ನೆಲಮಂಗಲ; ಹುಲ್ಲು ತರಲೆಂದು ಬೆಟ್ಟದ ಸಮೀಪ ತೆರಳಿದ್ಸ ಮಹಿಳೆಯ ಮೇಲೆ ದಾಳಿ ನಡೆಸಿರುವ ಚಿರತೆ (Leopard attack) ಮಹಿಳೆಯ ರುಂಡ ವನ್ನು ತಿಂದು ಹಾಕಿರುವ ಘಟನೆ ತಾಲೂಕಿನ ಗೊಲ್ಲರಹಟ್ಟಿ ಬೆಟ್ಟದ ಬಳಿ ಸಂಭವಿಸಿದೆ.
ಮೃತ ಮಹಿಳೆಯನ್ನು ಕಂಬಳು ಗ್ರಾಮದ ಬಳಿಯ ಗೊಲ್ಲರಹಟ್ಟಿ ಗ್ರಾಮದ ನಿವಾಸಿ 45 ವರ್ಷದ ಕರಿಯಮ್ಮ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಜಾನುವಾರುಗಳಿಗೆ ಹುಲ್ಲು ತರಲೆಂದು ಕರಿಯಮ್ಮ ಬೆಟ್ಟದ ಬಳಿ ತೆರಳಿದಾಗ ಏಕಾಏಕಿ ದಾಳಿ ನಡೆಸಿರುವ ಚಿರತೆ ಬೆನ್ನಿನ ಮೇಲ್ಭಾಗ ಹಾಗೂ ರುಂಡ ವನ್ನು ತಿಂದು ಹಾಕಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಭಾನುವಾರ ರಾತ್ರಿ 11ಗಂಟೆಗೆ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)