Site icon Harithalekhani

Leopard: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ ದೃಶ್ಯ..! video ನೋಡಿ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಗನಹಳ್ಳಿ ಗ್ರಾಮದ ಹೊರವಲಯದಲ್ಲಿನ ಬೆಟ್ಟದಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ.

ರೈತರು ಜಮೀನುಗಳಿಗೆ ತೆರಳುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿದ್ದು ಕೊಂಗನಹಳ್ಳಿ ಸೇರಿದಂತೆ ಗುನನ್ಹಳ್ಳಿ ಗ್ರಾಮದ ಜನ ಆತಂಕಗೊಂಡಿದ್ದಾರೆ.

ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮುನಿಸ್ವಾಮಿ ಎಂಬಾತ ಡ್ರೋನ್ ಕ್ಯಾಮೆರಾ ತರಿಸಿ ಚಿರತೆಯ ಚಲನವಲನಗಳನ್ನು ಸೆರೆ ಮಾಡಿಸಿದ್ದಾರೆ.

ಕೊಂಗನಹಳ್ಳಿ ಬೆಟ್ಟದಲ್ಲಿ ಚಿರತೆ ಇರೋದು ದೃಢವಾಗಿದ್ದು ಡ್ರೋನ್ ಕ್ಯಾಮರದಲ್ಲಿ ಚಿರತೆ ಸೆರೆಯಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ

Exit mobile version