಂಬದ ಸದಸ್ಯರು ನೀಡುವ ಸಲಹೆಯನ್ನು ಅನುಸರಿಸಿ.

ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಕೆಟ್ಟ ಸುದ್ದಿ ಕೇಳಲಿದೆ. ಎಚ್ಚರವಿರಲಿ. ಏಕೆಂದರೆ ತುರ್ತು ಅಗತ್ಯವಿದ್ದಾಗ ನಿಮಗೆ ಹಣದ ಮಹತ್ವ ಅರ್ಥವಾಗುತ್ತದೆ.

ಧನಸ್ಸು ರಾಶಿ: ಆತ್ಮೀಯರೊಬ್ಬರ ಅಗಲುವಿಕೆ ಆಘಾತ ಉಂಟುಮಾಡಲಿದೆ. ಎಲ್ಲವಕ್ಕೂ ಸಿದ್ಧವಾಗಿರಿ. ಇದಕ್ಕಾಗಿ ನಿಮ್ಮ ತಾಳ್ಮೆ ಮುಖ್ಯವಾಗುತ್ತದೆ. ಊಹಾಪೋಹ ಅಥವಾ ಅನಿರೀಕ್ಷಿತ ಲಾಭಗಳ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

ಮಕರ ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ನಿಮಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ.

ಕುಂಭ ರಾಶಿ: ಹಳೆಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಅವಕಾಶ ನಿಮಗೆ ಒದಗಿ ಬರಲಿದೆ. ನೀವು ಮಕ್ಕಳಿಗಾಗಿ ಯಾವುದೇ ಹೂಡಿಕೆ ಅಥವಾ ಆಸ್ತಿಯನ್ನು ತೆಗೆದುಕೊಳ್ಳಬಹುದು.

ಮೀನ ರಾಶಿ: ನಿಮ್ಮ ಸಾಧನೆಯ ಪತಾಕೆ ಎಲ್ಲಡೆ ಹಾರಾಡಲಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ. ಈಗ ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತಿದೆ. ನೀವು ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ.

ರಾಹುಕಾಲ: 03:00 ರಿಂದ 04:30
ಗುಳಿಕಕಾಲ: 12:00 ರಿಂದ 01:30
ಯಮಗಂಡಕಾಲ: 09:00 ರಿಂದ
10:30

Exit mobile version