nayanthara-ಧನುಶ್ ಜಗಳ ಜೋರು..!

ಚೆನ್ನೈ: ಅನುಮತಿ ಇಲ್ಲದೆ ದೃಶ್ಯವನ್ನು ಬಳಿಸಿಕೊಳ್ಳಲಾಗಿದೆ ಎಂದು ಹತ್ತು ಕೋಟಿ ರೂ.ನೀಡುವಂತೆ ನಟ ಧನುಶ್ ಅವರು ನಟಿ ನಯನತಾರಾ (nayanthara) ಹಾಗೂ ನೆಟ್‌ ಫಿಕ್ಸ್‌ ಸಂಸ್ಥೆಗೆ ನೋಟೀಸ್ ನೀಡಿದ್ದಾರೆ.

ನಟ ಧನುಷ್‌ ಹಾಗೂ ನಯನತಾರಾ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ ಈಗ ಇಬ್ಬರ ನಡುವೆ ಮಾತಿನ ಯುದ್ದ ಆರಂಭವಾಗಿದೆ.

ಈ ಬೆನ್ನಲ್ಲೇ ಧನುಶ್ ಅವರನ್ನು ನಯನತಾರಾ ನೀಚ ಎಂದು ಜರಿದಿದ್ದಾರೆ. ನಯನತಾರಾ ಸಿನಿಮಾ ಜರ್ನಿಯ ಕುರಿತ ನಯನತಾರಾ ಬಿಯಾಂಡ್ ದಿ ಫೇರೀಟೇಲ್ ಸಾಕ್ಷ್ಯ ಚಿತ್ರ ರಿಲಿಸ್‌ಗೆ ರೆಡಿಯಾಗಿದ್ದು, ನೆಟ್ ಪ್ಲಿಕ್ಸ್‌ನಲ್ಲಿ ಪ್ರಸಾರ ಆರಂಭಿಸಲಿದೆ.

ಈ ಡಾಕ್ಯುಮೆಂಟರಿಯ ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಕೆಲವು ಸಿನಿಮಾಗಳ ದೃಶ್ಯಗಳು, ಚಿತ್ರೀಕರಣದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ನಾನುಮ್ ರೌಡಿ ದಾನ್ ಚಿತ್ರದ ಮೂರು ಸೆಕೆಂಡ್ ದೃಶ್ಯವೂ ಇದೆ.

ಇದು ಧನುಶ್ ನಿರ್ಮಾಣದ ಸಿನಿಮಾವಾಗಿದ್ದು, ತಮ್ಮ ಅನುಮತಿ ಇಲ್ಲದೆ ದೃಶ್ಯವನ್ನು ಬಳಿಸಿಕೊಳ್ಳಲಾಗಿದೆ, ಹಾಗಾಗಿ ಹತ್ತು ಕೋಟಿ ರು.ನೀಡುವಂತೆ ಧನುಶ್, ನಯನತಾರಾ ಹಾಗೂ ನೆಟ್‌ ಫಿಕ್ಸ್‌ಗೆ ನೋಟೀಸ್ ನೀಡಿದ್ದರು.

ಧನುಶ್ ಕಳಿಸಿರುವ ನೊಟೀಸ್ ನೋಡಿ ಕೆಂಡಾಮಂಡಲರಾಗಿರುವ ನಯನ, ಧನುಶ್‌ ಅವರನ್ನು ನೀಚ, ದುರಹಂಕಾರಿ, ಹಣಬಾಕ ಎಂದು ನಿಂದಿಸಿದ್ದಾರೆ.

ನಾನೂಮ್ ರೌಡಿ `ದಾನ್ ಸಿನಿಮಾದ ಹಾಡು, ಕೆಲವು ವಿಡಿಯೊ ತುಣುಕನ್ನು ಬಳಸಿಕೊಳ್ಳಲು ಕಳೆದ ಎರಡು ವರ್ಷದಿಂದಲೂ ಅನುಮತಿ ಕೇಳಿದ್ದೇನೆ. ಆದರೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಹಾಡು ಬಳಸುವುದನ್ನು ಕೈಬಿಟ್ಟು ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದೇವೆ. ಅದರ ಮೂರು ಸೆಕೆಂಡ್ ಬಳಸಿಕೊಂಡಿದ್ದಕ್ಕೆ ಹತ್ತು ಕೋಟಿ ರು.ನೀಡುವಂತೆ ನೊಟೀಸ್ ಕಳಿಸಿದ್ದೀರ. ಇದು ನನಗೆ ಬೇಸರತರಿಸಿದೆ ಎಂದು ನಯನತಾರಾ ಕಿಡಿಕಾರಿದ್ದಾರೆ.

