ಬೆಂಗಳೂರು: ಓದದೇ ಮೊಬೈಲ್ ನೋಡುತ್ತಿದ್ದ ಮಗನನ್ನು ಕಂಡು ಕೆರಳಿದ ತಂದೆ ಯೋರ್ವ, ನೀನು ಬದಕ್ಕಿದ್ದರು ಒಂದೇ, ಸತ್ತರು ಒಂದೆ ಎಂದು ಕ್ರಿಕೆಟ್ ಬ್ಯಾಟ್‌ನಿಂದ ತಲೆಗೆ ಹೊಡೆದು ತಂದೆಯೇ ಹತ್ಯೆಗೈದ ಘಟನೆ ಕುಮಾರಸ್ವಾಮಿ ಲೇಔಟ್ (bengaluru) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತೇಜಸ್ (14) ಮೃತಪಟ್ಟ ಬಾಲಕನಾಗಿದ್ದು, ರವಿಕುಮಾರ್ ಎನ್ನುವವರ ಹತ್ಯೆ ಆರೋಪಿ ತಂದೆ.
ಕಳೆದ 20 ದಿನಗಳಿಂದ ತೇಜಸ್ ಶಾಲೆಗೆ ಹೋಗದೇ ಪುಂಡರ ಜೊತೆ ತಿರುಗಾಡುತ್ತಿದ್ದ ರಾತ್ರಿ ಮನೆಗೆ ಬಂದು ಮೊಬೈಲ್‌ನಲ್ಲಿ ರೀಲ್ಸ್, ವೀಡಿಯೋ ಗೇಮ್ ಆಡುತ್ತಿದ್ದ ಅಲ್ಲದೇ ಹೊಸ ಮೊಬೈಲ್ ಕೊಡಿಸುವಂತೆ ತಂದೆಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ
ಘಟನೆ ನಡೆದ ದಿನ ಕುಡಿದು ಮನೆಗೆ ಬಂದಿದ್ದ ತಂದೆ ರವಿಕುಮಾರ್, ಮಗ ಶಾಲೆಗೆ ಹೋಗದೆ ಮೊಬೈಲ್ ನೋಡುತ್ತಿರುವುದನ್ನು ಕಂಡು ಕೋಪಗೊಂಡಿದ್ದು, ಕ್ರಿಕೆಟ್ ಬ್ಯಾಟ್‌ನಿಂದ ಆತನ ತಲೆಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನೀನು ಬದುಕಿದರು ಸತ್ತರು ಎರಡು ಒಂದೆ ಎಂಬಂತೆ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ತೇಜಸ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಂದೆ ರವಿಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.