ದೈನಂದಿನ ರಾಶಿ ಭವಿಷ್ಯ: ಶನಿವಾರ, ನವೆಂಬರ್ 16, 2024| astrology predictions
ಮೇಷ ರಾಶಿ: ಹವಾಮಾನ ವೈಪರೀತ್ಯ ದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾದೀತು. ಹಣಕಾಸಿನ ಸ್ಥಿತಿ ಉತ್ತಮ ವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಪ್ರಯತ್ನಿಸಿ.
ವೃಷಭ ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ಕೆಲಸ ಕಾರ್ಯಗಳು ಮಂದ ಪ್ರಗತಿಯಲ್ಲಿ ಸಾಗಿದರೂ ಗುರುವಿನ ಶುಭ ಸಂಚಾರದಿಂದಾಗಿ ಅಂತಿಮವಾಗಿ ಶುಭಫಲ ಕಾಣುವಿರಿ.
ಮಿಥುನ ರಾಶಿ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡದಿರಿ. ನಿಮಗೆ ಹಣಕಾಸಿನ ನೆರವು ದೊರೆಯುವುದು ಮತ್ತು ಕುಟುಂಬ ವರ್ಗದವರ ಸಹಕಾರವೂ ದೊರೆಯುವ ಯೋಗವಿದೆ. ದೂರದ ಬಂಧುಗಳ ಆಗಮನ
ಕಟಕ ರಾಶಿ: ಅನವಶ್ಯಕ ವಿಷಯಗಳನ್ನು ತಲೆಗೆ ಹಾಕಿಕೊಂಡು ಮಾನಸಿಕ ಗೊಂದಲ ಮಾಡಿಕೊಳ್ಳಬೇಡಿ. ಜ್ಞಾನಕಾರಕ ಗುರುವನ್ನು ಆರಾಧಿಸುವುದರಿಂದ ಒಳಿತಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.
ಸಿಂಹ ರಾಶಿ: ಎಲ್ಲರೂ ನಿಮ್ಮ ಮಾತನ್ನೇ ಕೇಳಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತನೆ ಮಾಡಿ. ಕೆಲವರಿಗೆ ಮನೆ ಬದಲಿಸುವ ಸಂಗತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ವ್ಯಾಪಾರ ವ್ಯವಹಾರಗಳಿಗೆ ಇದು ಸಕಾಲ ದಿನ.
ಕನ್ಯಾ ರಾಶಿ: ಕಠಿಣ ಗುರಿಯತ್ತ ಸಾಗುತ್ತಿರುವ ನೀವು ಹಿರಿಯರ ಮಾರ್ಗ ದರ್ಶನ ಪಡೆದು ಮುನ್ನಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮ ವಾಗಿರುತ್ತದೆ, ಕಿರಿಕಿರಿಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಏಕಾಂತ ಸ್ಥಳಕ್ಕೆ ಹೋಗಿ ಮನಸ್ಸಿನ ನೆಮ್ಮದಿ ಕಂಡುಕೊಳ್ಳಿ.
ತುಲಾ ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತಗೊಳಿಸಿ ದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ.
ವೃಶ್ಚಿಕ ರಾಶಿ: ಅಧಿಕ ಭಾವನೆಗಳು ನಿಮ್ಮ ದಿನವನ್ನು ನಾಶ ಮಾಡಬಹುದು. ವಿಶೇಷವಾಗಿ ನೀವು ನಿಮ್ಮ ಪ್ರೀತಿಪಾತ್ರರು ಇತರರೊಂದಿಗೆ ತುಂಬಾ ಸ್ನೇಹದಿಂದಿರುವುದನ್ನು ಕಂಡಾಗ, ಎಲ್ಲರಿಗೂ ಅಸುಯೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ.
ಧನಸ್ಸು ರಾಶಿ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಸಮಾಧಾನಕರವಲ್ಲದ ವಾತಾವರಣ. ಹಣ ವ್ಯರ್ಥ ಮಾಡದಿರಿ, ವಿದ್ಯಾರ್ಥಿಗಳಿಗೆ ವಿದ್ಯಾಲಾಭ ಉತ್ಸಾಹ ತರಲಿದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ.
ಮಕರ ರಾಶಿ: ಯಾವುದೇ ಕಾರಣಕ್ಕೂ ವಾದ ವಿವಾದಗಳಿಗೆ ಕಾರಣರಾಗದಿರಿ. ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಲಿದೆ. ಸಾಂಸಾರಿಕವಾಗಿ ನೆಮ್ಮದಿ, ಶಾಂತಿ ಸಮಾಧಾನ ತರಲಿದೆ. ನಿಂತ ಕೆಲಸಕಾರ್ಯಗಳನ್ನು ಚಾಲನೆಗೊಳಿಸಿರಿ. ವಾಹನ ಚಾಲನೆ ವೇಳೆ ಜಾಗ್ರತೆ ವಹಿಸಿ
ಕುಂಭ ರಾಶಿ: ಮುಂಗೋಪಿಗಳಾದ ನೀವು ಅದರಿಂದಾಗಿಯೇ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಯಾವುದಕ್ಕೂ ಮಿತಿ ಇರಲಿ, ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಯಶಸ್ಸು. ಕಾರ್ಮಿಕವರ್ಗದವರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸ ಉಂಟಾಗಬಹುದು. ಸರ್ಕಾರಿ ಕೆಲಸಗಳಿಗೆ ಅಲೆದಾಡುವ ಸಾಧ್ಯತೆ ಕಂಡುಬರುವುದು.
ಮೀನ ರಾಶಿ: ಸತತವಾಗಿ ದೇಹ ದಂಡನೆಯಿ೦ದಾಗಿ ಆರೋಗ್ಯದಲ್ಲಿ ವ್ಯತ್ಯಯ. ಪಿತ್ರಾರ್ಜಿತ
ಆಸ್ತಿ ದೊರಕುವ ಸಂಭವ ಕಂಡುಬರುವುದು. ದೇವತಾ ದರ್ಶನ ಭಾಗ್ಯವಿದೆ. ಮಕ್ಕಳೊಂದಿಗೆ ಸಂತಸದ ದಿನವಾಗಿರುವುದು. ಬಂಧು ಮಿತ್ರರ ಆಗಮನ ಸಾಧ್ಯತೆಯೂ ಕಂಡುಬರುವುದು.
ರಾಹುಕಾಲ: 09:00 ರಿಂದ 10:30
ಗುಳಿಕಕಾಲ: 06:00 ರಿಂದ 07:30
ಯಮಗಂಡಕಾಲ: 01:30 ರಿಂದ 03:00