ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ Doddaballapura ತಾಲೂಕು ಸಂಘದ ಅಧ್ಯಕ್ಷ ಸೇರಿದಂತೆ ಇತರೆ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ ಎಂ.ಎಸ್.ರಾಜಶೇಖರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಸಂಘದಿಂದ ರಾಜ್ಯ ಪರಿಷತ್ಗೆ ಸ್ಪರ್ಧಿಸಿದ್ದ ಕೃಷಿ ಇಲಾಖೆಯ ಕೆ.ಎಂ.ಹರೀಶ್ ಕುಮಾರ್, ಸಂಘದ ತಾಲೂಕು ಘಟಕದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರೋಗ್ಯ ಇಲಾಖೆಯ ಟಿ.ಪಿ.ಅಮರೇಶ್ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಅಧ್ಯಕ್ಷರಾಗಿ ಆಯ್ಕೆಯಾದವರು ಹೊಂದಿದ್ದಾರೆ.