Site icon ಹರಿತಲೇಖನಿ

Doddaballapura: ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಳವು..!

ದೊಡ್ಡಬಳ್ಳಾಪುರ: ದೇವಾಲಯದ ಬಾಗಿಲಿನ ಬೀಗ ತೆರೆದಿರುವ ಐನಾತಿ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆ Doddaballapura ತಾಲೂಕಿನ ತಾಲೂಕಿನ ಪ್ರಸಿದ್ಧ ಶ್ರೀ ಗುಟ್ಟೆ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವಾಲಯದ ಬಾಗಿಲಿನ ಬೀಗ ತೆರೆದು, ದೇವಾಲಯದ ಪ್ರವೇಶಿಸಿರುವ ಕಳ್ಳರು ಹುಂಡಿಯ ಬೀಗ ತೆರೆದು ಹಣವನ್ನು ದೋಚಿದ್ದಾರೆ.

ಆದರೆ ಇತ್ತೀಚಿಗಷ್ಟೇ ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದ್ದರಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಿರಲಿಲ್ಲ ಎನ್ನಲಾಗಿದೆ‌.

ಉಳಿದಂತೆ ಯಾವುದೇ ಒಡವೆಗಳು ಕಳುವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಬೀಗ ಅಥವಾ ಬಾಗಿಲು ಮುರಿಯದೆ ಚಾಣಾಕ್ಷತನದಿಂದ ದೇವಾಲಯಕ್ಕೆ ಅಳವಡಿಸಿರುವ ಎರಡು ದೊಡ್ಡ ಬೀಗವನ್ನು ತೆರೆದಿರುವುದು ಕುಖ್ಯಾತ ಕಳ್ಳರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕಂದಾಯ ಇಲಾಖೆ ಉಪತಹಶೀಲ್ದಾರ್ ರಾಧ, ಮುಜರಾಯಿ ಇಲಾಖೆಯ ಪಾರುಪತ್ತೆಧಾರ್ ಪ್ರೇಮ್ ಕುಮಾರ್, ಗ್ರಾಮಸಹಾಯಕ ಸುರೇಶ್ ಇದ್ದರು.

Exit mobile version