ಕುಣಿಗಲ್: ಟ್ಯಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ (tractor accident) ತಂದೆ ಮಗ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಲಕ್ಕೆಗೌಡನಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.
ಕೊತ್ತಗೆರೆ ಹೋಬಳಿ ಜಾಣಗೆರೆ ಗ್ರಾಮದ 50 ವರ್ಷದ ಶಿವರಾಮಯ್ಯ ಹಾಗೂ ಅವರ ಮಗ 21 ವರ್ಷದ ಹರೀಶ್ ಮೃತ ದುರ್ದೈವಿಗಳು.
ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ತಮ್ಮನಾಗಿದ್ದ ಶಿವರಾಮಯ್ಯ ಹಾಗೂ ಮಗ ಹರೀಶ್ ಇಬ್ಬರು ತಮ್ಮ ಜಮೀನಿನಲ್ಲಿ ಇದ್ದ ಅಡಿಕೆಯನ್ನು ಮಿನಿ ಟ್ಯಾಕ್ಸರ್‌ನಲ್ಲಿ ತುಂಬಿಕೊಂಡು ಜಾಣಗೆರೆ ಗ್ರಾಮಕ್ಕೆ ಬರುತ್ತಿದ್ದರು.
ಈ ವೇಳೆ ಲಕ್ಕೆಗೌಡನಪಾಳ್ಯ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಟ್ಯಾಕ್ಸರ್ ಉರುಳಿ ಬಿದ್ದಿದೆ. ಪರಿಣಾಮ ತಂದೆ ಮಗ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಹಟ್ಟಿದ್ದಾರೆಂದು ವರದಿಯಾಗಿದೆ.