ದೈನಂದಿನ ರಾಶಿ ಭವಿಷ್ಯ: ಸೋಮವಾರ, ನವೆಂಬರ್ 18, 2024| astrology predictions
ಮೇಷ ರಾಶಿ: ಸಮಾಧಾನವಾಗಿ ಕಾರ್ಯ ನಿರ್ವಹಿಸಿ, ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯೋಗದ ಸಂದರ್ಭದಲ್ಲಿ ಕೆಲಸಗಳ ಮೇಲೆ ಗಮನ ಹೆಚ್ಚಿಸಬೇಕು.
ವೃಷಭ ರಾಶಿ: ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಲಾಭವಾಗಲಿದೆ. ಚಿನ್ನ,ಬೆಳ್ಳಿ ಕೆಲಸ ಮಾಡುವ ವ್ಯಾಪಾರಸ್ಥರಿಗೆ ಕೆಲಸ ಸಿಗಬಹುದು ಇಲ್ಲವೇ ಬೆಲೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಮಿಥುನ ರಾಶಿ: ಆದಾಯಕ್ಕಿಂತ ಖರ್ಚು ಹೆಚ್ಚಾಗುವುದರಿಂದ ಆತಂಕದ ವಾತಾವರಣ. ಇತರರ ಸೇವೆಯಿಂದ ಆಧ್ಯಾತ್ಮಿಕ ಸಂತೋಷವನ್ನು ಪಡೆಯ ಲಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ನೀವು ದೊಡ್ಡ ಯಶಸ್ಸು ಗಳಿಸುವಿರಿ.
ಕಟಕ ರಾಶಿ: ಎಂದಿಗೂ ಸಾಲ ಮಾಡದ ನೀವು ಅನಿವಾರ್ಯವಾಗಿ ಕೈಚಾಚಬೇಕಾಗುತ್ತದೆ. ಅನಗತ್ಯ ಕೋಪದಿಂದ ನಿಮ್ಮ ಆರೋಗ್ಯವು ಹದಗೆಡುತ್ತದೆ. ವ್ಯಾಪಾರಿಗಳಿಗೆ ಲಾಭದ ಪರಿಸ್ಥಿತಿ ಇರುತ್ತದೆ.
ಸಿಂಹ ರಾಶಿ: ಹಲವು ದಿನಗಳಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ನೆರವೇರಲಿದೆ. ಸಾಮಾಜಿಕ ವಲಯದಲ್ಲಿ ಗುರು ಅಥವಾ ಶಿಕ್ಷಕರ ಮಾರ್ಗದರ್ಶನ ಸಿಗಲಿದೆ.
ಕನ್ಯಾ ರಾಶಿ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸಲೇಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮುಂದುವರಿಯಿರಿ. ಜಾಗತಿಕ ಸಾಂಕ್ರಾಮಿಕ ರೋಗವು ಮತ್ತೆ ಹೆಚ್ಚಾಗ ಲಾರಂಭಿಸಿದೆ, ಅದರ ಬಗ್ಗೆ ಎಚ್ಚರದಿಂದಿರಿ ಮತ್ತು ಸಂಪೂರ್ಣ ರಕ್ಷಣೆ ತೆಗೆದುಕೊಳ್ಳಿ.
ತುಲಾ ರಾಶಿ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದ್ದು ಮಾತಿಗಿಂತ ಮೌನವಾಗಿರಿ. ವ್ಯಾಪಾರ ಮತ್ತು ಹಣದ ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ನಿಮ್ಮ ಕುಟುಂಬದಲ್ಲಿ ಕೆಲವು ದುಃಖದ ಸುದ್ದಿಗಳನ್ನು ಸಹ ಕಾಣಬಹುದು.
ವೃಶ್ಚಿಕ ರಾಶಿ: ಭೂಮಿ ಖರೀದಿ ಮಾಡ ಬೇಕೆಂಬ ನಿಮ್ಮ ಬಯಕೆ ಮುಂದೂಡಬೇಕಾದೀತು. ಉನ್ನತ ಅಧಿಕಾರಿಯೊಂದಿಗೆ ಒಳ್ಳೆಯ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೀರಿ.
ಧನಸ್ಸು ರಾಶಿ: ನಿಮ್ಮ ಸುತ್ತಲೂ ಇರುವ ಹೊಗಳು ಭಟರಿಂದ ಅಂತರ ಕಾಯ್ದುಕೊಳ್ಳಿ. ಎಚ್ಚರ. ಕುಟುಂಬ ವಿಷಯಗಳಲ್ಲಿ ಪ್ರೀತಿಪಾತ್ರರ ಸಲಹೆಯ ಅಗತ್ಯವಿರುತ್ತದೆ.
ಮಕರ ರಾಶಿ: ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಇಟ್ಟು, ಪರಾವಲಂಬಿ ಯಾಗುವುದನ್ನು ತಪ್ಪಿಸಿ. ಮನೆಯ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬೀಳಬಹುದು. ಇದಕ್ಕಾಗಿ ನೀವು ಸಿದ್ಧರಾಗಿರಬೇಕು.
ಕುಂಭ ರಾಶಿ: ಅನವಶ್ಯಕ ಮಾತುಕತೆಗಳಿಂದ ಮಾನಸಿಕ ಆಘಾತವಾಗುವ ಸಾಧ್ಯತೆ ಇದೆ. ಎಚ್ಚರ. ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ ಈಗ ಅವಕಾಶಗಳು ಸಿಗುವ ಸಾಧ್ಯತೆ ಇದೆ, ಅವರು ಪ್ರಯತ್ನಿಸಬೇಕು.
ಮೀನ ರಾಶಿ: ಅತಿಯಾದ ಆತ್ಮವಿಶ್ವಾಸದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬೇಕಾದೀತು. ಹೋಟೆಲ್-ರೆಸ್ಟೋರೆಂಟ್ ವ್ಯಾಪಾರಿಗಳು ಉತ್ತಮ ಲಾಭ ಗಳಿಸಬಹುದು.
ರಾಹುಕಾಲ: 07:30AM ರಿಂದ 09:00AM
ಗುಳಿಕಕಾಲ: 01:30PM ರಿಂದ 03:00PM
ಯಮಗಂಡಕಾಲ: 10:30AM ರಿಂದ 12:00PM
ಇಂದಿನ ವಿಶೇಷ ; ಸಂಕಷ್ಟಹರ ಚತುರ್ಥಿ; ಕನಕದಾಸ ಜಯಂತಿ
ಸೂರ್ಯೋದ: ಬೆಳಗ್ಗೆ 06.20
ಸೂರ್ಯಾಸ್ತ: ಸಾಯಂಕಾಲ 05.50
ಅಯನ: ದಕ್ಷಿಣಾಯನ
ಋತು: ಶರದ ಋತು
ಮಾಸ: ಕಾರ್ತಿಕ
ಪಕ್ಷ: ಕೃಷ್ಣ ಪಕ್ಷ
ತೃತೀಯಾ 18.57 ವರೆಗೆ