ಇದಿಷ್ಟೇ ಅಲ್ಲ, ನಾನುಮ್ ರೌಡಿ ದಾನ್ ಸಿನಿಮಾ ನಿರ್ಮಾಣ ಮಾಡುವಾಗ ಚಿತ್ರತಂಡದ ವಿರುದ್ದ ಅದೆಷ್ಟು ವಿಷಕಾರಿದಿರಿ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನೀನು ಆಡಿದ ಮಾತುಗಳು ಮನಸಿಗೆ ನೋವುಂಟು ಮಾಡಿವೆ. ಅದನ್ನು ನಾನು ಇನ್ನು ಮರೆತಿಲ್ಲ, ನನ್ನ ಮನಸಿಗೆ ಮಾಡಿದ ಗಾಯ ಇನ್ನೂ ಆರಿಲ್ಲ ಎಂದು ಖಾರವಾಗಿಯೇ ನುಡಿದಿದ್ದಾರೆ ನಯನತಾರಾ.

ಅಭಿಮಾನಿಗಳ ಮುಂದೆ ನಾಟಕೀಯವಾಗಿ ನಟಿಸುತ್ತೀಯಾ ತಾನು ಭಾರೀ ಸಾಧು ಎಂದು ಬಿಂಬಿಸಿಕೊಳ್ಳುತ್ತೀಯಾ ನೀನೆಂತ ನೀಚ ಎಂದು ಎಲ್ಲರಿಗೂ ಗೊತ್ತಾಗಲಿದೆ ಅದನ್ನು ಹೆಚ್ಚು ದಿನ ಮುಚ್ಚಿಡಲಾಗುವುದಿಲ್ಲ ಎಂದು ನಯನ ತಾರಾ ನೇರವಾಗಿಯೇ ನಿಂದಿಸಿದ್ದಾರೆ.

ನಾನುಮ್ ರೌಡಿ ದಾನ್ 2015ರಲ್ಲಿ ತೆರೆಗೆ ಬಂದಿತ್ತು. ನಯನಾತಾರ ಪತಿ ವಿಣೇಶ್ ಶಿವನ್ ನಿರ್ದೇಶಿದ್ದ ಈ ಚಿತ್ರವನ್ನು ಧನುಶ್ ನಿರ್ಮಾಣ ಮಾಡಿದ್ದರು. ವಿಜಯ್ ಸೇತುಪತಿ ಹಾಗೂ ನಯನತಾರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರಾಜಕೀಯ

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆಗೆ ನಿಖಿಲ್ ಕುಮಾರಸ್ವಾಮಿ ಕರೆ

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆಗೆ ನಿಖಿಲ್ ಕುಮಾರಸ್ವಾಮಿ ಕರೆ

ಬೆಲೆ ಏರಿಕೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ. ಶನಿವಾರ (12-04- 2025)ದಂದು ಬೆಂಗಳೂರು ನಗರದಲ್ಲಿ ಕುಮಾರಣ್ಣನ ನೇತೃತ್ವದಲ್ಲಿ Nikhil Kumaraswamy

[ccc_my_favorite_select_button post_id="105070"]
ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರ (Doddaballapura): ಉಪಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ರಾಗಿ ಖರೀದಿ ಕೇಂದ್ರದ ಬಳಿ ಇದ್ದ

[ccc_my_favorite_select_button post_id="105045"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

ದೊಡ್ಡಬಳ್ಳಾಪುರ (Doddaballapura): ದೇವಾಲಯದ ಮುಂಭಾಗ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ದೊಡ್ಡಬೆಳವಂಗಲ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.

[ccc_my_favorite_select_button post_id="105020"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!