ನವದೆಹಲಿ: ಉತ್ತರ ಭಾರತದ ಪ್ರೇಕ್ಷಕರ ಸಮ್ಮುಖದಲ್ಲಿ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ‘ಪುಷ್ಪ 2’ (pushpa 2) ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಬಿಹಾರದ ಪಟ್ನಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಎದುರು ‘ಪುಷ್ಪ 2’ ಚಿತ್ರತಂಡದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಿದ್ದಹಮು, ಅಲ್ಲು ಅರ್ಜುನ್ ಜೊತೆ ಚಿತ್ರತಂಡ ಹಲವರು ಭಾಗಿ ಆಗಿದ್ದಾರೆ.
‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣ ಸಂಸ್ಥೆ ಈ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ದೇಶಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಹಿಂದಿಗೂ ಡಬ್ ಆಗಿ ತೆರೆಕಾಣಲಿದ್ದು,
ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ, ಆಂಧ್ರದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪಟ್ನಾದಲ್ಲಿ ‘ಪುಷ್ಪ 2’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಬಂದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಅಲ್ಲು ಅರ್ಜುನ್, ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಂತಾದವರು ನಟಿಸಿದ್ದ ‘ಪುಷ್ಪ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ಮೂಡಿಬರುತ್ತಿರುವ ‘ಪುಷ್ಪ 2’ ಸಿನಿಮಾ ಸಾರ್ವಕಾಲಿಕ ಹಿಟ್ ಆಗಲಿದೆ ಎಂಬುದು ಅಭಿಮಾನಿಗಳ ನಂಬಿಕೆ.
ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರ ನಿರೀಕ್ಷೆ ಡಬಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ರೇಲರ್ ಟ್ರೆಂಡ್ ಸೃಷ್ಟಿ ಮಾಡಿದೆ.
ಟ್ರೇಲರ್