ಗುರುವಾರ, ನವೆಂಬರ್ 14, 2024 ದೈನಂದಿನ ರಾಶಿ ಭವಿಷ್ಯ/ astrology predictions
ಮೇಷ ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ದೃಢ ನಿರ್ಧಾರಗಳ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ.
ವೃಷಭ ರಾಶಿ: ಯಾರೋ ಮಾಡಿದ ತಪ್ಪಿಗೆ ನಿಮಗೆ ಸಣ್ಣ ಶಿಕ್ಷೆ ಉಂಟಾಗುವ ಸಾಧ್ಯತೆ ಇದೆ. ಅತಿ ಎಚ್ಚರ. ಮುಂದೆ ಹೆಜ್ಜೆ ಇಡಿ. ನಿಮ್ಮ ಸಹಾಯವನ್ನು ಅರಸಿ ಬರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.
ಮಿಥುನ ರಾಶಿ: ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ನೆರವೇರಲಿದೆ. ವೃತ್ತಿಯಲ್ಲಿ ಕೆಲಸ ಬೇಸರಗಳು ಎದುರಾಗ ಬಹುದು. ಕುಗ್ಗದಿರಿ ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ.
ಕಟಕ ರಾಶಿ: ಸಣ್ಣ ತಪ್ಪಿನಿಂದಾಗಿ ಜೀವನ ಪರ್ಯಂತ ಯಾತನೆ ಅನುಭವಿಸಬೇಕಾಗಬಹುದು. ಜವಾಬ್ದಾರಿಗಳ ಉತ್ತಮ ನಿಭಾವಣೆಯಿಂದಾಗಿ
ಇತರರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.
ಸಿಂಹ ರಾಶಿ: ಮೇಲಿನವರ ಒತ್ತಡದಿಂದಾಗಿ ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರು ತ್ತದೆ.ತಾಳ್ಮೆಯಿಂದಿರಲು ಪ್ರಯತ್ನಿಸಿ. ನಿಮ್ಮ ತುಟಿಗಳಲ್ಲಿ ಕಿರುನಗೆ ಇರಲಿ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ.
ಕನ್ಯಾ ರಾಶಿ: ಹೊಸ ಅವಕಾಶವೊಂದು ಜೀವನದಲ್ಲಿ ಒದಗಿ ಬರಲಿದೆ. ಯಶಸ್ವಿಯಾಗಿ ಬಳಸಿಕೊಳ್ಳಿ. ಸದಾಕಾಲ ವ್ಯಾಪಾರ ವಹಿವಾ ಟುಗಳಲ್ಲೇ ಕಾರ್ಯನಿರತ ರಾಗಿರುತ್ತೀರಿ. ಕುಟುಂಬಸ್ಥರೊಂದಿಗೂ ಕಾಲ ಕಳೆಯಲು ಪ್ರಯತ್ನ ಮಾಡಿ.
ತುಲಾ ರಾಶಿ: ಕೌಟುಂಬಿಕ ಕಲಹ ಬೀದಿಗೆ ಬರಲಿದ್ದು, ಮಾತಿಗಿಂತ ಮೌನವಾಗಿರುವತ್ತ ಗಮನಿಸಿ.
ವೃಶ್ಚಿಕ ರಾಶಿ: ದೂರ ಪ್ರಯಾಣ ಯೋಗ ದಿಢೀರ್ ಒದಗಿ ಬರಲಿದೆ. ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಪರಿಶ್ರಮ ಕೂಡ ಮುಖ್ಯವಾಗುತ್ತದೆ.
ಧನಸ್ಸು ರಾಶಿ: ಹವಾಮಾನ ಬದಲಾವಣೆ ಯಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ನೀವು ಕೈಹಾಕುವ ಕೆಲಸಗಳು ಕಾರ್ಯಸಾಧ್ಯ ವಾಗಲಿದೆ. ಆದರೆ ಒತ್ತಡ ಜೀವನದಿಂದ ದೂರ ಇರಲು ಪ್ರಯತ್ನಿಸಿ.
ಮಕರ ರಾಶಿ: ಆತ್ಮೀಯರೊಬ್ಬರ ಅಗಲುವಿಕೆಯಿಂದ ಮಾನಸಿಕ ಆಘಾತ ಉಂಟಾಗುವ ಸಾಧ್ಯತೆ. ಉದ್ಯೋಗ ಗಳನ್ನು ಹುಡುಕುತ್ತಿರುವವರು ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು.
ಕುಂಭ ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ನಿಮ್ಮನ್ನು ಹುಡುಕಿ ಬರುವ ಅವಕಾಶ ಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಮಯವನ್ನು ಉತ್ತಮವಾಗಿ ಬಳಕೆ ಮಾಡಿ.
ಮೀನ ರಾಶಿ: ನಿಮ್ಮ ಮಾತೇ ಎಲ್ಲಡೆಯೂ ನಡೆಯಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತಿಸಿ. ಪ್ರಗತಿಯ ಕ್ಷೇತ್ರದಲ್ಲಿ ಹಲವು ಮಾರ್ಗಗಳು ತೆರೆದು ಕೊಳ್ಳುತ್ತವೆ ಮತ್ತು ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.
ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM
ಶ್ರೀ ಕ್ರೋಧಿನಾಮ ಸಂವತ್ಸರ. ದಕ್ಷಿಣಾಯನ.
ಋತು: ಶರದೃತು.
ಮಾಸ: ಕಾರ್ತಿಕ.
ಪಕ್ಷ: ಕೃಷ್ಣಪಕ್ಷ.
ತಿಥಿ: ತ್ರಯೋದಶಿ ತಿಥೌ ಉಪರಿ ಚತುರ್ದಶಿ.
ನಕ್ಷತ್ರ: ಅಶ್ವಿನಿ ನಕ್ಷತ್ರ.
ಯೋಗ: ಸಿದ್ಧಿ.
ಕರಣ: ತೈತುಲ.
ದಿನ ವಿಶೇಷ:- ವೈಕುಂಠ ಚತುರ್ದಶಿ.
ದಿನದ ವಿಶೇಷ ಮಕ್ಕಳ ದಿನಾಚರಣೆ.