ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ ಪೌರ್ಣಿಮೆ ಪ್ರಯುಕ್ತ ಇಂದು ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಅರ್ಚನೆಯನ್ನು ಸತ್ಯ ರಾಮಯ್ಯ ನೆರವೇರಿಸಿದರು. ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಅರ್ಚನಾ ಕಾರ್ಯದಲ್ಲಿ ನಾರಾಯಣ ಪ್ರಸಾದ್ ನೆರವೇರಿಸಿದರು.
ಸಂಜೆ ಶಿವ ಮತ್ತು ವಿಷ್ಣು ದೀಪಗಳ ಆರಾಧನೆ ಆಯೋಜಿಸಲಾಗಿದೆ.
ರಾತ್ರಿ ಕಾರ್ತೀಕ ದೀಪೋತ್ಸವದ ಅಂಗವಾಗಿ ಗ್ರಾಮದ ರಾಜ ಬೀದಿಯಲ್ಲಿ ತಮಿಳುನಾಡಿನ ನಾದಸ್ವರ ವಿದ್ವಾನ್ ತಂಡದಿಂದ ದೇವರ ಮರವಣಿಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಧರ್ಮದರ್ಶಿ ಹೆಚ್ಎಸ್.ಅಶ್ವಥ್ ನಾರಾಯಣ ಕುಮಾರ್ ತಿಳಿಸಿದ್ದಾರೆ.